No menu items!
12.4 C
Munich
Wednesday, April 29, 2026

ಸಲಾರ್ ನಂತರ ಪ್ರಭಾಸ್ ಗೆ ಪ್ರಶಾಂತ್ ನೀಲ್ ಪೌರಾಣಿಕ ಸಿನಿಮಾ!!

Must read

ನಿರ್ದೇಶಕ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಇನ್ನು ನಾಲ್ಕೈದು ವರ್ಷಕ್ಕೆ ಆಗುವಷ್ಟು ಬ್ಯುಸಿ ಇದ್ದಾರೆ. ಸದ್ಯ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿದ್ರೆ ಸಾಕು ಎನ್ನುವ ಒತ್ತಡವೂ ಅವರ ಮೇಲಿದೆ. ಹಾಗಿದ್ದರೂ ಹೊಸ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ಬಾಹುಬಲಿ ನಟನೊಂದಿಗೆ ‘ಸಲಾರ್’ ಮಾಡ್ತಿರುವ ಪ್ರಶಾಂತ್ ನೀಲ್ ಈ ಪ್ರಾಜೆಕ್ಟ್ ಮುಗಿಸಿ ಮತ್ತೊಮ್ಮೆ ಪ್ರಭಾಸ್ ಜೊತೆ ಚಿತ್ರ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಮಾಡಬೇಕಾಗಿದ್ದ ಚಿತ್ರವೇ ಬೇರೆ. ಆದರೆ ಅದಕ್ಕೂ ಮುಂಚೆ ಸಲಾರ್ ಆರಂಭಿಸಿದರು. ಈ ಮೊದಲು ಅಂದುಕೊಂಡಿದ್ದ ಚಿತ್ರವೂ ಮಾಡ್ತಾರೆ. ಅದಕ್ಕೆ ಸಮಯ ಬೇಕಾಗಿದೆ. ಈ ಪ್ರಾಜೆಕ್ಟ್‌ಗೆ ನಿರ್ಮಾಪಕ ಸಹ ಸಿದ್ದವಾಗಿದ್ದು, ಪೂರ್ವ ತಯಾರಿ ಮಾಡ್ತಿದ್ದಾರೆ. ಮುಂದೆ ಓದಿ…

ಬಾಹುಬಲಿ ಮುಗಿಸಿದ ಬಳಿಕ ಪ್ರಭಾಸ್ ಜೊತೆ ಅಂತಹದ್ದೇ ದೊಡ್ಡ ಚಿತ್ರ ಮಾಡಬೇಕು ಎಂದು ನಿರ್ಮಾಪಕ ದಿಲ್ ರಾಜು ನಿರ್ಧರಿಸಿದ್ದರು. ಈ ಇಬ್ಬರು ಜೊತೆಗೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸೇರಿದರು. ಈ ಕಾಂಬಿನೇಷನ್‌ನಲ್ಲಿ ಪೌರಾಣಿಕ ಚಿತ್ರದ ಮಾಡುವ ಚರ್ಚೆ ನಡೆದು, ಅದಕ್ಕೆ ಪ್ಲಾನ್ ಸಹ ಆಯಿತು. ಆದರೆ, ಪ್ರಭಾಸ್ ನಿರ್ಧಾರದಿಂದ ಆ ಪ್ರಾಜೆಕ್ಟ್‌ ಸ್ವಲ್ಪ ತಡವಾಗಬೇಕಾಗಿದೆ.

ಬಾಹುಬಲಿ ಚಿತ್ರಕ್ಕಾಗಿ ಅದಾಗಲೇ ಐದು ವರ್ಷ ಕೆಲಸ ಮಾಡಿದ್ದ ಪ್ರಭಾಸ್, ಮತ್ತೊಮ್ಮೆ ಮೆಗಾ ಚಿತ್ರ ಆರಂಭಿಸಿದ ಮತ್ತೆ ಕೆಲವು ವರ್ಷಗಳು ಕಳೆದು ಹೋಗುವುದು ಇಷ್ಟವಿರಲಿಲ್ಲ. ಹಾಗಾಗಿ, ಸದ್ಯಕ್ಕೆ ಕಮರ್ಷಿಯಲ್ ಸಿನಿಮಾ ಮಾಡೋಣ, ಪೌರಾಣಿಕ ಕಥೆಗೆ ಸಮಯ ತೆಗೆದುಕೊಳ್ಳೋಣ ಎಂದು ಸಲಹೆ ಕೊಟ್ಟರು. ಆಗಲೇ ಪ್ರಶಾಂತ್ ನೀಲ್ ಆರಂಭಿಸಿದ್ದ ಸಲಾರ್. ಮತ್ತೊಂದೆಡೆ ದಿಲ್ ರಾಜು ತಮ್ಮ ಕನಸಿನ ಚಿತ್ರಕ್ಕಾಗಿ ಪೂರ್ವ ಸಿದ್ದತೆಯಲ್ಲಿ ತೊಡಗಿಕೊಂಡರು.

ಈ ಹಿಂದೆ ಚರ್ಚಿಸಿದಂತೆ 25ನೇ ಚಿತ್ರ ಪ್ರಭಾಸ್ ಪಾಲಿಗೆ ಬಹಳ ವಿಶೇಷವಾಗಿಸಲು ದಿಲ್ ರಾಜು ಮತ್ತು ಪ್ರಶಾಂತ್ ನೀಲ್ ನಿರ್ಧರಿಸಿದ್ದಾರೆ. ತಾವು ಮೊದಲು ಅಂದುಕೊಂಡಂತೆ ಪೌರಾಣಿಕ ಕಥೆಯನ್ನು ಸ್ಕ್ರಿಪ್ಟ್ ಮಾಡಿ 25ನೇ ಸಿನಿಮಾ ಆಗಿಸಲು ತೀರ್ಮಾನಿಸಿದರು.

 

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article