ಕಬ್ಬು ಕಟಾವು ಮಾಡುವಂತೆ ಮೈಸೂರು ಡಿಸಿ ಆದೇಶ

Must read

  1. ಟಿ.ನರಸೀಪುರ ತಾಲೂಕಿನಲ್ಲಿ ನಿಗದಿತ ಸಮಯಕ್ಕೆ ಕಬ್ಬು ಕಟಾವು ಮಾಡುವಂತೆ ಮೈಸೂರು ಡಿಸಿ ಆದೇಶಿಸಿದ್ದಾರೆ. ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ ಇಬ್ಬರು ಬಲಿಯಾಗಿದ್ದು, ಚಿರತೆಗಳ ಸೆರೆಗೆ ಕಬ್ಬಿನ ಗದ್ದೆಗಳು ಅಡ್ಡಿಯಾಗಿವೆ. ನಾಡಿಗೆ ಬಂದಿರುವ ಚಿರತೆಗಳು ಕಬ್ಬಿನ ಗದ್ದೆಯಲ್ಲಿ ಆಶ್ರಯ ಪಡೆದಿದ್ದು, ಇದರಿಂದ ಚಿರತೆಗಳ ಸೆರೆ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ. ಹಾಗಾಗಿ ನಿಗದಿತ ಸಮಯಕ್ಕೆ ಕಬ್ಬು ಕಟಾವು ಮಾಡಿ ಸಾಗಣೆ ಮಾಡುವಂತೆ ಆದೇಶಿಸಲಾಗಿದೆ. ಇನ್ನ ಗದ್ದೆಗಳಲ್ಲಿರುವ ಕಬ್ಬನ್ನು ಕಟಾವು ಮಾಡುವುದರಿಂದ ಚಿರತೆಗಳ ಚಲನವಲನಗಳನ್ನ ಪತ್ತೆ ಹಚ್ಚಿ ಆದಷ್ಟು ಬೇಗ ಸೆರೆ ಹಿಡಿಯಬಹುದಾಗಿದೆ ಎಂದು ಮೈಸೂರು ಜಿಲ್ಲಾಡಳಿತ ತಿಳಿಸಿದೆ.
- Advertisement -spot_img

More articles

- Advertisement -spot_img

Latest article