ಬಿಗ್ ಬಾಸ್ ಸ್ಪರ್ಧಿ ರೋಹನ್ ಗೌಡ ಬಂಧನ ! ಸಿಸಿಬಿ ತನಿಖೆ ಯಾಕೆ ಗೊತ್ತಾ ?

Must read

ಸ್ಯಾಂಡಲ್ ವುಡ್ ನಟ ಹಾಗೂ ಬಿಗ್ ಬಾಸ್ ಸ್ಪರ್ಧೆಯಾದ ರೋಹನ್ ಗೌಡ ಅವರ ಸ್ನೇಹಿತರ ಗುಂಪೊಂದು ನಿನ್ನೆ ರಾತ್ರಿ ಲೇ ಮರಿಡಿಯನ್ ಹೋಟೆಲ್ ನಲ್ಲಿರುವ ‘ಶುಗರ್ ಫ್ಯಾಕ್ಟರಿ’ ಎಂಬ ಹೆಸರಿನ ಬಾರ್ ರೆಸ್ಟೋರೆಂಟ್ ನಲ್ಲಿ ಪಾರ್ಟಿಯೊಂದನ್ನು ಆಯೋಜಿಸಿದ್ದರು ಅದರಲ್ಲಿ ರೋಹನ್ ಗೌಡ ಹಾಗೂ ಅವರ ಸ್ನೇಹಿತರ ಗುಂಪು ಅಬಕಾರಿ ಹಾಗೂ ಡಿಸ್ಕೋಥೆಕ್ ನಿಯಮಗಳನ್ನು ಉಲ್ಲಂಘಿಸಿ ಬಾರ್ ಹಾಗೂ ರೆಸ್ಟೋರೆಂಟ್ ನಡೆಸಿದ್ದ  ಹಾಗು  ಸಾರ್ವಜನಿಕರಿಗೆ ಮದ್ಯ ಹಾಗೂ ಊಟ ಸರಬರಾಜು ಮಾಡಿ ಅಕ್ರಮವಾಗಿ ಹಣ ಸಂಪಾದಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕ್ಷೀಪ್ರ ಕಾರ್ಯಾಚರಣೆ ಕೈಗೊಂಡಿದ್ದರು ಹಾಗೂ ನಿನ್ನೆ ರಾತ್ರಿ ರೋಹನ್ ಗೌಡ  ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ತನಿಖೆಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆಸ್ಯಾಂಡಲ್ ವುಡ್ ನಟ ಹಾಗೂ ಬಿಗ್ ಬಾಸ್ ಸ್ಫರ್ಧಿಯಾಗಿದ್ದ ರೋಹನ್ ಗೌಡ (37) ಸೇರಿ ಶೇಷಾದ್ರಿಪುರಂನ ನವೀದ್ (29) ಹಾಗೂ ಮತ್ತೀಕೆರೆಯ ಶಶಿಕುಮಾರ್ (41) ಬಂಧಿಸಲಾಗಿದೆ.

- Advertisement -spot_img

More articles

- Advertisement -spot_img

Latest article