ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಶಾಕ್..! ಜೀರೋ ಬಿಲ್ ಬರ್ತಿದ್ದ ಮನೆಗಳಿಗೆ ಈಗ ಸಾವಿರಾರು ರೂಪಾಯಿ ಕರೆಂಟ್ ಬಿಲ್..!
ಬೆಂಗಳೂರು: ಬೆಂಗಳೂರಿನಲ್ಲಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಮತ್ತೆ ಕರೆಂಟ್ ಬಿಲ್ ಶಾಕ್ ಎದುರಾಗಿದೆ. ಮೊನ್ನೆ ಶಿವಾಜಿನಗರದ ಮಖಾನ್ ಕಾಂಪೌಂಡ್ ಏರಿಯಾದ ಜನರಿಗೆ ಸಾವಿರಾರು ರೂಪಾಯಿ ಬಿಲ್ ಬಂದ ಬೆನ್ನಲ್ಲೇ, ಇದೀಗ ಜಯನಗರ ಮತ್ತು ಬಸವನಗುಡಿ ನಿವಾಸಿಗಳಿಗೂ ಇದೇ ರೀತಿಯ ಶಾಕ್ ಎದುರಾಗಿದೆ.ಗೃಹಜ್ಯೋತಿ ಯೋಜನೆಯಡಿ ಜೀರೋ ಬಿಲ್ ಅಥವಾ ಕಡಿಮೆ ಮೊತ್ತದ ಬಿಲ್ ಪಡೆಯುತ್ತಿದ್ದ ಕೆಲವರಿಗೆ ಇದೀಗ ಏಕಾಏಕಿ ನಾಲ್ಕು ಸಾವಿರ, ಐದು ಸಾವಿರ ರೂಪಾಯಿವರೆಗೂ ವಿದ್ಯುತ್ ಬಿಲ್ ನೀಡಲಾಗಿದೆ.ಕಳೆದ ತಿಂಗಳಲ್ಲೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಆಗ ತಾಂತ್ರಿಕ ದೋಷದಿಂದ ಬಿಲ್ ಮೊತ್ತದಲ್ಲಿ ವ್ಯತ್ಯಾಸವಾಗಿದೆ ಎಂದು ಬೆಸ್ಕಾಂ ಸಮಜಾಯಿಷಿ ನೀಡಿತ್ತು. ಆದರೆ ಇದೀಗ ಮತ್ತೆ ದುಬಾರಿ ಬಿಲ್ ಬಂದಿರುವುದು ಬೆಂಗಳೂರಿಗರ ಆಕ್ರೋಶಕ್ಕೆ ಕಾರಣವಾಗಿದೆ.ಹಾಗಾದ್ರೆ ಇದು ನಿಜವಾದ ಬಿಲ್ಲಾ..? ಅಥವಾ ತಾಂತ್ರಿಕ ಸಮಸ್ಯೆಯಿಂದ ಬಂದಿರುವ ಬಿಲ್ಲಾ..? ಬೆಸ್ಕಾಂ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಗೃಹಜ್ಯೋತಿ ಫಲಾನುಭವಿಗಳಿಗೆ ಏಕಾಏಕಿ ಸಾವಿರಾರು ರೂಪಾಯಿ ಬಿಲ್ ಬಂದಿರುವುದಕ್ಕೆ ಕಾರಣವೇನು ಎಂಬ ಪ್ರಶ್ನೆ ಇದೀಗ ಎದುರಾಗಿದೆ.



