No menu items!
11.1 C
Munich
Wednesday, April 29, 2026

ಫ್ರೀಡಂ251 ಸ್ಮಾರ್ಟ್ ಫೋನ್ ಬುಕ್ಕಿಂಗ್ ಕ್ಲೋಸ್..!

Must read

ರಿಂಗಿಂಗ್ ಬೆಲ್ಸ್ ನ ಫ್ರೀಡಂ251 ರೂಪಾಯಿ ಮೊತ್ತದ ಸ್ಮಾರ್ಟ್ ಫೋನ್ ಫೆ.18ರ ಬೆಳಗ್ಗೆ 6ಗಂಟೆಯಿಂದ ಆನ್ ಲೈನ್ ಬುಕ್ಕಿಂಗ್ ಆರಂಭವಾಗಿತ್ತು. ಬಳಿಕ ತಾಂತ್ರಿಕ ದೋಷದಿಂದಾಗಿ ಬುಕ್ಕಿಂಗ್ ಸ್ಥಗಿತಗೊಂಡಿತ್ತು. ಶುಕ್ರವಾರವೂ ಸ್ಮಾರ್ಟ್ ಫೋನ್ ಬುಕ್ಕಿಂಗ್ ವರ್ಕ್ ಆಗ್ತಿತ್ಫ್ತು. ಅಲ್ಲದೇ ರಿಂಗಿಂಗ್ ಬೆಲ್ಸ್ ನ ಪ್ರಕಟಣೆಯಂತೆ ಫೆ.21ರವರೆಗೆ ಬುಕ್ಕಿಂಗ್ ಗೆ ಅವಕಾಶ ಇತ್ತು. ಆದರೆ ಇದೀಗ ಫ್ರೀಡಂ 251 ಡಾಟ್ ಕಾಮ್ ಪೇಜ್ ಗೆ ಲಾಗಿನ್ ಆದರೆ ಬುಕ್ಕಿಂಗ್ ಕ್ಲೋಸ್ಡ್ ಎಂಬುದನ್ನು ನಮೂದಿಸಿದ್ದಾರೆ.

ಈಗಾಗಲೇ ಜಗತ್ತಿನ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ “ಫ್ರೀಡಂ 251” ಬುಕ್ ಮಾಡಿರೋರು, ಅಷ್ಟೊಂದು ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಸಿಗದೆಂಗೆ?.. ಅದರ ಗುಣಮಟ್ಟ ಎಂಥಾ ಕೀಳುಮಟ್ಟದಲ್ಲಿರುತ್ತೆ? ಕಂಪನಿ ಮೊಬೈಲ್ ಕೊಡೋಕೆ ಅದರ ಫ್ಯಾಕ್ಟರಿನೇ ಇಲ್ಲ.! ಹೀಗೆ ನಾನಾ ರೀತಿಯ ಟೀಕೆಗಳನ್ನು ಕೇಳಿ ನೀವು ನಿರಾಶಾಗಿದ್ದೀರಾ? ರೀ ಅದಕ್ಕೆಲ್ಲ ತಲೆಕೆಡಿಸಿ ಕೊಳ್ಳಬೇಡಿ..! ಕೇಂದ್ರ ದೂರ ಸಂಪರ್ಕ ಸಚಿವಾಲಯವೇ ರಿಂಗಿಂಗ್ ಬೆಲ್ ಮೇಲೊಂದು ಕಣ್ಣಿಟ್ಟಿದೆ…!
ಹೌದು ಇದು ನಿಜ, 2500 ಸಾವಿರ ರೂಗಳಿಗಿಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಕೊಡೋಕೆ ಸದ್ಯದ ಲೆಕ್ಕಾಚಾರದ ಪ್ರಕಾರ ಆಗಲ್ಲ…251 ರೂಗೆ ಮೊಬೈಲ್ ಪೂರೈಸೋಕೆ ಆಗದೇ ಇಲ್ಲ….ಇನ್ನೊಂದು ಟೀಕೆಗಳು ಎದುರಾಗಿರೊದ್ರಿಂದ ಸ್ವತಃ ಕೇಂದ್ರ ದೂರ ಸಂಪರ್ಕ ಸಚಿವಾಲಯವೇ ‘ ಫ್ರೀಡಂ 251’ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ರಿಂಗಿಂಗ್ ಬೆಲ್ ಮೇಲೆ ನಿಗಾ ಇಟ್ಟಿದೆ

ಮೊದಲ ದಿನ ಅಪರಿಮಿತ ಬೇಡಿಕೆಯಿಂದಾಗಿ ಕ್ರ್ಯಾಶ್ ಆಗಿದ್ದ ವೆಬ್ ಸೈಟ್ ಅನ್ನು ಭರವಸೆಯಂತೆ ಕಂಪನಿ ಎರಡನೇ ದಿನಕ್ಕೆ ,ಅಂದರೆ ಶುಕ್ರವಾರಕ್ಕೆ ಸರಿಪಡಿಸಿತ್ತು..! ಆದರೆ ಮರುಚಾಲ್ತಿಯಾದ ವೆಬ್ ಸೈಟ್ ಸಿಕ್ಕಾಪಟ್ಟೆ ಸ್ಲೋ ಇತ್ತೆಂಬುದು ಬೇರೆ ಮಾತು..!
ತಮ್ಮ ಕಂಪನಿಯ ಉತ್ಪನ್ನಕ್ಕೆ ಭಾರಿ ಬೇಡಿಕೆ ಇರೋದಕ್ಕೆ ಸಂತಸ ವ್ಯಕ್ತಪಡಿಸಿರುವ ರಿಂಗಿಂಗ್ ಬೆಲ್ ನಿರ್ದೇಶಕ ಮೋಹಿತ್ ಗೋಯಲ್, ನಾವು 25ಲಕ್ಷ  ಆರ್ಡರ್ ಗಳನ್ನು ಮಾತ್ರ ಸ್ವೀಕರಿಸುತ್ತೇವೆ..ಎಲ್ಲಾ 25ಲಕ್ಷ ಫೋನ್ ಗಳನ್ನು ಹೇಳಿರುವಂತೆಯೇ ಜೂನ್ 30ರೊಳಗೆ ತಲುಪಿಸುತ್ತೇವೆಂದು ಶೇ.ನೂರಕ್ಕೆ ನೂರು ಭರವಸೆ ನೀಡುವುದಾಗಿ ಹೇಳಿದ್ದಾರೆ..!

https://www.youtube.com/watch?list=PLrnE4LMxty4Z_NcOomNU87RxS8JHcosRz&v=8sLUAruDnbU

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

 

ಫ್ರೀಡಂ251 ಸ್ಮಾರ್ಟ್ ಫೋನ್ ಗೆ ಪೇಮೆಂಟ್ ಮಾಡುವುದು ಹೇಗೆ..?!

ವಾಹ್..! ಈ ಕಲ್ಲಿನ ಮೇಲೆ ಬೆಂಕಿ ಹಚ್ಚಿದ್ರೆ ವೈ-ಫೈ ಸಿಗ್ನಲ್ ಸಿಗುತ್ತೆ…! ಇದು ತಮಾಷೆ ಅಲ್ವೇ ಅಲ್ಲ..!

ಐದೇ ನಿಮಿಷದಲ್ಲಿ ನಮ್ಮ ಭಾರತ ನೋಡಿ..! ಈ ವೀಡಿಯೋದಲ್ಲಿದೆ ನಮ್ಮ ಭಾರತ..!

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article