ಹುಡುಗಿಯರು ಹೀಗೆ ಪ್ರೀತಿ ಸುಳಿಹು ಬಿಟ್ಟು ಕೊಡ್ತಾರೆ..!

0
199

ಮಹಿಳೆಯರು ಪುರುಷರನ್ನು ಗಮನಿಸುವ ವಿಧಾನವೇ ಸ್ವಲ್ಪ ಭಿನ್ನ. ತಾನು ಬಯಸುವ ಪುರುಷರನ್ನು ಅವರು ದುರುಗುಟ್ಟಿಕೊಂಡು ನೋಡದಿದ್ದರೂ ಅತ್ಯಂತ ಸೂಕ್ಷ್ಮವಾಗಿ ಪುರುಷರಿಗೆ ಅರ್ಥವಾಗದ ರೀತಿಯಲ್ಲಿ ಗಮನಿಸುತ್ತಿರುತ್ತಾರೆ. ಆದರೆ ನೀವು ಈ ವಿಷಯದಲ್ಲಿ ಗೊಂದಲಕ್ಕೊಳಗಾಗುವ ಅವಶ್ಯಕತೆ ಇಲ್ಲ. ಏಕೆಂದರೆ ನಾವು ಈ ಲೇಖನದಲ್ಲಿ ಈ ವಿಷಯದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಮಹಿಳೆಯರು ನಿಮ್ಮನ್ನು ಗಮನಿಸುತ್ತಿದ್ದಾರೆ ಎಂದು ತಿಳಿಸುವ ಕೆಲವು ಸುಳುಹುಗಳನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.
ಆ ಮೂಲಕ ನೀವು ನಿಮ್ಮನ್ನು ಯಾರಾದರೂ ಗಮನಿಸುತ್ತಿದ್ದಾರೆಯೇ ಎಂಬುದನ್ನು ಕಂಡುಹಿಡಿಯಬಹುದು.

ಸುಳುಹು ೧

ಆಕೆಯ ತುಟಿಯಂಚಿನಲ್ಲಿ ಮೂಡುವ ಎಳೆ ನಗು!

ನಿಮ್ಮೊಂದಿಗೆ ಸದಾ ಒಡನಾಟದಲ್ಲಿರುವ ಮಹಿಳೆ ನಿಮ್ಮ ಹತ್ತಿರ ಮಾತನಾಡುವಾಗ ಅಥವಾ ಪರರ ಬಳಿ ಏನಾದರೂ ಹೇಳುವ ಸಂದರ್ಭದಲ್ಲಿ, ನಿಮ್ಮನ್ನು ನೋಡಿ ಖುಷಿಯಿಂದ ಒಳ್ಳೆಯ ಕಿರುನಗೆ ಬೀರಿದಳೆಂದರೆ, ಅದು ನಿಮ್ಮ ಬಗ್ಗೆ ಆಕೆಯಲ್ಲಿ ವಿಶೇಷವಾದ ಆಸಕ್ತಿ ಇದೆ ಅಥವಾ ಆಕೆ ನಿಮ್ಮನ್ನು ಇಷ್ಟಪಡುತ್ತಿದ್ದಾಳೆ ಎಂದು ತಿಳಿದುಕೊಳ್ಳುವ ಮೊದಲನೆಯ ಸುಳುಹು!

ಸುಳುಹು ೨

ಅವಳು ನಿಮ್ಮನ್ನು ಹೀಗೆ ನೋಡುತ್ತಾಳಾ?

ಸರ್ವೇ ಸಾಮಾನ್ಯವಾಗಿ ಗಂಡಸರಿಗಿಂತ ಹೆಂಗಸರಿಗೆ ನಾಚಿಕೆ ಜಾಸ್ತಿ. ಇದು ಆಕೆ ನಿಮ್ಮನ್ನು ನೋಡುವ ವಿಷಯದಲ್ಲೂ ಅಷ್ಟೇ. ಪುರುಷರಾದರೆ ಯಾರ ಹತ್ತಿರವಾದರೂ ಮಾತನಾಡಬೇಕಾದರೆ ಅಥವಾ ಅವರನ್ನು ನೋಡಬೇಕಾದರೆ ಯಾವುದೇ ಹಿಂಜರಿಕೆಯಿಲ್ಲದೆ ನೇರವಾಗಿ, ಕೆಲವೊಮ್ಮೆ ಕಣ್ಣು ಮಿಟುಕಿಸದೆಯೂ ಬಿಟ್ಟ ಕಣ್ಣು ಬಿಟ್ಟ ಹಾಗೆ ಮಾತನಾಡುತ್ತಿರುತ್ತಾರೆ. ಆದರೆ ಮಹಿಳೆಯರು ಹಾಗಲ್ಲ. ಒಬ್ಬ ಮಹಿಳೆ ಪುರುಷನನ್ನು ಗಮನಿಸುವ ವಿಧಾನದಲ್ಲಿ ಆಕೆ ಅನುಸರಿಸುವ ತಂತ್ರದಲ್ಲಿ ಇದೂ ಒಂದು. ಆಕೆ ತನ್ನ ಕಣ್ಣುಗಳನ್ನು ಒಮ್ಮೆ ಆತನ ಮೇಲೆ ಹಾಯಿಸಿ ಪುನಃ ಬೇರೆಡೆಗೆ ಕಣ್ಣಿನ ದೃಷ್ಟಿ ಚಲಿಸುತ್ತಾಳೆ ಮತ್ತು ಇದೇ ರೀತಿ ಮತ್ತೆ ಮತ್ತೆ ಮಾಡುತ್ತಾಳೆ! ಇದರ ಅರ್ಥ ಆಕೆ ನಿಮ್ಮ ಜೊತೆ ಕಣ್ಣುಗಳಲ್ಲಿ ಮಾತನಾಡಲು ಇಷ್ಟಪಡುತ್ತಿದ್ದಾಳೆ‌. ಆದರೆ, ಹಾಗೆ ಮಾಡಲು ನಾಚಿಕೆ ಪಡುತ್ತಿದ್ದಾಳೆ ಎಂದು ಅರ್ಥ. ಇದು ಪುರುಷರು ಮಹಿಳೆಯರ ಬಗ್ಗೆ ಅರ್ಥ ಮಾಡಿಕೊಳ್ಳಲು ಸಹಕರಿಸುವ ಎರಡನೇ ಸುಳುಹು!

ಸುಳುಹು ೩

ವಾರೆನೋಟದಲಿ ಅವಳ ಫೋಕಸ್ಸು ಜಾಸ್ತಿ!

ಒಬ್ಬ ಮಹಿಳೆ ತಾನು ಇಷ್ಟಪಡುವ ಪುರುಷನನ್ನು ಗಮನಿಸಲು ಬಳಸುವ ಇನ್ನೊಂದು ಸೂಕ್ಷ್ಮ ವಿಧಾನ ಇದು. ಆಕೆ ಯಾವುದಾದರೂ ಕಡೆ ಬಚ್ಚಿಟ್ಟುಕೊಂಡು ನಿಮ್ಮನ್ನು ರಹಸ್ಯವಾಗಿ ಗಮನಿಸಬಹುದು ಅಥವಾ ನಿಮ್ಮ ಪಕ್ಕದಲ್ಲಿಯೇ ಇದ್ದು ನಿಮಗೆ ಗೊತ್ತಾಗದ ರೀತಿಯಲ್ಲಿ ವಾರೆ ನೋಟದಿಂದ ಕದ್ದುಮುಚ್ಚಿ ನಿಮ್ಮನ್ನು ಗಮನಿಸಬಹುದು. ಇದು ನೀವು ಸಹಜವಾಗಿ ಹೇಗೆ ವರ್ತಿಸುವಿರಿ, ಏನು ಮಾಡುವಿರಿ ಎಂದು ತಿಳಿದುಕೊಳ್ಳಲು ಆಕೆ ಅನುಸರಿಸುವ ತಂತ್ರ‌. ಒಂದು ವೇಳೆ ಇಂತಹ ಸಂದರ್ಭ ನಿಮಗೆ ಆಗಾಗ ಪುನಾರವರ್ತಿತವಾದರೆ, ಅಲ್ಲಿಗೆ ನಿಮ್ಮ ಮತ್ತು ಆಕೆಯ ಮಧ್ಯೆ ಏನೋ ವಿಶೇಷವಾದದ್ದು ನಡೆಯುತ್ತಿದೆ ಎಂದೇ ಅರ್ಥ. ಇದು ನಿಮಗೆ ನಾವು ಕೊಡುತ್ತಿರುವ ಮೂರನೇ ಸುಳುಹು.

ಸುಳುಹು ೪

ಅವಳಿಗೆ ಇಷ್ಟೆಲ್ಲಾ ವಿಷಯಗಳು ನೆನಪಿದೆಯಾ?

ಒಬ್ಬ ಹುಡುಗಿ ನಿಮ್ಮ ಪ್ರತಿಯೊಂದು ಚಿಕ್ಕ ಪುಟ್ಟ ವಿಷಯಗಳ ಬಗ್ಗೆಯೂ ಆಸಕ್ತಿ ವಹಿಸಿ ಅದನ್ನು ಬಹಳ ಚೆನ್ನಾಗಿ ನೆನಪಿನಲ್ಲಿಟ್ಟುಕೊಂಡಿದ್ದಾಳೆ ಎಂದು ನಿಮಗನ್ನಿಸಿದರೆ, ಖಂಡಿತ ಆಕೆಗೆ ನಿಮ್ಮ ಮೇಲೆ ಒಲವಿದೆ ಎಂದರ್ಥ. ಇದು ನಾಲ್ಕನೇ ಸುಳುಹು.

ಸುಳುಹು ೫

ಆಕೆಯಷ್ಟೇ ಅಲ್ಲ, ಆಕೆಯ ಸ್ನೇಹಿತರೂ ಹೀಗೆ ಮಾಡುತ್ತಾರಾ?

ಆಕೆ ನಿಮ್ಮನ್ನು ಇಷ್ಟ ಪಡುತ್ತಿದ್ದರೆ ಮತ್ತು ನಿಮ್ಮನ್ನು ಪದೇಪದೇ ಗಮನಿಸುತ್ತಿದ್ದರೆ, ನಿಮ್ಮ ಬಹುತೇಕ ವಿಷಯಗಳು ಅವಳಿಗೆ ತಿಳಿದಿದೆ ಎಂದರ್ಥ. ಒಂದು ವೇಳೆ ಆಕೆ ತನ್ನ ಸ್ನೇಹಿತರೊಂದಿಗೆ ನಿಮ್ಮ ಕುರಿತು ಮಾತನಾಡಿದರೆ ಅಥವಾ ಚರ್ಚೆ ಮಾಡಿದರೆ ಆಕೆ ನಿಮ್ಮನ್ನು ನೋಡಿದಾಗ ಅವಳ ಸ್ನೇಹಿತರು ಕೂಡ ನಿಮ್ಮನ್ನು ವಿಶೇಷವಾಗಿ ಗಮನಿಸಬಹುದು. ಇದು ಕೂಡ ಆಕೆಗೆ ನಿಮ್ಮ ಮೇಲೆ ಆಸಕ್ತಿಯಿದೆ ಎಂದು ತೋರಿಸುವ ಬಗೆ. ಇದು ನಿಮ್ಮ ಮತ್ತು ಆಕೆಯ ನಡುವೆ ಏನೋ ಇದೆ ಎಂಬುದನ್ನು ತಿಳಿಸುವ ಐದನೇ ಸುಳುಹು.

ನಿಮಗೆ ಇಂತಹ ಅನುಭವ ಆಗಿದೆಯಾ? ಈ ಐದು ಸುಳುಹುಗಳನ್ನು ಓದಿದ ಮೇಲೆ ನಿಮಗೆ ಪ್ರೀತಿ ಹುಟ್ಟಿದ ಘಳಿಗೆಯ ಕುರಿತು ನೆನಪಾದರೆ ನಿಮ್ಮ ಪ್ರೇಮಕಥೆಯನ್ನು 250 ಪದಗಳಲ್ಲಿ ಬರೆದು ನಮಗೆ ಕಳುಹಿಸಿಕೊಡಿ.

LEAVE A REPLY

Please enter your comment!
Please enter your name here