ಕುಚೇಲನಂತೆ ಬಂದವ ಕುಬೇರನಾದ ಕಥೆ..!

1
136

ಉದ್ಯೋಗ ಅರಸಿ ದೊಡ್ಡ ದೊಡ್ಡ ಊರುಗಳಿಗೆ ಬರುವವರ ಸಂಖ್ಯೆಯೇನೂ ಕಮ್ಮಿಯಿಲ್ಲ. ಹಾಗಂತ ಸಿಟಿ ಬಂದವರೆಲ್ಲ ಉದ್ಧಾರವಾಗಿಲ್ಲ. ಆದರೆ ಕೆಲವೇ ಕೆಲವರು ಮಾತ್ರ ಉದ್ಧಾರವಾದ ಪಟ್ಟಿಗೆ ಸೇರುತ್ತಾರೆ. ಹಾಗೆಯೇ ಮುಂಬೈಗೆ ಉದ್ಯೋಗ ಅರಸಿ ಹೋಗಿ ಆರಂಭದಲ್ಲೇ ಸಂಕಷ್ಟ ಅನುಭವಿಸಿದ ಓರ್ವ ಹುಡುಗ ಇಡೀ ದೇಶವೇ ಮೆಚ್ಚುವಂತಾಗಿದ್ದಾನೆ. ದೇಶ ವಿದೇಶದಲ್ಲೂ ಹೆಸರು ಮಾಡಿದ್ದಾನೆ. ಇಷ್ಟಕ್ಕೂ ಆತನ ಹೆಸರು ಪ್ರೇಮ್ ಗಣಪತಿ.

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ತನ್ನ 17ನೇ ವಯಸ್ಸಿನಲ್ಲೇ ಉದ್ಯೋಗ ಅರಸಿ ಮುಂಬೈಗೆ ಹೋದ ಪ್ರೇಮ್ ಬಸ್ ನಿಲ್ದಾಣಕ್ಕೆ ಇಳಿಯುವ ಮುನ್ನವೇ ತನ್ನ ಕಿಸೆಯಲ್ಲಿದ್ದ 200 ರೂಪಾಯಿಯನ್ನ ಕಳೆದುಕೊಂಡಿದ್ದ. ಆದರೆ ಧೃತಿಗೆಡದೇ ಬಸ್ ನಿಲ್ದಾಣದಲ್ಲಿದ್ದ ಜನರ ಬಳಿ ಹಣಕ್ಕಾಗಿ ಅಂಗಲಾಚಿದ. ಊ್ಞಂ ಊ್ಞಂ ಯಾರೂ ಬಿಡಿಗಾಸು ಬಿಚ್ಚಲಿಲ್ಲ. ಒಂದು ಬೇಕರಿಯೊಂದರಲ್ಲಿ ಕೆಲಸಕ್ಕೆ ಸೇರಿದ. ಅವರು ತಿಂಗಳಿಗೆ 150 ರೂಪಾಯಿ ಕೊಡ್ತೀನಿ ಅಂದ್ರು. ತಲೆ ಅಲ್ಲಾಡಿಸಿದ.
ಎರಡು ವರ್ಷ ಬೇಕರಿಯಲ್ಲಿ 150 ರೂಪಾಯಿಗೆ ದುಡಿದ ಬಳಿಕ ಅದೇ ಕೆಲಸ, ಅದೇ 150 ರೂಪಾಯಿ ಸಂಬಳ ಬೇಕಾ ಎಂದೆನೆಸಿ, ಹೊಸ ಬ್ಯುಸಿನೆಸ್ ಮಾಡಲು ಮುಂದಾದ. ಇಡ್ಲಿ ಮಾಡುವ ಕಲೆ ಸಿದ್ಧಿಸಿದ್ದರಿಂದ ಇಡ್ಲಿಯನ್ನು ಮಾಡಿ, ಒಂದು ಬುಟ್ಟಿಯಲ್ಲಿಟ್ಟುಕೊಂಡು ಮಾರುವ ಬ್ಯುಸಿನೆಸ್ ಆರಂಭಿಸಿದ. ನಿರೀಕ್ಷೆ ಹುಸಿಯಾಗಲಿಲ್ಲ. ಇಡ್ಲಿ ಕೈ ಕೊಡ್ಲಿಲ್ಲ. ಬೆಳಿಗ್ಗೆ ಕೆಲಸಕ್ಕೆ ಹೋಗುವವರಿಗೆ, ಸಂಜೆ ಆಫೀಸ್ ನಿಂದ ಬಳಲಿ ಬಂದವರಿಗೆ ಇಡ್ಲಿ ಮೃಷ್ಟಾನ್ನದಂತೆ ಕಂಡಿತು. ಇತ್ತ ಜೇಬು ಭರ್ತಿಯಾಗತೊಡಗಿತು. ಜೊತೆಗೆ ಆಸೆಯ ಹಕ್ಕಿಗೆ ರೆಕ್ಕೆ ಬಲಿಯತೊಡಗಿತು. ಬ್ಯುಸಿನೆಸ್ ದೊಡ್ಡದಾಗಿಸಬೇಕೆಂಬ ಹಂಬಲ ಹುಟ್ಟಿತು. ತಡ ಮಾಡಲಿಲ್ಲ. ಒಂದು ತಳ್ಳುವ ಗಾಡಿ ಖರೀದಿಸಿದ. ಒಬ್ಬನಿಗೆ ಕೆಲಸ ಕಷ್ಟವಾಗಿದ್ದರಿಂದ ತಮ್ಮಂದಿರಿಬ್ಬರನ್ನು ಕರೆಯಿಸಿದ.
ಬ್ಯುಸಿನೆಸ್ ಚೆನ್ನಾಗಿ ನಡೆಯಿತು. ಆದರೆ ಲೈಸೆನ್ಸ್ ಇಲ್ಲ ಎಂಬ ಕಾರಣಕ್ಕೆ ಪೊಲೀಸರು ಆಗಾಗ ಬಂದು ಹಣ ಕಿತ್ತುಕೊಂಡು ಹೋಗುತ್ತಿದ್ರು. ಆದರೂ ಧೃತಿಗೆಡಲಿಲ್ಲ. ಕೆಲಸವನ್ನು ಕಷ್ಟಪಟ್ಟು ಮಾಡಿದ. ಮತ್ತಿಬ್ಬರು ಸಹಾಯಕರನ್ನು ಸೇರಿಸಿಕೊಂಡ. ಎಲ್ಲಾ ಖರ್ಚು ತೆಗೆದರೂ 5000ಕ್ಕೂ ಹೆಚ್ಚು ಲಾಭ ಬರಲಾರಂಭಿಸಿತು. ಚಿಕ್ಕ ಹೋಟೆಲ್ ರೆಸ್ಟೋರೆಂಟ್ ಆಗಿ ಪರಿವರ್ತನೆ ಆಯ್ತು. ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತು. ಪ್ರೇಮ್ ಗಣಪತಿ ಮುಂಬೈನಲ್ಲಿ ದೊಡ್ಡ ಹೆಸರು ಮಾಡಿದ.
ವಿಶೇಷವೇನೆಂದರೆ ಪ್ರೇಮ್ ಗಣಪತಿ ಹೋಟೆಲ್ ನಲ್ಲಿ 2002ರಲ್ಲೇ 26 ವಿಧದ ದೋಸೆಗಳನ್ನು ತಯಾರಿಸಲಾಗುತ್ತಿತ್ತು. ಆದರೆ ಈಗ ಅದರ ಸಂಖ್ಯೆ 105ಕ್ಕೇರಿದೆ. ಆದ್ದರಿಂದ ಇವರ ಹೋಟೆಲ್ ಗೆ ಬಂದ ಹೆಸರು `ದೋಸಾ ಪ್ಲಾಝಾ’. ಈಗ ದೋಸಾ ಪ್ಲಾಝಾ ವಿದೇಶಿ ಕಂಪನಿಗಳಿಗೂ ಸೆಡ್ಡು ಹೊಡೆದಿದೆ. ಸಾವಿರಾರು ಉದ್ಯೋಗಿಗಳಿಗೆ ಉದ್ಯೋಗ ಒದಗಿಸಿದೆ. ಇಷ್ಟಕ್ಕೂ 2012ರ ವೇಳೆಗೆ ಇವರು 45 ರೆಸ್ಟೋರೆಂಟ್ ಗಳನ್ನು ಮುನ್ನಡೆಸುತ್ತಿದ್ದಾರೆ. ಭಾರತದ 11 ರಾಜ್ಯಗಳು ಸೇರಿದಂತೆ ನ್ಯೂಜಿಲೆಂಡ್, ದುಬೈ, ಮಸ್ಕಟ್ ಇನ್ನುಳಿದ ಕಡೆ ರೆಸ್ಟೋರೆಂಟ್ ಗಳಿವೆ.
ಸಧ್ಯಕ್ಕೆ ಪ್ರೇಮ್ ಗಣಪತಿ ತಿಂಗಳ ಆದಾಯ ಎಷ್ಟು ಗೊತ್ತಾ..? 30 ಕೋಟಿ. ಯಸ್ ಬರೋಬ್ಬರಿ 30 ಕೋಟಿ.. ಒಂದು ಕಾಲದಲ್ಲಿ ಮುಂಬೈಗೆ ಕುಚೇಲನಂತೆ ಬಂದ ಪ್ರೇಮ್ ಇಂದು ಕುಬೇರನಾಗಿ ಮೆರೆಯುತ್ತಿದ್ದಾರೆ. ಇಂಥವರನ್ನೇ ನೋಡಿ ಮನಸ್ಸಿದ್ದರೆ ಮಾರ್ಗ ಎಂಬ ಪದ ಹುಟ್ಟಿಕೊಂಡಿದೆ ಅನ್ನಿಸುತ್ತೆ ಅಲ್ಲವೇ..?

POPULAR  STORY :

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

 

ರಾಜಶೇಖರ ಜೆ.

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

1 COMMENT

LEAVE A REPLY

Please enter your comment!
Please enter your name here