No menu items!
7.8 C
Munich
Thursday, April 30, 2026

ಮಾಜಿ ಸಚಿವ ಗೋವಿಂದ್ ಕರಜೋಳ ಗೆ ಟಿಕೆಟ್ ಘೋಷಣೆ

Must read

ಬೆಂಗಳೂರು: ಚಿತ್ರದುರ್ಗ ಲೋಕಸಭಾ ಕ್ಷೇತ್ರ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು, ಮಾಜಿ ಸಚಿವ ಗೋವಿಂದ್ ಕರಜೋಳ ಗೆ ಟಿಕೆಟ್ ನೀಡಿದೆ. ಹೌದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಅವರ ಬದಲಿಗೆ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ್ ಎಂ ಕಾರಜೋಳ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಕೇಂದ್ರ ಸಮಾಜ ಕಲ್ಯಾಣ ಮತ್ತು ಸಬಲೀಕರಣ ರಾಜ್ಯ ಸಚಿವರಾಗಿರುವ ನಾರಾಯಣಸ್ವಾಮಿ ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ ಹೀಗಾಗಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಪಕ್ಷದ ಮೂಲಗಳ ತಿಳಿಸಿವೆ.
ಚಿತ್ರದುರ್ಗ ಮೂಲದವರಲ್ಲದ ನಾರಾಯಣಸ್ವಾಮಿ ಈ ಹಿಂದೆ ಬೆಂಗಳೂರು ಸಮೀಪದ ಆನೇಕಲ್‌ನಿಂದ ಶಾಸಕರಾಗಿದ್ದರು.ಇನ್ನು ಒಟ್ಟು 28 ಕ್ಷೇತ್ರಗಳ ಪೈಕಿ ಬಿಜೆಪಿ ತಾನು ಸ್ಪರ್ಧಿಸಲಿರುವ ಎಲ್ಲಾ 25 ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಘೋಷಿಸಿದೆ.ಉಳಿದ ಮೂರು ಸ್ಥಾನಗಳಾದ ಮಂಡ್ಯ, ಹಾಸನ ಮತ್ತು ಕೋಲಾರದಲ್ಲಿ ಎನ್‌ಡಿಎ ಮೈತ್ರಿಕೂಟ ಪಕ್ಷವಾದ ಜೆಡಿಎಸ್ ಸ್ಪರ್ಧಿಸಲಿದೆ.

- Advertisement -spot_img

More articles

- Advertisement -spot_img

Latest article