No menu items!
10.1 C
Munich
Sunday, October 11, 2026

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಸಂಬಂಧ ಇಂದು ಸಭೆ

Must read

ಬೆಂಗಳೂರು : ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಸಂಬಂಧ ಇಂದು ಸ್ಥಳೀಯ ಶಾಸಕ ಜಮೀರ್​ ಅಹ್ಮದ್ ಖಾನ್​​​ ಸಭೆ ಕರೆದಿದ್ದಾರೆ. ಜುಲೈ 12ರಂದು ಚಾಮರಾಜಪೇಟೆ ಸ್ಥಳೀಯರು ಬಂದ್ ಗೆ ಕರೆ ನೀಡಿದ್ದಾರೆ. ಹೀಗಾಗಿ ಬಿಬಿಎಂಪಿಯ ಮಾಜಿ ಕಾರ್ಪೊರೇಟರ್​​​ಗಳ ಜತೆ ಚರ್ಚಿಸಲಿದ್ದಾರೆ.

ಚಾಮರಾಜಪೇಟೆ ನಾಗರಿಕರ ಒಕ್ಕೂಟದ ವೇದಿಕೆಗೆ ಪ್ರತಿತಂತ್ರ ಹೆಣೆಯಲು ಚಿಂತನೆ ನಡೆಸಿದ್ದಾರೆ. ಮಲೆ ಮಹದೇಶ್ವರಸ್ವಾಮಿ ದೇಗುಲ ಟ್ರಸ್ಟ್, ಅಯ್ಯಪ್ಪ ದೇವಸ್ಥಾನ ಟ್ರಸ್ಟ್ ಸಮಿತಿ, ಸುಬ್ರಹ್ಮಣ್ಯ ಸ್ವಾಮಿ ಭಜನಾ ಸೇವಾ ಮಂಡಳಿ, ಚಾಮರಾಜಪೇಟೆ ಕನ್ನಡ ರಾಜ್ಯೋತ್ಸವ ಸಮಿತಿ, ಚಾಮರಾಜಪೇಟೆ ಕನ್ನಡ ಸಾಂಸ್ಕೃತಿಕ ಕೇಂದ್ರ, ವರ್ತಕರ ಸಂಘ, ಚಾಮರಾಜಪೇಟೆ ರೆಸಿಡೆನ್ಸ್ ವೆಲ್ ಫೇರ್ ಅಸೋಸಿಯೇಷನ್ ಸೇರಿ 10ಕ್ಕೂ ಹೆಚ್ಚು ಸಂಘಟನೆಗಳಿಗೆ ಆಹ್ವಾನ ನೀಡಲಾಗಿದೆ. ಸಂಸದ ಪಿಸಿ ಮೋಹನ್, ಮಾಜಿ ಶಾಸಕಿ ಪ್ರಮೀಳಾ ನಾಯ್ಡು, ಮಾಜಿ ಕಾರ್ಪೊರೇಟರ್​ ಕೋಕಿಲ ಚಂದ್ರಶೇಖರ್, ಸುಜಾತ ಡಿ.ಸಿ ರಮೇಶ್, ಚಂದ್ರಶೇಖರ್‌ ಸೇರಿ ಹಲವರಿಗೆ ಆಹ್ವಾನ ನೀಡಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article