No menu items!
12.4 C
Munich
Wednesday, April 29, 2026

99ರಷ್ಟು ಶೇರುಗಳನ್ನು ದಾನ ಮಾಡುತ್ತಿರುವ ಫೇಸ್ ಬುಕ್ ಸಿಇಓ ಮಾರ್ಕ್ ಜುಕರ್ ಬರ್ಗ್ ..!

Must read

ಫೇಸ್ ಬುಕ್ ಸಂಸ್ಥಾಪಕ ಹಾಗೂ ಸಿಇಓ ಮಾರ್ಕ್ ಜುಕರ್ ಬರ್ಗ್ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಏಕೆಂದರೆ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಅದು ಬೇರ್ಯಾರೂ ಅಲ್ಲ ಜುಕರ್ ಬರ್ಗ್ ಪುತ್ರಿ..! ಯೆಸ್.. ಮಾರ್ಕ್ ಜುಕರ್ ಬರ್ಗ್ ಈಗ ತಂದೆಯಾಗಿ ಪ್ರಮೋಷನ್ ಪಡೆದಿದ್ದಾರೆ. ಇದೇ ಖುಷಿಯಲ್ಲಿರುವ ಅವರು ತಮ್ಮ ಒಡೆತನದಲ್ಲಿರುವ ಶೇಕಡಾ 99ರಷ್ಟು ಷೇರುಗಳನ್ನು ದಾನ ಧರ್ಮದ ಚಟುವಟಿಕೆಗಳಿಗೆ ಬಳಸಿಕೊಳ್ಳುವುದಾಗಿ ಹೇಳಿದ್ದಾರೆ.
ಮಾರ್ಕ್ ಜುಕರ್ ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಕಿಲ್ಲಾ ಚ್ಯಾನ್ ರವರು ತಮ್ಮ ಬಳಿ ಇರುವ 45 ಬಿಲಿಯನ್ ಮೊತ್ತದ 99ರಷ್ಟು ಶೇರುಗಳನ್ನು ದಾನಧರ್ಮದ ಚಟುವಟಿಕೆಗೆ ಬಳಕೆ ಮಾಡುವುದಾಗಿ ಘೋಷಿಸಿದ್ದಾರೆ. ವಿಶೇಷವೆಂದರೆ ಇಲ್ಲಿಯವರೆಗೆ ಯಾವುದೇ ವ್ಯಕ್ತಿ ಇಷ್ಟು ಪ್ರಮಾಣದ ಷೇರುಗಳನ್ನು ದಾನವನ್ನಾಗಿ ನೀಡಿದ ಉದಾಹರಣೆ ಇಲ್ಲ. ಅಂತಹ ಮಹಾನ್ ಕಾರ್ಯವನ್ನು ಮಾರ್ಕ್ ಜುಕರ್ ಬರ್ಗ್ ರವರು ತಮ್ಮ ಪುತ್ರಿಯ ನೆನಪಿಗಾಗಿ ಮಾಡಿದ್ದಾರೆ.
ಫೇಸ್ ಬುಕ್ ನೀಡುವ ಈ ಹಣದಿಂದ ಆರೋಗ್ಯ, ಆರ್ಥಿಕಾಭಿವೃದ್ಧಿ, ಸಂಶೋಧನಾ ಕ್ಷೇತ್ರಗಳಿಗೆ ಅನುಕೂಲವಾಗಲಿದೆ. ನಮ್ಮ ಈ ಹಣ ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿರದೇ, ನ್ಯಾಯ, ಮಾನವಾಭಿವೃದ್ಧಿ ಸೇರಿದಂತೆ ಹತ್ತಾರು ಕೆಲಸಗಳಿಗೆ ಉಪಯೋಗವಾಗಲಿದೆ ಎಂದು ಮಾರ್ಕ್ ಜುಕರ್ ಬರ್ಗ್ ಹೇಳಿದ್ದಾರೆ. ವಿಶೇಷವೆಂದರೆ ಮಾರ್ಕ್ ಜುಕರ್ ಬರ್ಗ್ ರವರು ತಮ್ಮ ಚಾರಿಟಿಯ ಮೂಲಕ ಹತ್ತಾರು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ಪೊಲಿಯೋ, ಎಚ್ ಐವಿ ಪೀಡಿತರು, ಎಬೋಲಾಗೆ ತುತ್ತಾದವರು, ಹಿಂದುಳಿದ ಶಾಲಾ ಮಕ್ಕಳಿಗೆ ಅನುಕೂಲವಾದ ವಾತಾವರಣ ಸೃಷ್ಟಿಸಿದ್ದಾರೆ. ಅಲ್ಲದೇ ಅತಿ ಹಿಂದುಳಿದ ದೇಶಗಳಲ್ಲಿ ಇಂಟರ್ನೆಟ್ ಇಲ್ಲದೆಯೂ ಫೇಸ್ ಬುಕ್ ಬಳಕೆ ಮಾಡುವ ಅವಕಾಶವನ್ನೂ ನೀಡಿದ್ದಾರೆ..!
ಕೋಟಿ ಕೋಟಿ ಹಣ ದುಡಿದರೂ ಕೂಡಾ ನಯಾಪೈಸೆ ಬಿಚ್ಚದ ಮಂದಿಯ ಮಧ್ಯೆ, ತನ್ನ ಪುತ್ರಿಯ ಜನನದ ನೆನಪಿಗಾಗಿ ಮಾರ್ಕ್ ಜುಕರ್ ಬರ್ಗ್ ಮಾಡುತ್ತಿರುವ ಈ ದಾನ-ಧರ್ಮ ಇಡೀ ವಿಶ್ವಕ್ಕೇ ಮಾದರಿಯಾಗಿದೆ.

  • ರಾಜಶೇಖರ ಜೆ

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article