No menu items!
31.5 C
Munich
Saturday, July 25, 2026

ಸಲ್ಲು ನಿಂಗ್ ವಯಸ್ಸಾಯ್ತು ; ನೀಟ್ ವಿವಾದ, ಅನಾರೋಗ್ಯದ ವದಂತಿ- ಭಾಯ್ ಜಾನ್ ಕೌಂಟರ್ ಯಾರಿಗೆ ?

Must read

ಬಾಲಿವುಡ್‌ನ ‘ದಬಾಂಗ್’ ಸಲ್ಮಾನ್ ಖಾನ್ ಮತ್ತೆ ಸುದ್ದಿಮನೆಯ ಕೇಂದ್ರ ಬಿಂದಜ ಆಗಿದ್ದಾರೆ. ಒಂದೆಡೆ ತಮ್ಮ ಹೇಳಿಕೆಯಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗ್ತಿರೋ ಸಲ್ಲು ಭಾಯ್, ಈಗ ಸಡನ್ ಆಗಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರೋ ಒಂದು ನಿಗೂಢ ಪೋಸ್ಟ್ ಇಡೀ ಇಂಟರ್ನೆಟ್ ಗೆ ಬೆಂಕಿ ಹೊತ್ತಿಸಿದೆ. ತಮ್ಮನ್ನು ಸತತವಾಗಿ ಟಾರ್ಗೆಟ್ ಮಾಡ್ತಿದ್ದ ಟ್ರೋಲರ್‌ಗಳಿಗೆ ಸಲ್ಮಾನ್ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಇನ್‌ಡೈರೆಕ್ಟ್ ಆಗಿ ಕೌಂಟರ್ ಕೊಟ್ಟಿದ್ದಾರೆ ಅಂತ ನೆಟ್ಟಿಗರು ಟಾಕ್ ಶುರುಮಾಡಿದ್ದಾರೆ.

ನಿಜ ಹೇಳ್ಬೇಕಂದ್ರೆ, ಕಳೆದ ಎರಡು ದಿನಗಳಿಂದ ಸಲ್ಮಾನ್ ಖಾನ್ ಅವರ ಇನ್‌ಸ್ಟಾಗ್ರಾಮ್ ಕಾಮೆಂಟ್ ಬಾಕ್ಸ್‌ನಲ್ಲಿ ಟ್ರೋಲ್‌ಗಳ ಸುರಿಮಳೆಯೇ ಆಗ್ತಿತ್ತು. ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿರೋ ನೀಟ್ (NEET) ಪೇಪರ್ ಲೀಕ್ ಅಕ್ರಮ ಖಂಡಿಸಿ ಬೀದಿಗಿಳಿದು ಪ್ರತಿಭಟನೆ ನಡೆಸ್ತಿದ್ದ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದ ಸಲ್ಲು, ಪ್ರಧಾನಿ ನರೇಂದ್ರ ಮೋದಿ ಅವರು ಈ ಅಕ್ರಮದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ, ಹಾಗಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಿಲ್ಲಿಸಿ ಸುರಕ್ಷಿತವಾಗಿ ಮನೆಗೆ ಮರಳಬೇಕು ಎಂದು ಮನವಿ ಮಾಡಿದ್ದರು.

ಆದರೆ ಸಲ್ಮಾನ್ ನೀಡಿದ ಈ ಉಚಿತ ಸಲಹೆ ಸೋಶಿಯಲ್ ಮೀಡಿಯಾ ಮಂದಿಗೆ ಕಿಂಚಿತ್ತೂ ಇಷ್ಟವಾಗಲಿಲ್ಲ! ವಿದ್ಯಾರ್ಥಿಗಳ ನೋವು ನಿಮಗೇನು ಗೊತ್ತು? ನಮ್ ಹೋರಾಟವನ್ನು ಹತ್ತಿಕ್ಕಲು ಬರಬೇಡಿ ಎಂದು ನೆಟ್ಟಿಗರು ಸಲ್ಲು ಭಾಯ್ ವಿರುದ್ಧ ಮುಗಿಬಿದ್ದು ಕ್ಲಾಸ್ ತೆಗೆದುಕೊಳ್ಳಲು ಶುರುಮಾಡಿದ್ದರು. ಕಳೆದ ಎರಡು ದಿನಗಳಿಂದ ಈ ವಿಚಾರದಲ್ಲೇ ಸಲ್ಮಾನ್ ಸಖತ್ ಹೆಡ್‌ಲೈನ್ಸ್‌ನಲ್ಲಿದ್ದರು ಮತ್ತು ಟ್ರೋಲರ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಹೀಗೆ ತಮ್ಮ ವಿರುದ್ಧ ಹಬ್ಬಿದ್ದ ಆಕ್ರೋಶ ಹಾಗೂ ಟ್ರೋಲ್‌ಗಳ ಮಹಾಪೂರಕ್ಕೆ ಸಲ್ಮಾನ್ ಖಾನ್ ಶನಿವಾರ ತಡರಾತ್ರಿ ಕೊಟ್ಟ ರಿಪ್ಲೈ ಮಾತ್ರ ಬೇರೆನೇ ಲೆವೆಲ್! ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸಾಲು ಸಾಲು ಪೋಸ್ಟ್‌ಗಳನ್ನು ಹಂಚಿಕೊಂಡಿರೋ ಸಲ್ಮಾನ್, ತಮ್ಮ ಅಲ್ಟಿಮೇಟ್ ಫಿಟ್‌ನೆಸ್ ಹಾಗೂ ಕಿಲ್ಲರ್ ಲುಕ್ಸ್ ಪ್ರದರ್ಶಿಸುವ ಮೂಲಕ ಟ್ರೋಲರ್‌ಗಳ ಬಾಯಿ ಮುಚ್ಚಿಸಿದ್ದಾರೆ. ವಯಸ್ಸು ಅನ್ನೋದು ಬರಿ ನಂಬರ್ ಅಷ್ಟೇ ಅನ್ನೋದನ್ನು 60ರ ಸಮೀಪವಿರುವ ಸಲ್ಲು ಮತ್ತೊಮ್ಮೆ ಇಡೀ ಜಗತ್ತಿಗೆ ಸಾಬೀತುಪಡಿಸಿದ್ದಾರೆ.

ಅಂದಹಾಗೆ, ಸಲ್ಮಾನ್ ಖಾನ್ ಶೇರ್ ಮಾಡಿರೋ ಈ ನಿಗೂಢ ಪೋಸ್ಟ್‌ನಲ್ಲಿ ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸಿಲ್ಲ. ಆದರೂ, ತಮ್ಮ ಇತ್ತೀಚಿನ ನೀಟ್ ಪ್ರತಿಭಟನೆಯ ಹೇಳಿಕೆಗೆ ವ್ಯಕ್ತವಾದ ತೀವ್ರ ಟೀಕೆಗಳು ಮತ್ತು ಟ್ರೋಲ್‌ಗಳಿಗೇ ಸಲ್ಮಾನ್ ಈ ಪೋಸ್ಟ್ ಮೂಲಕ ಸೈಲೆಂಟ್ ಆಗಿ ಟಾಂಗ್ ಕೊಟ್ಟಿದ್ದಾರೆ ಎಂದು ಅವರ ಅಭಿಮಾನಿಗಳು ಹಾಗೂ ಸೋಶಿಯಲ್ ಮೀಡಿಯಾ ಬಳಕೆದಾರರು ತಕ್ಷಣವೇ ಡಿಫೈನ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಅವರ ಈ ಹೊಸ ಲುಕ್ ಹಾಗೂ ಬಾಡಿ ಬಿಲ್ಡಿಂಗ್ ಫೋಟೋಗಳನ್ನು ನೋಡಿ ಅಭಿಮಾನಿಗಳಂತೂ ಶೋಕ್ ಆಗಿದ್ದಾರೆ. ‘ಮಾತೃಭೂಮಿ’ ಚಿತ್ರದ ಈ ನಟ ಇಷ್ಟು ವಯಸ್ಸಾದ್ರೂ ತಮ್ಮ ದೇಹದಂಡನೆಯನ್ನು ಬಿಡದೆ ಇಷ್ಟೊಂದು ಫಿಟ್‌ ಆಗಿರುವುದನ್ನು ಕಂಡು ಬಾಲಿವುಡ್ ಮಂದಿ ದಂಗಾಗಿದ್ದಾರೆ. ಫೋಟೋಗಳು ಅಪ್ಲೋಡ್ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುಬಂದಿದ್ದು, ಇಂಟರ್ನೆಟ್ ಸಂಪೂರ್ಣ ಶೇಕ್ ಆಗಿದೆ.

ಒಟ್ಟಿನಲ್ಲಿ, ತಮ್ಮ ಮಾತುಗಳ ಮೇಲೆ ಎಷ್ಟೇ ವಿವಾದಗಳು ಬಂದರೂ, ಸೋಶಿಯಲ್ ಮೀಡಿಯಾದಲ್ಲಿ ಎಷ್ಟೇ ಟ್ರೋಲ್ ಮಾಡಿದರೂ ತಮ್ಮ ಹವಾ ಮಾತ್ರ ಕಮ್ಮಿಯಾಗಲ್ಲ ಅನ್ನೋದನ್ನು ಸಲ್ಮಾನ್ ಖಾನ್ ಮತ್ತೊಮ್ಮೆ ನಿರೂಪಿಸಿದ್ದಾರೆ. ಮಾತುಗಳಿಗಿಂತ ತಮ್ಮ ಸೈಲೆಂಟ್ ಆ್ಯಕ್ಷನ್ ಹಾಗೂ ಸಿಕ್ಸ್ ಪ್ಯಾಕ್ ಲುಕ್‌ನಿಂದಲೇ ಟ್ರೋಲರ್‌ಗಳ ಧ್ವನಿ ಅಡಗಿಸಿರೋ ಸಲ್ಲು ಭಾಯ್ ಸ್ವ್ಯಾಗ್ ಈಗ ಬಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ!

- Advertisement -spot_img

More articles

- Advertisement -spot_img

Latest article