ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

1
75

ಅವನು ಮತ್ತು ಇವನು ಅಣ್ಣ ತಮ್ಮ. ಇಬ್ಬರೂ ಅವಳಿಜವಳಿ..! ಅವನು ತುಂಬ ಸೈಲೆಂಟು, ಇವನು ಸಖತ್ ತುಂಟ..! ಅವರಿಬ್ಬರೂ ಅವಳಿಜವಳಿ ಅಂತ ಹೇಳೋದೇ ಕಷ್ಟ, ಅವರಿಬ್ಬರಲ್ಲಿ ಅಷ್ಟು ವ್ಯತ್ಯಾಸ ಇತ್ತು..! ಅವರಪ್ಪನಿಗೆ ಅವನು ಅಂದ್ರೆ ತುಂಬಾ ಇಷ್ಟ, ಅಮ್ಮನಿಗೆ ಇವನ ಮೇಲೆ ಪ್ರೀತಿ. ಇವನ ತುಂಟಾಟ, ಕೀಟಲೆ ನೋಡಿ ನೋಡಿ ಅಪ್ಪನಿಗೆ ಪಿತ್ತ ನೆತ್ತಿಗೇರೋದು. ಆದ್ರೆ ಅಮ್ಮ ಮಾತ್ರ ಇವನು ಹಿಂಗಿದ್ರೇನೇ ಚಂದ ಅಂತ ವಾದ ಮಾಡ್ತಿದ್ರು. ! ಹೀಗೇ ದಿನಗಳು ಕಳೀತು. ಅವನು ಮತ್ತು ಇವನು ಇಬ್ರೂ ಸ್ಕೂಲಿಗೆ ಸೇರಿದ್ರು. ಸ್ಕೂಲ್ಲೂ ಅಷ್ಟೆ ಅವನು ಸಿಕ್ಕಾಪಟ್ಟೆ ಬುದ್ಧಿವಂತ ಅನ್ನೋ ಹೊಗಳಿಕೆ. ಇವನು ಮಾತ್ರ ಸಖತ್ ತರ್ಲೆ ಅನ್ನೋ ಹಣೆಪಟ್ಟಿ..! ಎಷ್ಟು ಹೇಳಿದ್ರೂ ಇವನು ಬದಲಾಗೋದೇ ಇಲ್ಲ..! ಆದ್ರೆ ಅವನು ಮಾತ್ರ ಯಾವಾಗಲೂ ಓದ್ಕೊಂಡು, ಅಪ್ಪಅಮ್ಮ ಹೇಳಿದ್ದನ್ನು ಕೇಳ್ಕೊಂಡು ಒಳ್ಳೆಯ ಮಗನ ಹಾಗಿದ್ರೆ, ಇವನು ಮಾತ್ರ ಬ್ಯಾಟ್ ಹಿಡಿದು ಹೊರಗೆ ಹೊರಟ್ರೆ ಯಾವಾಗ ಬರ್ತಾನೋ ಗೊತ್ತಿಲ್ಲ..! ಅಕ್ಕಪಕ್ಕದ ಮನೆಯವರಿಂದೆಲ್ಲಾ ಯಾವಾಗಲೂ ಇವನ ಬಗ್ಗೆ ಕಂಪ್ಲೆಂಟೋ ಕಂಪ್ಲೆಂಟು..! ಅವನು ಮಾತ್ರ ಅವರ ಏರಿಯಾದ ಆದರ್ಶ ಹುಡುಗ..! ಅವನು ಓದೋದ್ರಲ್ಲಿ ಮೆಡಲ್ ತಂದ್ರೆ ಇವನು ಓದೋದ್ರಲ್ಲಿ ಅಷ್ಟಕ್ಕಷ್ಟೆ..! ಆದ್ರೆ ಇವನು ಆಟದಲ್ಲಿ ಮುಂದೆ. ಕ್ರಿಕೆಟ್ ಆಡೋಕೆ ಹೋದಾಗಲೆಲ್ಲಾ ಇವನೇ ಮ್ಯಾನ್ ಆರ್ಫ ದಿ ಮ್ಯಾಚ್.. ಸ್ಕೂಲ್ ಟೀಮಿಗೆ ಅವನೇ ಕ್ಯಾಪ್ಟನ್..! ಅವನಿಗೆ ಸ್ನೇಹಿತರೂ ಕಮ್ಮಿ. ಅವನಾಯ್ತು, ಅವನ ಓದಾಯ್ತು. ಯಾರ ಜೊತೆಗೂ ಜಾಸ್ತಿ ಸೇರಲ್ಲ, ಮಾತಾಡಲ್ಲ..! ಆದ್ರೆ ಇವನು ಎಲ್ಲಿರ್ತಾನೋ ಅಲ್ಲೆಲ್ಲಾ ಫುಲ್ ಹುಡುಗರು. ಇವನ ಸುತ್ತ ಯಾವಾಗ್ಲೂ 10-12 ಜನ ಫ್ರೆಂಡ್ಸ್..! ಅಪ್ಪನಿಗೆ ಅವನು ಓದಿ ಉದ್ಧಾರ ಆಗಿ ಏನೋ ಆಗ್ತಾನೆ ಅನ್ಸಿದ್ರೆ, ಇವನು ಪೋಲಿ ಹುಡುಗರ ಜೊತೆ ಸೇರಿ ಆಟ ಆಟ ಅಂತ ಇನ್ನೇನೋ ಆಗಿ ಬಿಡ್ತಾನೆ ಅಂತ ಭಯ ಶುರುವಾಗಿತ್ತು..! ಅಮ್ಮನೂ ಸಹ ಇವನನ್ನು ಸಪೋರ್ಟ್ ಮಾಡೋದು ಬಿಟ್ಟು ಸುಮ್ಮನಾಗಿದ್ರು..! ಅವರಿಗೂ ಇವನು ಎಲ್ಲಿ ಪೋಲಿ ಬಿದ್ದು ಹಾಳಾಗಿಬಿಡ್ತಾನೆ ಅಂತ ಭಯ ಶುರುವಾಗಿತ್ತು..! ನಾಳೆ ಎಕ್ಸಾಂ ಅಂದ್ರೂ ಸಹ ಅಲ್ಲಿ ಮ್ಯಾಚ್, ಇಲ್ಲಿ ಮ್ಯಾಚ್ ಅಂತ ಇವನು ಹೋಗೋದು ನೋಡಿ ಅಪ್ಪಅಮ್ಮ ಅಮ್ಮ ಟೆನ್ಷನ್ ಆಗಿಹೋದ್ರು..! ಎಸ್ಸೆಸ್ಸೆಲ್ಸಿ ರಿಸಲ್ಟ್ ಬಂತು. ಅವನು ಇಡೀ ರಾಜ್ಯಕ್ಕೆ ಟಾಪರ್..! ಇವನು ಸೆಕೆಂಡ್ ಕ್ಲಾಸ್ ..! ಆದ್ರೆ ಇವನಿಗೆ ಅದರ ಬಗ್ಗೆ ಒಂಚೂರೂ ಬೇಜಾರಿರಲಿಲ್ಲ. ಪಾಸಾಗಿದ್ದೇ ಗ್ರೇಟ್ ಅನ್ನೋ ಹಾಗಿತ್ತು ಅವನ ಫೀಲಿಂಗ್..! ಈ ಕಡೆ ಇರೋ ಬರೋ ಪೇಪರ್ ಟಿವಿಯಲ್ಲಿ ಅವನು, ಅವನು, ಅವನು…! ಅಪ್ಪ ಅಮ್ಮನಿಗೆ ಒಂದು ಕಡೆ ಹೆಮ್ಮೆ, ಮತ್ತೊಂದು ಕಡೆ ಇವನು ಹಿಂಗಾಗಿಬಿಟ್ಟ ಅನ್ನೋ ಬೇಜಾರು..!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಒಂದು ಕಡೆ ಅವನು ಓದು ಓದು ಒದು ಅಂತ ಓದಿಗೆ ಬಿದ್ರೆ, ಇವನು `ಒಂದು ದಿನ ನಾನೂ ಟಿವಿಯಲ್ಲಿ ಬರ್ತೀನಿ ನೋಡ್ತಿರಿ’ ಅಂತ ಸ್ಟೈಲಾಗಿ ಬ್ಯಾಟ್ ಹೆಗಲಿಗೇರಿಸಿ ಹೊರಗೆ ಹೋಗ್ತಿದ್ದ..! ಅವನು ಕ್ರಿಕೆಟ್ ಜೊತೆ ಬೆರೆತು ಹೋಗಿದ್ದ..! ಅವನು ಓದೋಕೆ, ಇವನು ಆಟಕ್ಕೆ ಅಂತ ಇಡೀ ಏರಿಯಾದವ್ರು ಮಾತಾಡಿಕೊಳ್ಳೋರು. ಇವನಂತೂ ಅದರ ಬಗ್ಗೆ ಯಾವತ್ತೂ ತಲೆಕೆಡಿಸಿಕೊಂಡವನೇ ಅಲ್ಲ..! ಫ್ಯಾಮಿಲಿ ಟ್ರಿಪ್ ಅಂತ ಅಪ್ಪ ಅಮ್ಮನ ಜೊತೆ ಅವನು ಇವನು ಹೊರಟರೆ ಮೊಬೈಲಲ್ಲಿ ಮುಳುಗಿ ಹೋಗಿರ್ತಿದ್ರು..! ಅವನು ಮೊಬೈಲಲ್ಲಿ ನ್ಯೂಸ್, ಆರ್ಟಿಕಲ್, ಸೈನ್ಸ್ ಸ್ಟೋರಿ ಅಂತ ಗೂಗಲ್ ಮಾಡ್ತಾ ಇದ್ರೆ, ಇವನು ಮಾತ್ರ ಮೊಬೈಲಲ್ಲೂ ಕ್ರಿಕೆಟ್ ಗೇಮ್ ಆಡ್ಕೊಂಡು ಕೂತಿರ್ತಿದ್ದ..! ಇವನು ಉದ್ಧಾರ ಆಗೋ ಯಾವ ಲಕ್ಷಣಾನೂ ಇಲ್ಲ ಅಂತ ಅವರಪ್ಪ ಅಮ್ಮ ಡಿಸೈಟ್ ಮಾಡಿದ್ರು..!
ಹೀಗೇ ಒಂದು ವರ್ಷ ಕಳೀತು. ಪಿಯೂಸಿ ಸೈನ್ಸ್ ಸ್ಟೂಡೆಂಟ್ ಆದ ಅವನು ಎಕ್ಸಾಂ, ಸಿಇಟಿ ಅಂತ ತಲೆಕೆಡಿಸ್ಕೊಂಡ್ರೆ, ಇವನು ಮಾತ್ರ ಕ್ರಿಕೆಟ್ ಲೀಗ್, ಕ್ರಿಕೆಟ್ ಕ್ಲಬ್ ಅಂತ ಬಿಜಿಯಾಗಿದ್ದ..! ಕ್ರಿಕೆಟ್, ಕ್ರಿಕೆಟ್ ಅಂತ ಆ ವರ್ಷ ಇವನು ಪಿಯುಸಿ ಎಕ್ಸಾಮನ್ನೇ ಬರೆದಿರಲಿಲ್ಲ..! ಈ ಗ್ಯಾಪಲ್ಲಿ ಇವನು ಅಷ್ಟರಲ್ಲಿ ರಾಜ್ಯದ ರಣಜಿ ಟೀಮಿಗೆ ಸೆಲೆಕ್ಟ್ ಆಗಿಯೂಬಿಟ್ಟ..! ಅಪ್ಪಅಮ್ಮ ನಿಗೆ ತಲೆಕೆಟ್ಟು ಹೋಯ್ತು..! `ಯಲಾ ಇವನಾ, ಏನೋ ಆಗ್ತಾನೆ ಅನ್ಕೊಂಡ್ರೆ ಇನ್ನೇನೋ ಆಗ್ಬಿಟ್ಟ’ ಅಂತ..! ನೋಡ ನೋಡ್ತಿದ್ದ ಹಾಗೇ ರಣಜಿಯಿಂದ ಐಪಿಎಲ್, ಐಪಿಎಲ್ ನಿಂದ ಇಂಡಿಯನ್ ಟೀಂ, ಹೀಗೆ ಇವನು ದೊಡ್ಡ ಕ್ರಿಕೆಟ್ ಸ್ಟಾರ್ ಆಗಿಬಿಟ್ಟ..! ಈ ಕಡೆ ಅವನು ಸಹ ಕಾಂಪಿಟೇಟಿವ್ ಎಕ್ಸಾಮ್ಸ್ ಬರೆದು ಐಎಎಸ್ ನಲ್ಲಿ ರ್ಯಾಂಕ್ ಪಡೆದು ಆಫೀಸರ್ ಆದ..! ಅವನು ಅನ್ಕೊಂಡ ಹಾಗೆ ಅವನೇ ಆದ, ಆದ್ರೆ ಯಾವುದಕ್ಕೂ ಉಪಯೋವಿಲ್ಲ ಅನ್ಕೊಂಡಿದ್ದ ಇವನು ಇನ್ನೇನೋ ಆಗಿಹೋದ…!
ಈ ಕತೆ ಉದ್ದೇಶ ಇಷ್ಟೆ. ನಿಮ್ಮ ಮನೆಯಲ್ಲೂ ಈ ತರಹ ಆಗಿರುತ್ತೆ. ಒಬ್ಬ ಬುದ್ಧಿವಂತ, ಇನ್ನೊಬ್ಬ ತರ್ಲೆ..! ಅಂತಹ ಟೈಮಲ್ಲಿ ಅವರನ್ನು ಡಿಮೋಟಿವೇಟ್ ಮಾಡಬೇಡಿ..! ನಿಮ್ಮ ಮನೆಯಲ್ಲಿರೋ ಅವನು ಇವನು, ಇಬ್ಬರನ್ನೂ ಒಂದೇ ರೀತಿ ನೋಡಿ..! ಅವನು ಅವನಾಗ್ತಾನೆ, ಇವನು ಇನ್ನೇನೋ ಆಗ್ತಾನೆ..! ಇವನಿಗೆ ಏನು ಇಂಟರೆಸ್ಟ್ ಇದೆ ಅಂತ ಕೇಳಿ, ಅದರಲ್ಲಿ ಬೆಳೆಯೋಕೆ ಬಿಡಿ..! ಅವನು ಹೆಂಗಿದ್ರೂ ನಿಮಗೆ ಬೇಕಾದ ಹಾಗೆ ಇದಾನಲ್ವಾ..? ಮಕ್ಕಳ ನಡುವೆ ತಾರತಮ್ಯ ಮಾಡಬೇಡಿ.. ಪ್ರತಿಯೊಬ್ಬರಿಗೂ ಏನೋ ಒಂದು ಟ್ಯಾಲೆಂಟ್ ಇದ್ದೇ ಇರುತ್ತೆ..! ಅದನ್ನು ಗುರುತಿಸಿ ಬೆಳೆಸಿ..! ಅವನೂ ನಿಮ್ಮ ಮಗನೇ, ಇವನೂ ನಿಮ್ಮ ಮಗನೇ..! ಏನಂತೀರಿ…?

-ಕೀರ್ತಿ ಶಂಕರಘಟ್ಟ

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

1 COMMENT

LEAVE A REPLY

Please enter your comment!
Please enter your name here