No menu items!
15.2 C
Munich
Wednesday, April 29, 2026

ಪ್ರಧಾನಿಯಾಗಿ ಸುಳ್ಳು ಹೇಳುವುದು ತಪ್ಪಲ್ಲವೇ: ಸಚಿವ ಜಿ. ಪರಮೇಶ್ವರ್ ಪ್ರಶ್ನೆ

Must read

ಬೆಂಗಳೂರು : ಇನ್ನು ಒಂದು ದಿನದಲ್ಲಿ ಟಿಕೆಟ್ ಬಗ್ಗೆ ಇರುವ ಇಲ್ಲಾ ಗೊಂದಲಗಳೂ ಬಗೆಹರಿಯಲಿವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನು ಒಂದು ದಿನದಲ್ಲಿ ಟಿಕೆಟ್ ಬಗ್ಗೆ ಇರುವ ಇಲ್ಲಾ ಗೊಂದಲಗಳೂ ಬಗೆಹರಿಯಲಿವೆ. ಕೋಲಾರ , ಚಿಕ್ಕಬಳ್ಳಾಪುರ ವಿವಾದವನ್ನು ಹೈಕಮ್ಯಾಂಡ್ ಬಗೆಹರಿಸಲಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಟಿಕೆಟ್ ಹಂಚಿಕೆ ಮಾಡಲಾಗುವುದು ಎಂದರು.
ಇನ್ನೂ ಉದ್ಯೋಗ ಸೃಷ್ಟಿ ಮಾಡುತ್ತೇನೆಂದು ಹೇಳಿದ್ದ ಪ್ರಧಾನಿ ಮೋದಿ ಉದ್ಯೋಗ ಸೃಷ್ಟಿ ಮಾಡಿಲ್ಲ. ಪ್ರಧಾನಿಯಾಗಿ ಸುಳ್ಳು ಹೇಳುವುದು ತಪ್ಪಲ್ಲವೇ ಎಂದು ಪ್ರಶ್ನಿಸಿದರು.
ಶಿವರಾಜ್ ತಂಗಡಗಿಯವರ ಮೇಲೆ ಪ್ರಚೋದನಕಾರಿ ಭಾಷಣದ ಆರೋಪದ ಮೇಲೆ ಕ್ರಮ ಕೈಗೊಳ್ಳುವುದು ಚುನಾವಣಾ ಆಯೋಗದ ಕೆಲಸ. ಈ ಹೇಳಿಕೆಯಿಂದ ಗಲಭೆಯಾಗಬಹುದು ಎಂದು ಬಿಜೆಪಿಯವರು ಹೇಳಿದ್ದಾರೆ. ಗಲಭೆ ಅವರೇ ಮಾಡಿಸಬೇಕಷ್ಟೇ ಎಂದು ಪರಮೇಶ್ವರ್ ಹೇಳಿದರು.

- Advertisement -spot_img

More articles

- Advertisement -spot_img

Latest article