No menu items!
7.8 C
Munich
Tuesday, May 12, 2026

ವಿಶ್ವಕಪ್ ಗೆ ಚಾನ್ಸ್ ಸಿಗದಿದ್ದಕ್ಕೆ ಬೇಸರಗೊಂಡ ರಾಯುಡು ಕ್ರಿಕೆಟಿಗೆ ನಿವೃತ್ತಿ…!

Must read

ಟೀಮ್ ಇಂಡಿಯಾದ ಕ್ರಿಕೆಟಿಗ ಅಂಬಟಿ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ.

ಆಂಧ್ರಪ್ರದೇಶದ ಅಂಬಟಿ ರಾಯುಡು ಭಾರತದ ಪರ 55 ಏಕದಿನ ಪಂದ್ಯಗಳನ್ನು ಆಡಿದ್ದರು. ಅದರಲ್ಲಿ ಮೂರು ಶತಕ, 10 ಅರ್ಧಶತಕದೊಂದಿಗೆ 47. 05  ಸರಾಸರಿಯಲ್ಲಿ 1694 ರನ್ ಗಳಿಸಿದ್ದಾರೆ. 6 ಟಿ-20 ಪಂದ್ಯಗಳಲ್ಲಿ 42 ರನ್ ಮಾತ್ರ ಕಲೆಹಾಕಿದ್ದಾರೆ. ಟೆಸ್ಟ್  ಕ್ರಿಕೆಟ್ ನಲ್ಲಿ ಸ್ಥಾನ ಅವಕಾಶ ಸಿಕ್ಕಿರಲಿಲ್ಲ.


2013 ರಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದ ಮೂಲಕ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.
ಅಂಬಟಿ ರಾಯುಡು ಈ ವರ್ಷ ರಾಂಚಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಆಡಿದ ಮ್ಯಾಚೇ ಕೊನೆಯ ಏಕದಿನ ಪಂದ್ಯ.
ಇನ್ನು ರಾಯುಡು ವಿಶ್ವಕಪ್ ನಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆರಂಭದಲ್ಲಿ ಚಾನ್ಸ್ ಸಿಕ್ಕಿರಲಿಲ್ಲ. ವಿಜಯ್ ಶಂಕರ್ ಆಯ್ಕೆಯಾಗಿದ್ದರು. ಆಗ ರಾಯುಡು ಬೇಸರ ವ್ಯಕ್ತಪಡಿಸಿದ್ದರು. ಇದೀಗ ಶಿಖರ್ ಧವನ್, ವಿಜಯ್ ಶಂಕರ್ ಟೂರ್ನಿಯಿಂದ ಹೊರ ನಡೆದ ಮೇಲೂ ರಾಯುಡು ಕಡೆಗಾಣಿಸಿ ರಿಷಭ್ ಪಂತ್ ಮತ್ತು ಮಯಾಂಕ್ ಅಗರ್ ವಾಲ್ ಗೆ ಮಣೆ ಹಾಕಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article