No menu items!
12.5 C
Munich
Monday, May 4, 2026

ಮಮತಾ ಬ್ಯಾನರ್ಜಿ ಸೋಲಬೇಕು, ನಮ್ಮವರು ಚೆನ್ನಾಗಿರಬೇಕು ; ಈಶ್ವರನಲ್ಲಿ ಹರಕೆ ಹೊತ್ತ ದೇವ್ರಂಥ ಮನುಷ್ಯ ಪ್ರಥಮ್

Must read

ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಇಂದು (ಮೇ 4 ) ಮಹತ್ವದ ದಿನ. 5 ರಾಜ್ಯದಲ್ಲಿ ಫಲಿತಾಂಶ ಹೊರ ಬರುವ ದಿನ. ಈ ಹಿನ್ನೆಲೆ ಹಲವರಲ್ಲಿ ಇಂದು ಏನಾಗಬಹುದು ಎಂಬ ಕುತೂಹಲ ಇದೆ. ಪಕ್ಕದ ತಮಿಳುನಾಡಿನಲ್ಲಿ ”ವಿಜಯ” ಯಾತ್ರೆ ಶುರುವಾಗುವ ಎಲ್ಲ ಲಕ್ಷಣಗಳಿವೆ. ಕೇರಳದಲ್ಲಿ ಪಿಣರಾಯಿ ವಿಜಯನ್ ಸರ್ಕಾರಕ್ಕೆ ಹಿನ್ನೆಡೆಯಾಗಿದೆ. ಅಸ್ಸಾಂ ಮತ್ತು ಪುದುಚೇರಿಯಲ್ಲಿ ಕೇಸರಿ ಧ್ವಜ ಹಾರಾಡುತ್ತಿದೆ.

ಇನ್ನು ಎಲ್ಲರಿಗೆ ಗೊತ್ತಿರುವಂತೆ ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿಯ ಭದ್ರ ಕೋಟೆ. ದಶಕಗಳಿಂದ ದೀದಿ ಇಲ್ಲಿ ಸೋತಿಲ್ಲ. ಅದೆಷ್ಟೇ ಅಲೆ ಬಂದರು ಅಲುಗಾಡಿಲ್ಲ. ಆದರೆ ಈ ಬಾರಿ ಬಿಜೆಪಿ ದೀದಿಯ ಟಿಎಂಸಿಗೆ ಮಣ್ಣು ಮುಕ್ಕಿಸುವುದು ಬಹುತೇಕ ಖಚಿತ ಎನ್ನುವ ವಾತಾವರಣ ಇದೆ. ಆರಂಭಿಕ ಟ್ರೆಂಡ್‌ನಲ್ಲಿ ಬಂಗಾಳದಲ್ಲಿ ಬಿಜೆಪಿ ಮುನ್ನಡೆಯಲಿದೆ.

ಬಿಜೆಪಿಯ ಈ ಮುನ್ನಡೆ ಕನ್ನಡ ಚಿತ್ರರಂಗದ ದೇವ್ರಂಥಾ ಮನುಷ್ಯ ಮತ್ತು ಬಿಗ್ ಬಾಸ್ ವಿನ್ನರ್ ಪ್ರಥಮ್ ಅವರನ್ನು ಹಿರಿ ಹಿರಿ ಹಿಗ್ಗಿಸಿದೆ. ಹೀಗಾಗಿಯೇ ಮಮತಾ ಬ್ಯಾನರ್ಜಿ ಸೋಲಬೇಕೆಂದು ಈಶ್ವರನಲ್ಲಿ ಹರಕೆ ಹೊತ್ತಿದ್ದಾರೆ ಪ್ರಥಮ್.

ಹೌದು, ಸಾಮಾನ್ಯವಾಗಿ ಸಿನಿಮಾ ತಾರೆಯರು ರಾಜಕೀಯದ ಬಗ್ಗೆ ಅಥವಾ ಪಕ್ಷಗಳ ಗೆಲುವು-ಸೋಲಿನ ಬಗ್ಗೆ ಬಹಿರಂಗವಾಗಿ ಮಾತಾಡೋಕೆ ಹೋಗಲ್ಲ. ಅದರಲ್ಲೂ ಪರರಾಜ್ಯದ ಚುನಾವಣೆ ಬಗ್ಗೆ ತಲೆ ಕೆಡಿಸಿಕೊಳ್ಳೋದು ತುಂಬಾನೇ ಅಪರೂಪ. ಆದ್ರೆ, ಒಳ್ಳೆ ಹುಡುಗ ಪ್ರಥಮ್ ಮಾತ್ರ ಇದಕ್ಕೆ ತದ್ವಿರುದ್ಧ.

ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡೋ ಪ್ರಥಮ್, ಈಗ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ವಿರುದ್ಧ ಬಹಿರಂಗವಾಗಿ ಗುಡುಗಿದ್ದಾರೆ. ಮಮತಾ ಬ್ಯಾನರ್ಜಿ ಸೋಲಲಿ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಪ್ರಥಮ್ ನನಗೆ ಇಂತಹ ಮಕ್ಕಳಾಗ್ಬೇಕು, ನನ್ನ ಸಿನಿಮಾ ಗೆಲ್ಲಬೇಕು ಅಂತ ಯಾವತ್ತು ಹರಕೆ ಹೊತ್ತವನಲ್ಲ! ಆದರೆ ಪಶ್ಚಿಮ ಬಂಗಾಳದಲ್ಲಿ ಏನಾದ್ರೂ ಮಮತಾ ಬ್ಯಾನರ್ಜಿ ಪಕ್ಷ ಸೋತ್ರೆ ನೂರು ಜನರ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವೆ! ಸಮಾಜದಲ್ಲಿ ನನ್ನ ಗುರುತಿಗೆ ಸಿಗುವವರು ಕಷ್ಟದಲ್ಲಿದ್ದವರ ಶಕ್ತಿಮೀರಿ ಜೊತೆ ನಿಲ್ತೀನಿ ಅಂತ ಈಶ್ವರನಲ್ಲಿ ಪ್ರಾರ್ಥಿಸುವೆ ಎಂದಿದ್ದಾರೆ.

ಇಷ್ಟೇ ಅಲ್ಲ ನಾನು ರಾಜಕೀಯದಿಂದ ದೂರ. ನನ್ನ ದೇಶ ಬಾಂಗ್ಲಾ ವಲಸಿಗರಿಂದ ಮುಕ್ತರಾಗಬೇಕು ಎಂದು ಹೇಳಿರುವ ಪ್ರಥಮ್ ನನ್ನ ದೇಶ ಚೆನ್ನಾಗಿರಬೇಕು. ಇದೊಂದೇ ಈಶ್ವರನಲ್ಲಿ ಬೇಡಿಕೆ! ಈ ಬಾರಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಪಕ್ಷ ಸೋಲಲಿ..! ನಮ್ಮವರು ಚೆನ್ನಾಗಿರ್ಲಿ. ಖಂಡಿತಾ ಕಷ್ಟದಲ್ಲಿದ್ದವರ ಶಕ್ತಿ ಮೀರಿ ಸಹಾಯ ಮಾಡ್ತೀನಿ ಎಂದಿದ್ದಾರೆ.

ಮುಂದುವರೆದು ನಾವು ಕೊಳ್ಳೇಗಾಲದವರು! ಮನಸ್ಸಿಟ್ಟು ಪ್ರಾರ್ಥನೆ ಮಾಡಿದ್ರೆ ಈಶ್ವರ ಯಾವತ್ತು ಕೈಬಿಡಲ್ಲ! Result ಏನಾದ್ರೂ ಆಗ್ಲಿ….. #ಪಶ್ಚಿಮಬಂಗಾಳ ಮಾತ್ರ #ಮಮತಾಬ್ಯಾನರ್ಜಿ ಮುಕ್ತವಾಗಲಿ…ಎಂದು ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ಪ್ರಥಮ್.

- Advertisement -spot_img

More articles

- Advertisement -spot_img

Latest article