ಲೀಲಾಭಾಸ್ಕರ
ಓ ಭಾಸ್ಕರ..
ಓ ಆರ್ಯಮ..
ಓ ಶಕ್ರ, ಏನೀ ನಿನ್ನ ಲೀಲೆ
ಜೀವಜಾತನು ನೀ
ಪ್ರಾಣಧಾತನು ನೀ
ಈ ಜಗದುಸಿರೇ ನೀ
ದಿನ ಹರಸುವೆ - ದಿನ ಬೆಳಗುವೆ
ಜಗ ನಗಿಸುವೆ
ಅಂಧಕಾರವ ಅಳಿಸಿ
ಹೊಸ ಆಶಾಕಿರಣವ ಹರಿಸುವೆ
ಮೂಳೆ ಮಾಂಸಕೆ ಉಸಿರನಿತ್ತವನು ನೀ
ಪಾಲಿಸಿ ಹೆಸರನಿತ್ತವ ನೀ
ಕರ್ಮಾದಾನುಸಾರಕೆ...
ಜಗದೊಡಲ ಜಯ
ಹುಟ್ಟು ಸಾವಿನ ನಟ್ಟನಡುವೆ
ಬಿಟ್ಟು ಹೋದ ಮೂಟೆ ಎರಡೇ
ಏಳು ಗೋಳು..
ಎದೆಗೆ ನಾಟಿದ ಮಾತಿನ
ಈಟಿ ಏಟಿಗೆ ಪಾಠ ಕಲಿಸಿದ
ನೋಟವೊಂದೆಯೇ ನಗುವು.
ಜಗವು ಜೇನಾಗಿ ಅದರೊಳಗಿನ
ಹುಳುವು ನೋವಾಗಿ
ಹಗೆಯ ಸಾಧಿಸುತಿಹುದು
ಹೂವ ಮನಸಿನ ಶಿವನ ನೆನೆದು
ಕಲ್ಲನೆಸೆದವರ ಮನೆಗೆ ಹೂವ ತಂದಿಟ್ಟು
ಮುಗುಳ್ನಗುವ...