No menu items!
11.1 C
Munich
Wednesday, April 29, 2026

ಆಕ್ಸಿಡೆಂಟ್ ಆಯ್ತು..! ಸಚಿವರಿಗೆ ಫೋನ್ ಹೋಯ್ತು..! ಮುಂದೇನಾಯ್ತು ಗೊತ್ತಾ..?

Must read

ಮೊನ್ನೆ ಬೆಂಗಳೂರಿನಲ್ಲೊಂದು ಮದುವೆ ಇತ್ತು. ಹುಡುಗಿಯ ಕಡೆಯವ್ರು ಮಂಗಳೂರಿನವ್ರು. ಹಾಗಾಗಿ ಒಂದು ಬಸ್ಸಿನಷ್ಟು ಜನ ಮದುವೆ ದಿಬ್ಬಣದಲ್ಲಿ ಬೆಂಗಳೂರಿಗೆ ಬಂದು, ವಧುವರರಿಗೆ ಶುಭ ಹಾರೈಸಿದ್ರು. ಮತ್ತೆ ಸಂಜೆ ಅದೇ ಬಸ್ಸಲ್ಲಿ ವಾಪಸ್ ಹೊರಟ್ರು..! ಬಸ್ಸಿನಲ್ಲಿದ್ದವರೆಲ್ಲಾ ರಾತ್ರಿ 2 ಗಂಟೆಯ ಹೊತ್ತಿಗೆ ಗಾಢ ನಿದ್ರೆಯಲ್ಲಿದ್ರು. ಬಸ್ ಚಾಲಕನಿಗೂ ಕಣ್ಣು ಕುಗರೋಕೆ ಶುರು ಆಯ್ತು. ನಿದ್ದೆ ತಡೆಯಲಾಸಾಧ್ಯವಾದಾಗ ಒಂದು ಸಲ ಕಣ್ಮುಚ್ಚಿಬಿಟ್ಟ..! ಅಷ್ಟೆ ಬಸ್ ಬಜತ್ತೂರು ಬಳಿ ಸೈಡಿಗೆ ಪಲ್ಟಿ ಹೊಡೆದುಬಿಡ್ತು..! ಇನ್ನೇನು ಒಂದೆರೆಡು ಗಂಟೆಯಲ್ಲಿ ಊರು ಸೇರಬೇಕಾದವ್ರು ಆಸ್ಪತ್ರೆಗೆ ಸೇರಬೇಕಾಯ್ತು..! ಹತ್ತಿರದಲ್ಲಿದ್ದ ಆಸ್ಪತ್ರೆಗಳಿಗೆ ಗಾಯಗೊಂಡವರನ್ನು ಸೇರಿಸಲಾಯ್ತು..! ಆದ್ರೆ ಆಸ್ಪತ್ರೆಗಳಿಗೆ ಆ ತಡರಾತ್ರಿಯಲ್ಲಿ ಚಿಕೆತ್ಸೆ ಕೊಡೋದು ಅಷ್ಟು ಸುಲಭವಾಗಲಿಲ್ಲ..! ವೈದ್ಯರ ಕೊರತೆ ಇತ್ತು, ದಾದಿಯರ ಸಂಖ್ಯೆ ಕಮ್ಮಿ ಇತ್ತು..! ಮದುವೆಯಾದ ಹುಡುಗಿಯ ಅಣ್ಣ ರಘು ಅವರಿಗೆ ಬೇರೇನು ಮಾಡಬೇಕೋ ಗೊತ್ತಾಗಲಿಲ್ಲ..! ತಕ್ಷಣ ಆರೋಗ್ಯ ಸಚಿವ ಯು.ಟಿ.ಖಾದರ್ ಅವರಿಗೆ ಫೋನ್ ಮಾಡಿ, ಸರ್ ಹೀಗಾಗಿದೆ, ದಯವಿಟ್ಟು ಏನಾದ್ರೂ ವ್ಯವಸ್ಥೆ ಮಾಡಿ ಅಂದ್ರು..! ಸಚಿವರಿಗೆ ಫೋನ್ ಮಾಡಿದ ಅರ್ಧ ಗಂಟೆಯೊಳಗೆ ಮಂಗಳೂರಿನ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಆಸ್ಪತ್ರೆಯಲ್ಲಿ ಹಾಜರಾದ್ರು..! ಚಿಕಿತ್ಸೆ ಕಾರ್ಯ ಇದ್ದಕ್ಕಿದ್ದ ಹಾಗೆ ವೇಗ ಪಡೆದುಕೊಳ್ತು. ಎಲ್ಲೆಲ್ಲೋ ಇದ್ದ ವೈದ್ಯರು ಎದ್ದುಬಿದ್ದು ಆಸ್ಪತ್ರೆಗೆ ಬಂದ್ರು..! ಈಗ ಅಷ್ಟೂ ಜನ ರೋಗಿಗಳು ನಿಧಾನವಾಗಿ ಚೇತರಿಸಿಕೊಳ್ತಿದ್ದಾರೆ..!
ಒಬ್ಬ ಜನಸಾಮಾನ್ಯ ಕರೆ ಮಾಡಿದ್ರೆ ಒಬ್ಬ ಸಚಿವರಾದವ್ರು ಇಷ್ಟು ವೇಗವಾಗಿ ಪ್ರತಿಕ್ರಿಯಿಸೋದು ನಿಜಕ್ಕೂ ಶ್ಲಾಘನೀಯ..! ಯು.ಟಿ.ಖಾದರ್ ಮತ್ತೊಮ್ಮೆ ತಾವು ಜನರ ಸಚಿವ ಅನ್ನೋದನ್ನು ನಿರೂಪಿಸಿದ್ದಾರೆ..! ಅವರ ಒಳ್ಳೆಯ ಕೆಲಸಗಳು ಹೀಗೇ ಮುಂದುವರೆಯಲಿ..!

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video

ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!

20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article