No menu items!
12.3 C
Munich
Wednesday, May 20, 2026

KSRTC ಬಸ್‌ʼಗೆ ಚುನಾವಣಾ ವೀಕ್ಷಕರಿದ್ದ ಜೀಪ್ ಡಿಕ್ಕಿ: ಇಬ್ಬರಿಗೆ‌ ಗಾಯ

Must read

ಕೊಪ್ಪಳ: ರಸ್ತೆ ಬದಿ ನಿಂತಿದ್ದ KSRTC ಸಾರಿಗೆ ಬಸ್ ಗೆ ಚುನಾವಣಾ ವೀಕ್ಷಕರಿದ್ದ ವಾಹನ ಡಿಕ್ಕಿ ಹೊಡೆದ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ವಿದ್ಯಾನಗರದಲ್ಲಿ ನಿನ್ನೆ ರಾತ್ರಿ ಜರುಗಿದೆ. ಡಿಕ್ಕಿ ರಭಸಕ್ಕೆ ಚುನಾವಣೆ ವೀಕ್ಷಕರ ಜೀಪ್ ಸಂಪೂರ್ಣ ಜಖಂಗೊಂಡಿದೆ. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಅಪಘಾತ ಸಂಭವಿಸಿದೆ. ಚುನಾವಣೆ ವೀಕ್ಷಕರ ವಾಹನದ ಡ್ರೈವರ್ ಶಿವಾನಂದಗೆ ಗಂಭೀರಗಾಯವಾಗಿದೆ. ಓರ್ವ ಪೇದೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಗಂಗಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿದ್ಯಾನಗರದಲ್ಲಿ ನಿನ್ನೆ ರಾತ್ರಿ ಘಟನೆ ಜರುಗಿದೆ. ಮೀನುಗಾರಿಕೆ ಇಲಾಖೆಗೆ ಸೇರಿದ ವಾಹನ ಇದಾಗಿದ್ದು, ಘಟನೆ ಮಾಹಿತಿ ಪಡೆದು ಗಂಗಾವತಿ ತಹಶಿಲ್ದಾರ್ ಯು.ನಾಗರಾಜ್ ಆಸ್ಪತ್ರೆಗೆ ಧಾವಿಸಿದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

- Advertisement -spot_img

More articles

- Advertisement -spot_img

Latest article