No menu items!
13.7 C
Munich
Wednesday, May 20, 2026

ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ಸಾಧ್ಯ ಇಲ್ಲ, ಅದು ಅವರ ಭ್ರಮೆ !

Must read

ಬೆಂಗಳೂರು: ಯಾವುದೇ ಕಾರಣಕ್ಕೂ ಸರ್ಕಾರವನ್ನು ಆಪರೇಷನ್ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ ಅವರ ಆಪರೇಷನ್ ಸುಳಿವಿಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೇ ನೀಡಿದ ಅವರು, ಅವರು ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಈ ಹಿಂದೆ ಆಪರೇಷನ್ ಮಾಡಲು ಪ್ರಯತ್ನ ಪಟ್ಟು ವಿಫಲರಾಗಿದ್ದಾರೆ. ಈಗಲೂ ಪ್ರಯತ್ನ ಮಾಡುತ್ತಾನೇ ಇದ್ದಾರೆ. ಆದರೆ ಇದು ಸಾಧ್ಯವಿಲ್ಲ ಎಂದಿದ್ದಾರೆ. ಅದು ಅವರ ಭ್ರಮೆ. ಆಪರೇಷನ್ ಕಮಲ ಸಾಧ್ಯ ಇಲ್ಲ. ಅವರು ಪಾರ್ಲಿಮೆಂಟ್ ಸೋಲ್ತಾ ಇದ್ದಾರೆ.
ಎನ್ ಡಿಎ ಸೋಲ್ತಾ ಇದೆ. ಅವರು ಪ್ರಯತ್ನ ಮಾಡಿ ವಿಫಲ ಆಗಿದ್ದಾರೆ. ಕಳೆದ ಒಂದು ವರ್ಷದಿಂದ ಪ್ರಯತ್ನ ಮಾಡಿ ವಿಫಲ ಆಗಿದ್ದಾರೆ. ಆದರೂ ಆಪರೇಷನ್ ಮಾಡ್ತಾನೆ ಇದ್ದಾರೆ. ಅಂತಹ ಪ್ರಯತ್ನ ಯಶಸ್ವಿಯಾಗಲ್ಲ. ಅವರ ಪ್ರಯತ್ನ ಸಫಲ ಆಗಲ್ಲ ಎಂದರು. ಲೋಕಸಭಾ ಚುನಾವಣೆ ಯಲ್ಲಿ ನಾವು 20 ಸೀಟ್ ಗೆಲ್ಲುತ್ತೇವೆ. ಅವರು ಚುನಾವಣೆಯಲ್ಲಿ ಸೋಲುತ್ತಾರೆ. ಅದಕ್ಕೆ ಅವರು ಹತಾಶರಾಗಿ ಸರ್ಕಾರ ಬೀಳಿಸುವ ಹೇಳಿಕೆ ಕೊಡ್ತಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

- Advertisement -spot_img

More articles

- Advertisement -spot_img

Latest article