No menu items!
30.6 C
Munich
Wednesday, August 12, 2026

ಹಳೆಯ ದ್ವೇಷದ ಹಿನ್ನೆಲೆ: ಗ್ರಾ, ಪಂ, ಸದಸ್ಯನ ಭೀಕರ ಕೊಲೆ

Must read

ದೇವನಹಳ್ಳಿ: ಹಳೆಯ ದ್ವೇಷದ ಹಿನ್ನೆಲೆ ಗ್ರಾ, ಪಂ, ಸದಸ್ಯನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ನರಸಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯತಿ ಸದಸ್ಯ ಅಪಾಕ್ ಅಮಿರ್ ಖಾನ್ (45) ನನ್ನು ಲಾಂಗು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕಳೆದ ರಾತ್ರಿ ಘಟನೆ ನಡೆದಿದ್ದು ಇದೇ ಗ್ರಾಮದ ಮೆಹಬೂಬ್ ಎಂಬಾತ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.
ಅಮಿರ್ ಖಾನ್ ಗ್ರಾಮ ಪಂಚಾಯತಿ ಮುಂದೆ ಪೋನ್ನಲ್ಲಿ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಅಟ್ಯಾಕ್ ಮಾಡಿ ಕೊಲೆ ಮಾಡಲಾಗಿದೆ. ಕೊಲೆ ನಂತರ ಆರೋಪಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -spot_img

More articles

- Advertisement -spot_img

Latest article