No menu items!
12.4 C
Munich
Wednesday, April 29, 2026

`ಅಪಘಾತದಲ್ಲಿ ವ್ಯಕ್ತಿಯನ್ನು ಗಾಯಗೊಳಿಸಿವುದಕ್ಕಿಂತ ಅವನನ್ನು ಕೊಲೆ ಮಾಡುವುದೇ ಲೇಸು'

Must read

ಇತ್ತೀಚೆಗೆ ಚೀನಾದಲ್ಲಿ ಒಂದು ಆ್ಯಕ್ಸಿಡೆಂಟ್ ಸಂಭವಿಸಿತು. ಅದರಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದ. ಆಗ ವಾಹನದ ಚಾಲಕ ಗಾಯಾಳುವನ್ನು ಆಸ್ಪತ್ರೆಗೆ ಸಾಗುತ್ತಾನೆ ಎಂದೇ ಎಲ್ಲರೂ ನಂಬಿದ್ದರು. ಆದರೆ ಅವನು ಹಾಗೆ ಮಾಡಲಿಲ್ಲ. ಬದಲಿಗೆ ಗಾಯಾಳು ಇನ್ನೂ ಬದುಕಿದ್ದಾನೆ ಎಂಬುದನ್ನು ಕನ್ಫರ್ಮ್ ಮಾಡಿಕೊಂಡು ಅವನ ಮೇಲೆ ಮತ್ತೇ ಕಾರನ್ನು ಹರಿಸಿ ಕೊಲೆ ಮಾಡಿಯೇ ಬಿಟ್ಟ. ಅಲ್ಲಿ ನಿಂತಿದ್ದವರು ಒಂದು ಕ್ಷಣ ದಿಗ್ಭ್ರಾಂತರಾಗಿ ಹೋಗಿದ್ದರು.
ಅದು ನಿಜಕ್ಕೂ ಅಮಾನವೀಯ ಘಟನೆ. ಆದರೆ ಅದರ ಹಿಂದಿನ ಚೀನಿ ನೀತಿ ಮಾತ್ರ ಮತ್ತಷ್ಟು ಕಠೋರವಾದುದು. ಅದೇನೆಂದರೆ `ಅಪಘಾತದಲ್ಲಿ ವ್ಯಕ್ತಿಯನ್ನು ಗಾಯಗೊಳಿಸಿವುದಕ್ಕಿಂತ ಅವನನ್ನು ಕೊಲೆ ಮಾಡುವುದೇ ಲೇಸು’ ಎನ್ನುತ್ತದೆ ಚೀನಿ ಗಾದೆ. ಈಗ ಅದೇ ಚೀನಾದ ಕೆಲವು ನಾಗರಿಕರ ಜೀವಕ್ಕೆ ಕುತ್ತಾಗಿ ಪರಿಣಮಿಸಿದೆ.

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಚೀನಾದ ತರಕಾರಿ ಮಾರುಕಟ್ಟೆಯೊಂದರಲ್ಲಿ ಮತ್ತೊಂದು ಅಪಘಾತ ಸಂಭವಿಸಿತು. ರಸ್ತೆ ಮೇಲೆ ಹೋಗುತ್ತಿದ್ದ ಬಿಎಂಡಬ್ಲ್ಯೂ ಕಾರ್ 2 ವರ್ಷದ ಬಾಲಕಿಯ ಮೇಲೆ ಹರಿಯಿತು. ಆಗ ಆ ಬಾಲಕಿ ಬದುಕಿದ್ದಳು. ಆದರೆ ಆ ಚಾಲಕ ಮತ್ತೇ ಅವಳ ಮೇಲೆ ವಾಹನ ಚಲಾಯಿಸಿ ಕೊಂದೇ ಹಾಕಿಬಿಟ್ಟ. ಅದಕ್ಕಾಗಿ ಆ ಚಾಲಕ ಒಂದಷ್ಟು ಪರಿಹಾರ ನೀಡಿ ಕೈ ತೊಳೆದುಕೊಳ್ಳಲು ಯತ್ನಿಸಿದ. ಆದರೆ ಆ ಬಾಲಕಿಯ ಅಜ್ಜಿ ಕೇಸ್ ದಾಖಲಿಸಿದಳು. ಆಗ ಸಿಸಿಟಿವಿಯಲ್ಲಿನ ಫೂಟೇಜ್ ಗಮನಿಸಿದಾಗ ಚಾಲಕ ಆ ಬಾಲಕಿಯ ಮೇಲೆ ಕಾರು ಹತ್ತಿಸಿ ಕೊಂದಿದ್ದು ಸ್ಪಷ್ಟವಾಗಿತ್ತು. ಆಗ ಆ ಚಾಲಕನಿಗೆ ಶಿಕ್ಷೆಯೂ ಆಗಬೇಕಿತ್ತು. ಆದರೆ ಅವನು ಒಂದಷ್ಟು ಹಣ ನೀಡಿ ಕೇಸ್ ಕ್ಲೋಸ್ ಮಾಡಿಸಿದ. ಅಲ್ಲದೇ ನ್ಯೂಸ್ ಚಾನೆಲ್ಗಳೆಲ್ಲಾ ಆ ಮಗುವಿನ ಸಾವು ಸಾಮಾನ್ಯವಾಗಿ ಜರುಗಿತು ಎಂಬಂತೆ ಬಿತ್ತರಿಸಿದವು. ಅದಕ್ಕೆ ಕಾರಣ ಚೀನಾದ ಯಡವಟ್ಟು ನಿಯಮಗಳು.
ಚೀನಾದಲ್ಲಿ ಒಂದು ನಿಯಮವಿದೆ. ಅದೇನೆಂದರೆ ರಸ್ತೆ ಅಪಘಾತದಲ್ಲಿ ವ್ಯಕ್ತಿ ಸಾವನ್ನಪ್ಪಿದರೆ ಅವನಿಗೆ ಒಂದೇ ಬಾರಿಗೆ ಪರಿಹಾರ ಮೊತ್ತ ನೀಡಬಹುದು. ಆಗ ಕೇಸ್ ಕ್ಲೋಸ್ ಆಗುತ್ತದೆ. ಅದಕ್ಕಾಗಿ ನೀಡಬೇಕಾದ ಮೊತ್ತ ಬರೋಬ್ಬರಿ 30,000 ಡಾಲರ್ನಿಂದ 50,000 ಡಾಲರ್. ಆದರೆ, ಅದೇ ವ್ಯಕ್ತಿ ಗಾಯಕ್ಕೊಳಗಾದರೆ ಅವನಿಗೆ ಇಡೀ ಜೀವನ ಪೂರ್ತಿ ಹಣ ಸಂದಾಯ ಮಾಡಬೇಕು. ಹಾಗಾದಲ್ಲಿ ಬೃಹತ್ ಮೊತ್ತದ ದಂಡ ಕಟ್ಟಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದ್ದರಿಂದ `ಒಮ್ಮೆ ಆ್ಯಕ್ಸಿಡೆಂಟ್ ಆದರೆ, ಆ ವ್ಯಕ್ತಿ ಸತ್ತಿದ್ದಾನೋ ಇಲ್ಲವೋ ಎಂಬುದನ್ನು ಗಮನಿಸುತ್ತೇವೆ. ಸತ್ತಿಲ್ಲದಿದ್ದರೆ ಅವನ ಮೇಲೆ ಮತ್ತೊಮ್ಮೆ ವಾಹನ ಚಲಾಯಿಸುತ್ತೇವೆ’ ಎಂದು ಕೆಲ ವಾಹನ ಚಾಲಕರು ಹೇಳುತ್ತಾರೆ.
ಇಷ್ಟೆಲ್ಲಾ ಆದರೂ ಚೀನಿ ಸರ್ಕಾರ ಈ ರೂಲ್ಸುಗಳನ್ನು ತೆಗೆದು ಹಾಕಬೇಕಲ್ಲವೇ..? ಊಹ್ಹೂ ಅಂಥಹ ಮಹಾನ್ ಕಾರ್ಯಕ್ಕೆ ಅಲ್ಲಿನ ಜನಪ್ರತಿನಿಧಿಗಳು ಇಂದಿಗೂ ಮುಂದಾಗಿಲ್ಲ. ಅದರ ಬದಲಿಗೆ ಗಾಯಗೊಂಡ ವ್ಯಕ್ತಿಯ ಮೇಲೆ ಮತ್ತೇ ವಾಹನ ಹತ್ತಿಸಿ ಕೊಲೆ ಮಾಡಿದರೆ ಅದಕ್ಕೆ ಶಿಕ್ಷೆ ವಿಧಿಸಲಾಗುತ್ತದೆ ಎಂಬ ನಿಯಮ ಜಾರಿಗೆ ತಂದಿತು. ಆದರೆ ಅದು ಸಮರ್ಪಕವಾಗಿ ಜಾರಿಗೆ ಬರಲೇ ಇಲ್ಲ. ಇದರಿಂದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಜೀವ ಉಳಿಸಿಕೊಳ್ಳಬೇಕಿದ್ದವರು. ಶಿವನ ಪಾದ ಸೇರುತ್ತಿದ್ದಾರೆ.
ಇದೆಲ್ಲವನ್ನೂ ಗಮನಿಸಿದರೆ ಚಪ್ಪಟೆ ಮೂಗಿನ ಚೀನಿಯರಿಗೆ ಜೀವದ ಬೆಲೆಯೇ ಗೊತ್ತಿಲ್ಲ ಎನಿಸುತ್ತದೆ. ಹಣದ ಮುಂದೆ ಜೀವಕ್ಕೆ ಬೆಲೆಯೇ ಇಲ್ಲ ಎಂಬಂತೆ ಚೀನಿ ಕುಳ್ಳರು ನಂಬಿದಂತಿದೆ. ಆದರೆ `ಒಬ್ಬ ಮನುಷ್ಯನನ್ನು ಹುಟ್ಟಿಸುವ ಹಕ್ಕು ಮನುಷ್ಯನಿಗಿದೆ. ಆದರೆ ಅವನನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ’ ಎಂಬುದನ್ನು ಅವರು ಮೊದಲು ಅರಿಯಬೇಕಿದೆ. ಆಗ ಮಾತ್ರ ಮಾನವ ನಿರ್ಭೀತಿಯಿಂದ ಓಡಾಡಿಕೊಂಡಿರಲು ಸಾಧ್ಯವಾಗುತ್ತದೆ ಅಲ್ಲವೇ..?

 

ರಾಜಶೇಖರ ಜೆ.

—————-

POPULAR  STORIES :

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article