No menu items!
29.6 C
Munich
Thursday, June 18, 2026

ಜೀವ ಉಳಿಸಿದ್ದ ಪತ್ನಿಯನ್ನೇ ಕೊಂದ ಪಾಪಿ ಗಂಡ!

Must read

ಮೈಸೂರು:- ಜಿಲ್ಲೆಯ ರಾಜೀವ್ ನಗರದಲ್ಲಿ ಜೀವ ಉಳಿಸಿದ್ದ ಪತ್ನಿಯನ್ನೇ ಪತಿ ಕೊಲೆ ಮಾಡಿರುವ ಘಟನೆ ಜರುಗಿದೆ. ನವೀದಾ ಮೃತ ದುರ್ದೈವಿ. ಅಕ್ಬರ್​ ಅಲಿ ಕೊಲೆ ಮಾಡಿರುವ ಆರೋಪಿ ಎಂದು ಹೇಳಲಾಗಿದೆ.

ಈ ಹಿಂದೆ ಅಕ್ಬರ್ ಅಲಿ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗ, ಪತ್ನಿ ನವೀದಾ ತನ್ನ ತವರು ಮನೆಯವರ ನೆರವಿನಿಂದ ಪತಿಗೆ ಚಿಕಿತ್ಸೆ ಕೊಡಿಸಿದ್ದಳು. ಅಕ್ಬರ್​ ಅಲಿ ಗುಣಮುಖನಾಗಿ ಬಂದ ಮೇಲೆ, ಗೂಡ್ಸ್ ಆಟೋ, ಪ್ರಾವಿಷನ್ ಸ್ಟಾಲ್​​, ಆಟೋ ಮೊಬೈಲ್ಸ್ ಅಂಗಡಿ ಹೀಗೆ ಹಲವು ವ್ಯಾಪಾರ ಮಾಡಲು ಆರಂಭಿಸಿದನು. ಇದಕ್ಕಾಗಿ ಹಲವೆಡೆ ಸಾಲ ಮಾಡಿದ್ದನು. ಮತ್ತು ನವೀದಾ ತವರು ಮನೆಯವರು ಕೂಡ ಅಕ್ಬರ್​ ಅಲಿಗೆ ಆರ್ಥಿಕ ಸಹಾಯ ಮಾಡುತ್ತಿದ್ದರು. ಈ ಮಧ್ಯೆ ನವೀದಾ ಸಣ್ಣ ಅಂಗಡಿ ನಡೆಸುತ್ತಿದ್ದು, ಹಲವು ಬಾರಿ ಪತಿಯ ಸಾಲ ತೀರಿಸಿದ್ದಳು. ಆದರು ಕೂಡ ಅಕ್ಬರ್ ಅಲಿ ಪದೇ ಪದೆ ಸಾಲ ಮಾಡುತ್ತಿದ್ದನು.​ ಈ ಸಾಲವನ್ನು ತೀರಿಸಲು ಹಣ ನೀಡು ಎಂದು ಅಕ್ಬರ್​ ಅಲಿ ಪತ್ನಿ ನವೀದಾಗೆ ಕಿರುಕುಳ ಕೊಡುತ್ತಿದ್ದನು.

ಇದೇ ವಿಚಾರಕ್ಕೆ ಫೆಬ್ರವರಿ 4ರಂದು ದಂಪತಿ ನಡುವೆ ಜಗಳ ಆಗಿತ್ತು. ಜಗಳ ತಾರಕಕ್ಕೆ ಏರಿದ್ದು, ಅಕ್ಬರ್​ ಪತ್ನಿ ನವೀದಾರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಂದು ಸಂಜೆಯಾದರೂ ನವೀದಾ ಕಾಣದಿದ್ದಾಗ ಮತ್ತು ಸಂಪರ್ಕಕ್ಕೆ ಸಿಗದಿದ್ದಾಗ ಅಕ್ಬರ್ ಅಲಿಯನ್ನು ಕುಟುಂಬಸ್ಥರು ಪ್ರಶ್ನಿಸಿದ್ದಾರೆ. ಆಗ ಅಕ್ಬರ್​ ಅಲಿ ತಂದೆ ಮನೆಗೆ ಹೋಗಿದ್ದಾಳೆ, ಅಂಗಡಿಯಲ್ಲಿ ಇದ್ದಾಳೆ ಎಂದು ಉತ್ತರ ನೀಡಿದ್ದಾನೆ. ಆದರೆ ಕುಟುಂಬಸ್ಥರು ಅನುಮಾನಗೊಂಡು ಮನೆಗೆ ಹಾಕಿದ್ದ ಬೀಗವನ್ನು ಒಳಗೆ ಹೋದಾಗ ನವೀದಾ ಅಸ್ವಸ್ಥರಾಗಿ ಬಿದ್ದಿದ್ದರು. ಕುತ್ತಿಗೆ ಮೇಲೆ ಗಾಯದ ಗುರುತುಗಳು ಇದ್ದವು. ಕೂಡಲೆ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೆ ನವೀದಾ ಪ್ರಾಣ ಪಕ್ಷಿ ಹಾರಿಹೋಗಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

- Advertisement -spot_img

More articles

- Advertisement -spot_img

Latest article