No menu items!
13.9 C
Munich
Wednesday, April 29, 2026

ಇಡೀ ಹಳ್ಳಿಗೆ ವಿದ್ಯುತ್ ಭಾಗ್ಯ ಕರುಣಿಸಿದ ವಿದ್ಯಾರ್ಥಿ..!

Must read

ಭಾರತ ಎಷ್ಟೇ ಮುಂದುವರೆದರೂ.. ಕೈಗಾರಿಕೆಗಳು ತ್ವರಿತಗತಿಯಲ್ಲಿ ಬೆಳೆಯುತ್ತಿದ್ದರೂ ಇಂದಿಗೂ ವಿದ್ಯುತ್ ಸಮಸ್ಯೆ ಮಾತ್ರ ಬಗೆಹರಿಯುವ ಯಾವುದೇ ಲಕ್ಷಣಗಳು ಕಂಡುಬರ್ತಿಲ್ಲ..! ಹೆಚ್ಚು ಕಡಿಮೆ 18,000 ಹಳ್ಳಿಗಳಲ್ಲಿ ಇಂದಿಗೂ ಸೀಮೆಎಣ್ಣೆ ಬುಡ್ಡಿ(ದೀಪ)ಯದ್ದೇ ಬೆಳಕು..! ಆದರೆ ಈಗ ಒಂದು ಹಳ್ಳಿ ವಿದ್ಯುತ್ ಭಾಗ್ಯವನ್ನು ಪಡೆದಿದೆ..! ಇದಕ್ಕೆ ಕಾರಣ ಆ ರಾಜ್ಯದ ರಾಜ್ಯ ಸರ್ಕಾರವೂ ಅಲ್ಲ.., ಕೇಂದ್ರ ಸರ್ಕಾರವೂ ಅಲ್ಲ..! ಆ ಹಳ್ಳಿಗೆ ವಿದ್ಯುತ್ ಸೌಕರ್ಯವನ್ನು ಕಲ್ಪಿಸಿಕೊಟ್ಟದ್ದು ಒಬ್ಬ ವಿದ್ಯಾರ್ಥಿ..!
ರಾಜಸ್ಥಾನದ ಉದಯಪುರ ಪಟ್ಟಣದಿಂದ 25 ಕಿಲೋಮೀಟರ್ ದೂರದಲ್ಲಿನ ಒಂದು ಪುಟ್ಟಹಳ್ಳಿ. ಆ ಕುಗ್ರಾಮಕ್ಕೆ ವಿದ್ಯುತ್ ಸಂಪರ್ಕವೇ ಇಲ್ಲ..! ಆದಾಗ್ಯೂ ಇಂದು ಇಡೀ ಹಳ್ಳಿ ವಿದ್ಯುತ್ ಸೌಲಭ್ಯವನ್ನು ಪಡೆದಿದೆ..! ಆ ಹಳ್ಳಿಯನ್ನು ಬೆಳಗಿದ್ದು ಡೆಹರಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿ “ಪ್ರಭಾಸಿಂಗ್”..!
ಪ್ರಭಾಸಿಂಗ್ ತನ್ನ ಪ್ರಾಯೋಗಿಕ ಯೋಜನೆಯ ಅಡಿಯಲ್ಲಿ 76 ಮನೆಗಳಿರುವ ಈ ಹಳ್ಳಿಗೆ ವಿದ್ಯುತ್ ಕಲ್ಪಿಸಿದ್ದಾರೆ..!
ಅವರ ಪ್ರಾಯೋಗಿಕ ಯೋಜನೆಗೆ ತಗುಲಿರುವ ವೆಚ್ಚ 7 ಲಕ್ಷ ರೂಪಾಯಿಗಳು..! ಇಷ್ಟೊಂದು ಮೊತ್ತದ ಹಣವನ್ನು ಜನರಿಂದ ಮತ್ತು ಎನ್ಸಿಟಿಎಆರ್ (ನಾರ್ತ್ ಈಸ್ಟ್ ಸೆಂಟರ್ ಫಾರ್ ಟೆಕ್ನಾಲಜಿ ಅಪ್ಲಿಕೇಶನ್ ಅಂಡ್ ರೀಚ್) ಸಹಾಯದಿಂದ ಒಟ್ಟಾಕಿಕೊಂಡು ವಿದ್ಯುತ್ ಕಲ್ಪಿಸುವಲ್ಲಿ ಮುಂದಾಗಿದ್ದಾರೆ..!
ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವಾಗ ಪ್ರಭಾ ಹಳ್ಳಿಗರ ಜೊತೆಯಲ್ಲೇ ಇದ್ದು, ಅವರ ಅನುಭವ ಮತ್ತು ಜೀವನ ಶೈಲಿಯನ್ನೂ ಹತ್ತಿರದಿಂದ ನೋಡಿ ಯೋಜೆನಯ ಉಪಯೋಗವನ್ನು ಮನಗಾಣಿಸಿದ್ದಾರೆ..!
ಯೋಜನೆ ಅನ್ವಯ ಒಂದು ಸೋಲರ್ ಪ್ಯಾನೆಲ್, ಮೂರು ಬಲ್ಬ್ಸ್, ಕೊಳವೆ ದೀಪಗಳನ್ನು , ಚಾರ್ಜಿಂಗ್ ಸಾಕೇಟ್ ಗಳನ್ನು ನೀಡಲಾಗಿದೆ…!
ಪ್ರಭಾಸಿಂಗ್ ಈ ಯೋಜನೆಯನ್ನು ಬೇರೆ ಹಳ್ಳಿಗಳಿಗಳಲ್ಲಿಯೂ ಕಾರ್ಯರೂಪಕ್ಕೆ ತರುವ ಬಗ್ಗೆ ಯೋಚಿಸಿದ್ದಾರೆ..! ಇದೇ ಯೋಜನೆಯಲ್ಲಿ 50 ರಿಮೋಟ್ ಪ್ರದೇಶಗಳಲ್ಲಿ ಇದೇ ರೀತಿ ವಿದ್ಯುತ್ ಸೌಕರ್ಯನೀಡುವ ಯೋಚನೆ ಮಾಡ್ತಾ ಇದ್ದಾರೆ..! ಕೇವಲ ಒಬ್ಬರೇ ಒಬ್ಬರು ವ್ಯಕ್ತಿ ಇಡೀ ಹಳ್ಳಿಗಳನ್ನೇ ಬೆಳಗಲು ಮುಂದಾಗಿದ್ದಾರೆ..! ಇವರೊಡನೆ ಎಲ್ಲರೂ ಕೈ ಜೋಡಿಸೋಣ ಬನ್ನಿ..!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಅಂಗವೈಕಲ್ಯತೆಯನ್ನು ಮೆಟ್ಟಿನಿಂತ ಆಟೋಡ್ರೈವರ್..! ಮನಮುಟ್ಟುವ ಈ ವೀಡಿಯೊವನ್ನು ತಪ್ಪದೇ ನೋಡಿ.

ಬಸ್ ಸ್ಟ್ಯಾಂಡ್ ನಲ್ಲಿ ನಿಂತಾಗ ಈಕೆಗೆ ಬಸ್ ಸಿಗದಿದ್ದರೆ ಏನ್ಮಾಡ್ತಾಳೆ ಗೊತ್ತಾ..?

45 ದಿನದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ..!

ಈ ಬಿಲ್ಡಿಂಗ್ ಕಟ್ಟಿರೋದೆ ಲವ್ ಲೆಟರ್ ನಲ್ಲಿ…! ಇದನ್ನು ಕಟ್ಟೋಕೆ ಎಷ್ಟು ಲವ್ ಲೆಟರ್ ಬಳಸಿದ್ದಾರೆ ಗೊತ್ತಾ..?

ಸೈಬರ್ ವಂಚನೆಯಿಂದ ಮಹಿಳೆಯನ್ನು ಕಾಪಾಡಿದ ಬ್ಯಾಂಕ್ ಉದ್ಯೋಗಿ..!

ಅಕ್ಕನ ನೆನಪು ಈ ಪುಟ್ಟ ತಮ್ಮನಿಗೆ ಎಷ್ಟೊಂದು ಕಾಡ್ತಾ ಇದೆ ಗೊತ್ತಾ..? ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬಲಿ..!

ಇಲ್ನೋಡ್ರೀ ಕೆಲಸ ಕಮ್ಮಿ, ಸಂಬಳ ಜಾಸ್ತಿ…!

ಭಾರತದ 50% ಆಸ್ತಿ 1% ಟಾಪ್ ಶ್ರೀಮಂತರ ಬಳಿಯೇ ಇದೆ..!

ತಾಳಿ ಕಟ್ಟಿದ ಐದೇ ನಿಮಿಷಕ್ಕೆ ತಾಳಿ ಕಿತ್ತು ವಾಪಸ್ ಕೊಟ್ಟ ವಧು..! ಅಷ್ಟಕ್ಕೂ ಅವಳು ಆ ನಿರ್ಧಾರ ಮಾಡಿದ್ದು ಯಾಕೆ ಗೊತ್ತಾ..?

ಬಡವರಿಗಾಗಿ ವಿಮಾನ ಖರೀದಿಸಿದ ನಿವೃತ್ತ ಇಂಜಿನಿಯರ್..! ವಿಮಾನ ಕೊಳ್ಳಲು ಭೂಮಿಯನ್ನೇ ಮಾರಿದರು..!

ಭಾರತೀಯ ನಟಿಯರನ್ನು ಕಂಡ ಕೋರಿಯನ್ನರಿಗೇಕೆ ಅಚ್ಚರಿ ಆಯಿತು..!

ಟಿ ಎಸ್ ಯು – ಸೋಷಿಯಲ್ ಮೀಡಿಯಾ ನೀವೂ ಉಪಯೋಗಿಸುವುದಕ್ಕೆ ಪ್ರೋತ್ಸಾಹ ಧನದ ರೂಪದಲ್ಲಿ ನಿಮಗೆ ದುಡ್ಡನ್ನೂ ಕೊಡ್ತಾರೆ..!

ನಾಲ್ಕನೇ ತರಗತಿಯಲ್ಲೇ ಪ್ರೀತಿಸಿದ್ದ ಜೋಡಿಹಕ್ಕಿಗಳು..! ಇಂಥಾ ಲವ್ ಸ್ಟೋರಿಯನ್ನು ನೀವೆಲ್ಲೂ ಕೇಳಿಲ್ಲ..ನೋಡಿಲ್ಲ.. ಓದಿಲ್ಲ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article