No menu items!
12.3 C
Munich
Thursday, April 30, 2026
- Advertisement -spot_img

CATEGORY

ಕಾವ್ಯದತ್ತ

ಮನೋವಿಕಾರ

ಮನೋವಿಕಾರ ನಾನೆಂಬುದೇ ತುಳಿಯುತಿದೆ ನನ್ನ ಅವನಿವನ - ಅವರಿವರ ವಿಡಂಬನೆಯಲೇ ಕಾಲಕಳೆದವನು ಊರ ಕಾವಲಿಗೆ ನಿಂತಾಗ ನಿಂತಲ್ಲೇ ಕಂತೆಯ ಎಣಿಸ ಕುಂತವನು ಹೊನ್ನ ಹೆಸರಲೇ ಮೂಗಗೊಣ್ಣೆಯ ಹೊತ್ತು ತನ್ನವರ ಹೆಣದ ಹಣೆಯಲೂ ಎಂಟಾಣಿ ಆಯುತಿರುವವನು ಯಾರಿಲ್ಲದ ವೇಳೆ ವಿಕಾರವಾಗಿ ಜನರೆದುರು ತಾನೊಬ್ಬನೇ ಆಕಾರದಿ ಭಗೀರಥನೆಂದಾಗ ಕಾಲವೇ ಅವನೊಳಗಿನ ಅಹಂಕಾರವ ಉರಿಸಿ ಈ ಜಗದಿಂದಲೇ...

ಚಿಗುರು ಮೀಸೆ ಮಾಯೆ

ಹರೆಯದ ಹೊಳೆಯಲ್ಲಿ ಹಳೆಯದೆಲ್ಲಾ ಕಳೆಯದು ಬೆಳೆಯದೆಲ್ಲಾ ಬೆಳೆಯದು ಕೊಳೆಯ ಮಳೆಯ ಮನಕೆ ಸುರಿಸಿ ಮೆರೆಯುತಿರುವ ಮರುಳರ ವಯಸ್ಸಿನ ಅರಳುಮರಳಿದು ಉರುಳು ಕೊರಳ ಸುತ್ತಿ ನರಳುವ ಹೊತ್ತಿಗಾಗಲೇ ಮರೆವು ಪಡುವಣದ ಬಾಗಿಲ ಸರಿಸಿ ಓಡುತಿಹುದು ಕಾವ್ಯದತ್ತನ ಮೂಡಣದ ಹೊಸಬೆಳಕು ನವಹುರುಪಿನಿಂದಲಿ ಬಿಸಿರಕ್ತಕೆ ನೋವಿನೂಟವ ಬಡಿಸಿ ಜಗದ ಹೋರಾಟವ ಕಣ್ಣೆದುರಿಗೆ ತಂದಿಟ್ಟು ಮರೆಯಾದಾಗ ಮುಂದಿಹುದೆಲ್ಲಾ ಜಯದ ಹಾದಿಯೇ. ?ದತ್ತರಾಜ್...

ಧರ್ಮಸ್ಥಾನ

ಧರ್ಮಸ್ಥಾನ ಆ ಧರ್ಮ ಈ ಧರ್ಮ ಕೆಲವೊಂದು ಕರ್ಮ(ಕೆಲಸ) ಜಾತಿಯೊಳಡಗಿಹ ಮರ್ಮ ಚರ್ಮದೊಳಗಿಲ್ಲ ಜನ್ಮದಲಿ ಅಡಗಿಕುಳಿತಿಹುದೆಲ್ಲ ಅಂಟಿಸಿದವರ ನಂಟಿನೊಳಗೆ ನಡುಗುತ ಒಂದೆಂಬ ಮಾತು ಗುಡುಗಿದರೂ ಕೆಡವುವರೆಲ್ಲ ಹೋರಾಟದ ನೋಟವಿಟ್ಟಲ್ಲಿ ಹೆಣದ ಮಾರಾಟ ಬಲುಜೋರಾಗಿಹುದು ಹಣಿಯಲಾರೆ ಸಾವಿನ ಹೊಣೆಯ ಸಹಿಸಲಾರೆ ಕೊನೆಯುಸಿರ ಎಳೆದ ಶವದಿಂದಲಿ ಒಳರಾಜಕೀಯದ ಬಡನಾಟಕೀಯದ ಬಿರುಗಾಳಿಯು ಮತ್ತದೇ ಶೋಕಗೀತೆಯ ಹಾಡಿಸುತಿಹುದು ಕಾವ್ಯದತ್ತನ ನೇರ ನುಡಿಯನು ಕೇಳಲಾಗದ ಕೊಳಕು...

ನಶ್ವರ

ನಶ್ವರ ಸರದಿಯಲಿ ಬಂದವನು ಬಲುಬೇಗ ನಿಂತವನು ಕಾಲುಸೋತವರ ಕಾಲೆಳೆದವನು ಕರುಣೆ ಇಲ್ಲದ ಎದೆಯೊಳಗೆ ಕರುಣಾನಟನಾದವನು ಬೆತ್ತಲೆಯಲೂ ಹಸಿಸುಳ್ಳ ನುಡಿದವನು ಹುಸಿ ನುಡಿಯ ಮಸಿ ಹಿಡಿದು ತಿಳಿದಂತೆ ಬರೆದವನು ಸರಸದಲೂ ವಿಷತಲೆಯ ವಿಷಯವ ಬಿತ್ತುವನು ಕಾರ್ಕೋಟಕ‌ವ ಮುದ್ದಾಡಿ ಎದೆಗಪ್ಪಿಸಿಕೊಂಡವನು ಕಣ್ಣೀರ ಕಡಲಲ್ಲೂ ಹಗೆಯ ಹೊಗೆಯಲಿ ಕೈಯ ಹಿಸುಕಿದವನ ಕಂಡ ಕಾವ್ಯದತ್ತನ ಮನವಿಂದು ನಗುತಿಹುದು ಕಾಲ ಚಕ್ರದ ಸುಳಿಗೆ...

ಪ್ರೇಮಸಂಗಮ

ಪ್ರೇಮಸಂಗಮ ಪ್ರೇಮಚಂದಿರ ಹೃದಯಮಂದಿರ‌ ದಿನವೂ ಹೂವಿನಹಂದರ ಕಣ್ಣಮಂತ್ರಕೆ ಭಾವ ತಂತ್ರಕೆ ಜೋಡಿಜೀವದ ಯಂತ್ರಕೆ ಕಿರುಬೆರಳು ಕರೆದಾಗ ನಸುನಾಚಿಕೆ ನೂಕಿತು ಎದೆಯಗೂಡಿಗೆ ಪಿಸುಮಾತು ಹಿತವಾಗಿ ಜೇನರಸವಾಗಿ ಹರಿದು ಹೋಗಿವೆ ಎರಡು ದೇಹದ ಒಂದೇ ಆತ್ಮಕೆ ಏನೀ ಅಂದ ಚಂದ ಕಾವ್ಯದತ್ತನ ಪದಕಮಲದಲಿ ಪ್ರೇಮಪದಗಳ ಆಯ್ದು ತಂದಿಹನು ಪ್ರೀತಿಚಿಗುರೆಲೆ ಹೊತ್ತು ಬಂದಿಹನು ಪ್ರೇಮಕವಿಯ ರೂಪತಾಳಿ. ? ದತ್ತರಾಜ್...

ನೋವಗರಡಿಯ ಶಕ್ತಿ

ನೋವಗರಡಿಯ ಶಕ್ತಿ ಸರಸರನೆ ಸರಿದ ಸಮಯದಿ ಸುರಿದ ಜಡಿಮಳೆಯ ನೆತ್ತಿ ಮೇಲೆ ಹೊತ್ತು ಸಾಲು ಸಾಲಿನಾ ನೋವಿನಾ ಬೀಜವ ಮನದಿ ನೆಟ್ಟು ಜಗದ ಕಣ್ಣೊಳಗೆ ನಗುವೆಂಬ ಕಾರ್ಮೋಡವ ಹರಡಿ ಎದೆಭಾರ ಹಗುರವಾಗುವುದೆಂದು ಒಂಟಿತನದ ಸೆರಗ ಹಾಸಿದಾಗ ಅಲ್ಲೊಂದು ಗುಡುಗು- ಇಲ್ಲೊಂದು ಸಿಡಿಲು ಮಡಿಲ-ಒಡಲ ಕಣ್ಣೀರ ಕಡಲ ಕಲಕಿ ಹೊಸಬೆಳಕ ಅರಸುತಿರುವಾಗ ಕಾವ್ಯದತ್ತನು ಕನಸ ಗೋಪುರವ ಕಟ್ಟಿ ನನಸಿನೂರಿನ...

ಲೀಲಾಭಾಸ್ಕರ

ಲೀಲಾಭಾಸ್ಕರ ಓ ಭಾಸ್ಕರ.. ಓ ಆರ್ಯಮ.. ಓ ಶಕ್ರ, ಏನೀ ನಿನ್ನ ಲೀಲೆ ಜೀವಜಾತನು ನೀ ಪ್ರಾಣಧಾತನು ನೀ ಈ ಜಗದುಸಿರೇ ನೀ ದಿನ ಹರಸುವೆ - ದಿನ ಬೆಳಗುವೆ ಜಗ ನಗಿಸುವೆ ಅಂಧಕಾರವ ಅಳಿಸಿ ಹೊಸ ಆಶಾಕಿರಣವ ಹರಿಸುವೆ ಮೂಳೆ ಮಾಂಸಕೆ ಉಸಿರನಿತ್ತವನು ನೀ ಪಾಲಿಸಿ ಹೆಸರನಿತ್ತವ ನೀ ಕರ್ಮಾದಾನುಸಾರಕೆ...

ಜಗದೊಡಲ ಜಯ

ಜಗದೊಡಲ ಜಯ ಹುಟ್ಟು ಸಾವಿನ ನಟ್ಟನಡುವೆ ಬಿಟ್ಟು ಹೋದ ಮೂಟೆ ಎರಡೇ ಏಳು ಗೋಳು.. ಎದೆಗೆ ನಾಟಿದ ಮಾತಿನ ಈಟಿ ಏಟಿಗೆ ಪಾಠ ಕಲಿಸಿದ ನೋಟವೊಂದೆಯೇ ನಗುವು. ಜಗವು ಜೇನಾಗಿ ಅದರೊಳಗಿನ ಹುಳುವು ನೋವಾಗಿ ಹಗೆಯ ಸಾಧಿಸುತಿಹುದು ಹೂವ ಮನಸಿನ ಶಿವನ ನೆನೆದು ಕಲ್ಲನೆಸೆದವರ ಮನೆಗೆ ಹೂವ ತಂದಿಟ್ಟು ಮುಗುಳ್ನಗುವ...

ಹೊಸ ಬೆರಗು

"ಹೊಸ ಬೆರಗು" ಹೊಸತು ಹೊಸತು‌ ದಿನದಿನವೂ.. ಮಡಿಲ ಖುಷಿಯು ಬಾನೆತ್ತರಕೆ ಏರಿದಾಗ ಅದುವೇ ನನಸು..! ಆಸೆಯ ಗೋಪುರಕೆ ಗೋರಿಯಾ ಭಾಷೆಯು ತಾಕಿದಾಗ ಮತ್ತದೇ ಮುನಿಸು..!! ತಲೆಯ ಬಿಲದೊಳಗೆ ಹೇಳಲಾಗದ ಬಿರುಕು ಮೂಡಿಹುದು. ಮುರುಕು ಮನೆಯ ತಿರುಕನೊಬ್ಬ ತಲೆತಿರುಗಿ ಮರುಗುತಿಹನು..! ಭೂಕುಬೇರರ ಕಾಲೊಳಗೆ ಸಕ್ಕರೆಯು ಅಡಗಿ ಸಾವಿನಾ ಇರುವೆಯು ಶೂಲದಿಂದ ಇರಿಯುತಿಹುದು..!! ಸೊಬಗ...

Latest news

- Advertisement -spot_img