ಸಾಕಾನೆಗಳು ಮಧ್ಯಪ್ರದೇಶಕ್ಕೆ ರವಾನೆ

Must read

ಗುಂಡ್ಲುಪೇಟೆಯ ಬಂಡೀಪುರದಿಂದ ನಾಲ್ಕು ಸಾಕಾನೆಗಳನ್ನ ಮಧ್ಯಪ್ರದೇಶಕ್ಕೆ ರವಾನೆ ಮಾಡಲಾಗಿದೆ.
ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ರಾಂಪುರ ಶಿಬಿರದಿಂದ 2 ಗಂಡು ಮತ್ತು 2 ಹೆಣ್ಣು ಆನೆಗಳನ್ನು ಅರಣ್ಯ ಅಧಿಕಾರಿಗಳು ಮಧ್ಯಪ್ರದೇಶದ ಸಾತ್ಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಕಳುಹಿಸಿದ್ದಾರೆ.

 

ಕೃಷ್ಣ, ಮಾರೀಚ, ಪೂಜಾ ಮತ್ತು ಗಜ ಎಂಬ ಸಾಕಾನೆಗಳನ್ನು ರವಾನಿಸಲಾಗಿದ್ದು, ಕಳೆದ ತಿಂಗಳು ಉತ್ತರ ಪ್ರದೇಶಕ್ಕೆ ನಿಸರ್ಗ ಎಂಬ ಹೆಣ್ಣಾನೆಯನ್ನು ಕಳುಹಿಸಲಾಗಿತ್ತು.

ಇನ್ನ ರಾಂಪುರ ಆನೆ ಶಿಬಿರದಲ್ಲಿ 15 ಆನೆಗಳು ಉಳಿದಿವೆ ಎಂದು ಸಿಎಫ್‌ಓ ಡಾ.ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

 

- Advertisement -spot_img

More articles

- Advertisement -spot_img

Latest article