ವಿದಾಯದ ಪಂದ್ಯದಲ್ಲಿ ಎರಡು ದಾಖಲೆ ಬರೆದ ಕುಕ್

Must read

ಇಂಗ್ಲೆಂಡ್ ಮಾಜಿ ಕ್ಯಾಪ್ಟನ್, ಆರಂಂಭಿಕ ಬ್ಯಾಟ್ಸ್ ಮನ್ ಅಲೆಸ್ಟೈರ್ ಕುಕ್ ಅಂತಿಮ ಟೆಸ್ಟ್ ಪಂದ್ಯವಾಡುತ್ತಿದ್ದಾರೆ.

ಓವೆಲ್ ನಲ್ಲಿ ನಡೆಯುತ್ತಿರುವ ಭಾರತ- ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಕುಕ್ ಅವರ ಅಂತಿಮ ಅಂತರಾಷ್ಟ್ರೀಯ ಪಂದ್ಯವಾಗಿದೆ.


ವಿಶೇಷವೆಂದರೆ‌ ಕುಕ್ 2006 ರಲ್ಲಿ ಭಾರತ ವಿರುದ್ಧದ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟಿಗ ಎಂಟ್ರಿ ಕೊಟ್ಟಿದ್ದರು.
ಟೆಸ್ಟ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ಕಲೆಹಾಕಿ ದಾಖಲೆ ಬರೆದಿರುವ ಇವರು ವಿದಾಯದ ಪಂದ್ಯದಲ್ಲೂ 2 ದಾಖಲೆ ಮಾಡಿದ್ದಾರೆ.
ಭಾರತದ ವಿರುದ್ಧ 2284 ರನ್ ಕಲೆಹಾಕುವ ಮೂಲಕ , ಭಾರತ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ‌ ಮೂರನೇ ಆಟಗಾರ ಎಂಬ ದಾಖಲೆ‌ ತನ್ನದಾಗಿಸಿಕೊಂಡಿದ್ದಾರೆ. ಇನ್ನೊಂದು ದಾಖಲೆ ಎಂದರೆ ಇಂಗ್ಲೆಂಡ್ ನ ಓವೆಲ್ ಕ್ರೀಡಾಂಗಣದಲ್ಲಿ ಸಾವಿರ ರನ್ ಕಲೆಹಾಕಿದ್ದಾರೆ‌ ಕುಕ್.

- Advertisement -spot_img

More articles

- Advertisement -spot_img

Latest article