No menu items!
14.1 C
Munich
Thursday, May 7, 2026

ಭಪ್ಪರೆ ಬಾಸ್..! ತಲೆ ನೋವಿಗೆ ವಯಾಗ್ರಾ ಮಾತ್ರೆ ಕೊಟ್ನಂತೆ..! ಬಾಸ್ ಹುಚ್ಚಾಟಕ್ಕೆ ಕೆರಳಿ ಕಂಪ್ಲೇಂಟ್ ಕೊಟ್ಟ ಹೆಣ್ಣು..!

Must read

ತಲೆ ನೋವು ಬಂದರೆ ತಲೆನೋವಿನ ಮಾತ್ರೆ ಸೇವಿಸುವುದು ವಾಡಿಕೆ. ಕಡೆಯ ಪಕ್ಷ ಮಾತ್ರೆಯ ಬಗ್ಗೆ ಮಾಹಿತಿ ಇಲ್ಲದಿದ್ದರೆ ತಲೆಗೆ ಹೆಚ್ಚುವ ಬಾಮ್ ಬಳಸಿ ತಲೆನೋವು ಕಡಿಮೆ ಮಾಡಿಕೊಳ್ಳಬಹುದು. ಇದರ ಬಗ್ಗೆ ಚಿಕ್ಕ ಮಕ್ಕಳಿಗೂ ಮಾಹಿತಿ ಇರುತ್ತದೆ. ಆದರೆ ಇಲ್ಲೋರ್ವ ವ್ಯಕ್ತಿ ತಲೆ ನೋವಿಗೆ ವಯಾಗ್ರಾ ಮಾತ್ರೆ ಸೇವಿಸು ಎಂದು ಹೇಳಿ ಪೇಚಿಗೆ ಸಿಲುಕಿಕೊಂಡಿದ್ದಾನೆ..!
ಇಂಚರ (ಹೆಸರು ಬದಲಿಸಲಾಗಿದೆ) ಎಂಬ 22ರ ಯುವತಿ ಕಂಪನಿಯೊಂದರ ಫೈನಾನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಆಕೆಯ ಬಾಸ್ ಎನಿಸಿಕೊಂಡಾತ ತಲೆ ನೋವಿಗೆ ವಯಾಗ್ರಾ ಮಾತ್ರೆ ಸೇವಿಸು ಎಂದು ಹೇಳುವ ಮೂಲಕ ಆಕೆಯನ್ನು ಹಿಯಾಳಿಸಿದ್ದಾನೆ. ಇದರಿಂದ ಕೋಪಗೊಂಡ ಆ ಯುವತಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
ಇಂಚರ ಕಳೆದೊಂದು ವರ್ಷದಿಂದ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಒಂದು ಕಂಪನಿಯ ಫೈನಾನ್ಸ್ ಮತ್ತು ಇನ್ವೆಸ್ಟ್ ಮೆಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಕಳೆದ ಮೂರ್ನಾಲ್ಕು ತಿಂಗಳಿಂದ ಕಂಪನಿಯ ಮ್ಯಾನೇಜರ್ ಆಗಿರುವ 38 ವರ್ಷದ ಕಲ್ಲಪ್ಪ(ಹೆಸರು ಬದಲಿಸಲಾಗಿದೆ) ಪದೇ ಪದೇ ಕಿರುಕುಳ ನೀಡುತ್ತಿದ್ದ.
ಇಂಚರಳ ತಂದೆ ತೀರಿಕೋಂಡಿದ್ದು, ಮನೆಯಲ್ಲಿ ಕಷ್ಟದ ಪರಿಸ್ಥಿತಿ ಇದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕಲ್ಲಪ್ಪ, ಆಕೆಗೆ ಮದುವೆಯಾಗುವಂತೆ ಪೀಡಿಸುತ್ತಿದ್ದ, ಮದುವೆಯಾದರೆ ಉತ್ತಮ ಸಂಬಳ ಒತ್ತಡವಿಲ್ಲದ ಕೆಲಸ ನೀಡುವುದಾಗಿ ಹೇಳುತ್ತಿದ್ದ. ಇನ್ನು ಯಾರೂ ಇಲ್ಲದ ವೇಳೆಯಲ್ಲಿ ದುಪಟ್ಟಾವನ್ನು ಎಳೆಯಲು ಪ್ರಯತ್ನಿಸುತ್ತಿದ್ದ ಎಂದು ಇಂಚರ ಕಂಪ್ಲೆಂಟ್ ನೀಡಿದ್ದಾಳೆ.
ಅಲ್ಲದೇ ನಾನು ಏನನ್ನೂ ಮಾಡದ ಪರಿಸ್ಥಿತಿಯಲ್ಲಿ ಇರಲಿಲ್ಲ..! ಕಳೆದ ಕೆಲ ತಿಂಗಳಿಂದ ಕಿರುಕುಳ ನೀಡುತ್ತಿದ್ದ ಕಲ್ಲಪ್ಪನನ್ನು ಎದುರಿಸುವ ಶಕ್ತಿಯೂ ಇರಲಿಲ್ಲ. ಆದ್ದರಿಂದ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ ಎಂದು ಇಂಚರ ಅಳಲು ತೋಡಿಕೊಂಡಿದ್ದಾಳೆ.
ಇಂಚರಳ ಪ್ರಕರಣ ದಾಖಲಿಸಿಕೊಂಡಿರುವ ಪೀಣ್ಯ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆರೋಪಿ ಕಲ್ಲಪ್ಪನನ್ನು ವಿಚಾರಣೆಗೊಳಪಡಿಸಲಿದ್ದು, ಕೆಲವೇ ದಿನಗಳ ಅಂತರದಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಲಿದ್ದಾರೆ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಐಎಎಸ್ ಅಧಿಕಾರಿ ಏಕೆ ಕೆಲಸ ಬಿಟ್ಟರು ಗೊತ್ತಾ..? ಐಎಎಸ್ ಕೆಲಸ ಬಿಡುವಂತೆ ಮಾಡಿದ ಕೆಲಸ ಯಾವುದು..?

ಭಾರತದಲ್ಲಿ ಮದುವೆಯ ಬಂಧಕ್ಕೆ ಬೆಲೆ ಇಲ್ಲದಂತಾಗುತ್ತಿದೆಯೇ..?

ಈ ವೀಡಿಯೋ ನೋಡುವಾಗ ನಿಮ್ಮ ಬೆರಳನ್ನು `ಸ್ಕ್ರೀನ್’ ಮೇಲೆ ಇಟ್ಕೊಳ್ಳಿ..!

ಅಂದು ಇಡೀ ವಿಶ್ವವೇ ಭಾರತಕ್ಕೆ ತಲೆಬಾಗಿತ್ತು..!

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

ತರಕಾರಿ ತಿನ್ನುವ ಮುನ್ನ ಈ ವಿಡಿಯೋ ನೋಡಿ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article