No menu items!
18.8 C
Munich
Saturday, August 1, 2026

ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲ್ಲೋದು ಕಷ್ಟ ಇದೆ: ಸಿಎಂ ಇಬ್ರಾಹಿಂ

Must read

ಬೆಂಗಳೂರು: ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲ್ಲೋದು ಕಷ್ಟ ಇದೆ ಎಂದು ಜೆಡಿಎಸ್ ಉಚ್ಚಾಟಿತ ನಾಯಕ ಸಿಎಂ ಇಬ್ರಾಹಿಂ ಹೇಳಿದರು. ಈ ಕುರಿತು ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಮಂಡ್ಯದಲ್ಲಿ ಕುಮಾರಸ್ವಾಮಿಗೆಲ್ಲೋದು ಕಷ್ಟ ಇದೆ. ಅದಕ್ಕೆ ನಾನು ಕುಮಾರಸ್ವಾಮಿ ನಿಲ್ಲೋದು ಬೇಡ ಎಂದು ಹೇಳಿದೆ. ಅವರ ಆರೋಗ್ಯ ಸರಿಯಿಲ್ಲ. ಸೀಟು ಹಂಚಿಕೆಯ ವಿಚಾರದಲ್ಲಿ ನೀವು ಹೇಳಿದ್ದೇ ನಿಜ ಅಂತ ನನ್ನ ಬಳಿ ಜೆಡಿಎಸ್ ಅವರೇ ಮಾತನಾಡಿದ್ದಾರೆ. ಯಾರು ಮಾತಾಡಿದ್ದಾರೆ ಎಂದು ನಾನು ಹೇಳಲ್ಲ. ಕುಮಾರಸ್ವಾಮಿ ಮಾತಾಡಿಲ್ಲ. ಬೇರೆಯವರು ಮಾತಾಡಿದ್ದಾರೆ. ಚುನಾವಣೆ ಆದ ಮೇಲೆ ಎಲ್ಲವೂ ಬದಲಾವಣೆ ಆಗಲಿದೆ. ಜೆಡಿಎಸ್ ಸಭೆಯಲ್ಲೂ ನಾನು ಹೇಳಿದ್ದು ಸತ್ಯ ಅಂತ ಚರ್ಚೆ ಆಗಿದೆ ಎಂದು ಹೇಳಿದರು.
ಇನ್ನೂ ಜೆಡಿಎಸ್ ಪಕ್ಷದ ಬಗ್ಗೆ ನಾನೇನು ಹೇಳಿದ್ದೆನೋ ಅದು ಸತ್ಯವಾಗಿದೆ. ಕಾಂಗ್ರೆಸ್ ಅವರು 2-3 ಸೀಟು ಆದರೂ ಮುಸ್ಲಿಮರಿಗೆ ಕೊಡಬೇಕಿತ್ತು. 21% ಮತ ಇರೋರಿಗೆ ಕಡಿಮೆ ಸೀಟು ಕೊಟ್ಟಿದ್ದೀರಾ. 5% ಇರೋರಿಗೆ ಹೆಚ್ಚು ಸೀಟು ಕೊಡುತ್ತಿದ್ದೀರಾ. ವಿಧಿ ಇಲ್ಲದೆ ಕಾಂಗ್ರೆಸ್‌ಗೆ ಬೆಂಬಲ ಕೊಡುತ್ತಿದ್ದೇವೆ. ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ದರೆ 6 ಸ್ಥಾನ ಗೆಲ್ಲುತ್ತಿದ್ದೆವು. ಮೈಸೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ, ಬಿಜಾಪುರ, ತುಮಕೂರು ಗೆಲ್ಲುತ್ತಿದ್ದೆವು. ಮಂಡ್ಯಕೋಸ್ಕರ ಕಿತ್ತಾಟ ಮಾಡಿದ್ರಿ. ಸುಮಲತಾ ಏನು ಮಾಡುತ್ತಾರೋ ಗೊತ್ತಿಲ್ಲ. ಬಿಜೆಪಿಗೂ ಜೆಡಿಎಸ್‌ಗೂ ಸಂಬಂಧವೇ ಬರಲ್ಲ. ಮಂಡ್ಯದಲ್ಲಿ 2 ಲಕ್ಷ ವೋಟ್ ಜೆಡಿಎಸ್ ಕಳೆದುಕೊಂಡಿದೆ. ಒಕ್ಕಲಿಗರು ಬಿಜೆಪಿಗೆ ವೋಟ್ ಹಾಕಲ್ಲ. ಕುಮಾರಸ್ವಾಮಿಗೆ ಆರೋಗ್ಯ ಕೊಡಲಿ ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ. ದೇವೇಗೌಡರಿಗೆ ಈ ವಯಸ್ಸಿನಲ್ಲಿ ಇಂತಹ ಸ್ಥಿತಿ ಆಗಬಾರದು ಎಂದರು.

- Advertisement -spot_img

More articles

- Advertisement -spot_img

Latest article