Home ಎಲ್ಲೆಲ್ಲಿ ಏನೇನು.? ಸುರಪುರ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ: ರಾಜುಗೌಡಗೆ ಟಿಕೆಟ್

ಸುರಪುರ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ: ರಾಜುಗೌಡಗೆ ಟಿಕೆಟ್

0
ಸುರಪುರ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ: ರಾಜುಗೌಡಗೆ ಟಿಕೆಟ್

ಯಾದಗಿರಿ: ಕಳೆದ ವಿಧಾನಸಭೆಯಲ್ಲಿ ಸೋತಿದ್ದ ರಾಜುಗೌಡ ಅವರಿಗೆ ಮತ್ತೆ ಮಣೆ ಹಾಕಿದ್ದು, ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿದೆ. ರಾಜೂಗೌಡಗೆ ಟಿಕೆಟ್ ನೀಡಿದ್ದು, ಕಾಂಗ್ರೆಸ್ ದಿವಂಗತ ಶಾಸಕ ರಾಜ ವೆಂಕಟಪ್ಪ ನಾಯಕ ಪುತ್ರ ರಾಜಾ ವೇಣುಗೋಪಾಲ ನಾಯಕ ಅವರಿಗೆ ಈಗಾಗಲೆ ಟಿಕೆಟ್ ನೀಡಿದೆ.
ಕಳೆದ ವರ್ಷ ನಡೆದ ಕರ್ನಾಟಕ ವಿಧಾನಸಭಾ ಚುನಾವನೆಯಲ್ಲಿಯೂ ಕೂಡ ಬಿಜೆಪಿ ಅಭ್ಯರ್ಥಿಯಾಗಿ ರಾಜುಗೌಡ ಅವರು ಸ್ಪರ್ಧಿಸಿದಿದ್ದರು. ಆದರೆ, ರಾಜಾ ವೆಂಕಟಪ್ಪ ನಾಯಕ ವಿರುದ್ಧ ಸೋಲನುಭವಿಸಿದ್ದರು. ರಾಜಾ ವೆಂಕಟ್ಟಪ್ಪ ನಾಯಕ 1,12,922 ಮತಗಳನ್ನು ಪಡೆದುಕೊಂಡರೆ, ಅವರ ವಿರುದ್ಧ ಸ್ಪರ್ಧೆ ಮಾಡಿದ್ದ 87,746 ಮತಗಳನ್ನು ಪಡೆದಿದ್ದರು. ಇನ್ನು 20 ಸಾವಿರ ಮತಗಳಿಂದ ಸೋಲು ಅನುಭವಿಸಿದ್ದ ರಾಜುಗೌಡ ಅವರಿಗೆ ಉಪ ಚುನಾವಣೆಯಲ್ಲಿಯೂ ಬಿಜೆಪಿ ಮಣೆ ಹಾಕಿದೆ.