No menu items!
6.7 C
Munich
Tuesday, April 21, 2026

ಶಿಖರ್ ಧವನ್ ಬದಲಿಗೆ ತಂಡ ಸೇರಿದ್ದಾರೆ ರಿಷಬ್ ಪಂತ್ !? ಎನ್ ಹೇಳಿದ್ರು ಗೊತ್ತಾ?

Must read

ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡು ಹೊರಗುಳಿಯುವಂತಾಗಿದೆ.

ಅವರ ಬದಲಿಗೆ ರಿಷಬ್ ಪಂತ್ ತಂಡವನ್ನು ಸೇರಿಕೊಂಡಿದ್ದಾರೆ. ರಿಷಬ್ ಪಂತ್ ವಿಶ್ವಕಪ್ ತಂಡದಿಂದ ಹೊರಗುಳಿದಿದ್ದರು. ಆದರೆ, ಶಿಖರ್ ಧವನ್ ಗಾಯಗೊಂಡ ಹಿನ್ನೆಲೆಯಲ್ಲಿ ಅವರಿಗೆ ತಂಡವನ್ನು ಸೇರಿಕೊಳ್ಳುವಂತೆ ಬುಲಾವ್ ಬಂದಿತ್ತು.

ಆದರೆ, ರಿಷಬ್ ಲಂಡನ್ ಗೆ ತೆರಳಿದ್ದರೂ ಟೀಂ ಇಂಡಿಯಾದ ಭಾಗವಾಗಿರಲಿಲ್ಲ. ಶಿಖರ್ ಧವನ್ ಗಾಯದಿಂದ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಅವರು ವಿಶ್ವಕಪ್ ನಿಂದಲೇ ಹೊರಗುಳಿಯುವಂತಾಗಿದ್ದರಿಂದ ರಿಷಬ್ ಅಧಿಕೃತವಾಗಿ ತಂಡವನ್ನು ಸೇರಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ವಿಶ್ವಕಪ್ ತಂಡದಿಂದ ಹೊರಗುಳಿದ ಸಂದರ್ಭದಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡಲು ಗಮನವನ್ನು ಕೇಂದ್ರೀಕರಿಸಿದ್ದೆ.ಈಗ ಟೀಂ ಇಂಡಿಯಾಕ್ಕಾಗಿ ಆಡುತ್ತೇನೆ. ತಂಡವನ್ನು ಗೆಲ್ಲಿಸುವುದು ನನ್ನ ಕನಸಾಗಿದೆ ಎಂದು ಹೇಳಿದ್ದಾರೆ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article