No menu items!
12.4 C
Munich
Wednesday, April 29, 2026

6 ಗುಂಡು ತಿಂದರೂ ನೆಲಕ್ಕೆ ಬೀಳದ ಭಾರತದ ಹೀರೋ..! ನಿಜ ಜೀವನದ ಸೂಪರ್ ಸ್ಟಾರ್ ಗೆ ಸೆಲ್ಯೂಟ್ ಹೊಡೆಯಿರಿ..!

Must read

ಪಾಕಿಸ್ತಾನ ನೀಡಿದ ಶಸ್ತ್ರಾಸ್ತ್ರಗಳನ್ನು ಹೊತ್ತ ಉಗ್ರರು ದೇಶ ನುಸುಳಿ ಬಂದಿದ್ದರು. ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗುವುದೇ ಅವರ ಧ್ಯೇಯವಾಗಿತ್ತು. ಆದ್ದರಿಂದ ಕಾಡೊಳಗೆ ಕುಳಿತು ಪೂರ್ವ ತಯಾರಿಯಲ್ಲಿ ತೊಡಗಿದ್ದರು. ಆದರೆ ಭಾರತ ಸೇನೆಯ ಹೆಲಿಕಾಪ್ಟರ್ ಕಣ್ಣೀಗೆ ಉಗ್ರರು ಕಾಣಿಸಿದರು. ಕ್ಷಣ ಮಾತ್ರದಲ್ಲೇ ಉಗ್ರರು ದೇಶದೊಳಗೆ ನುಸುಳಿರುವ ಸುದ್ದಿಯನ್ನು ರವಾನಿಸಲಾಯಿತು.
ಬೆಳಗ್ಗೆ 3 ಗಂಟೆ ಸುಮಾರಿಗೆ ಗರುಡಾ ಕಮ್ಯಾಂಡೋಸ್ ಪಡೆಯ 12 ಜನ ಯೋಧರು ಉಗ್ರರಿರುವ ಸ್ಥಳಗ್ಗೆ ಬಂದರು. ಅದನ್ನು ಮೂರು ತಂಡಗಳಾಗಿ ವಿಂಗಡಿಸಲಾಯಿತು. ಉಗ್ರರನ್ನು ತಡೆಗಟ್ಟಲು ಸಾರಿಗೆ ವಿಂಗ್ ತೆರಳಿತು. ಇನ್ನುಳಿದವರನ್ನು ಪಾಕ್ ಪ್ರೇರಿತ ಉಗ್ರರ ಮೇಲೆ ದಾಳಿ ಮಾಡಲು ನಿಯೋಜಿಸಲಾಯಿತು.
ಉಗ್ರರು ಎಷ್ಟು ಉತ್ಕೃಷ್ಟ ತರಬೇತಿ ಪಡೆದಿದ್ದರೆಂದರೆ ಫೈಟರ್ ಜೆಟ್ ಗಳು, ಹೆಲಿಕಾಪ್ಟರ್ ಗಳಿಗೆ ಹಾನಿಯನ್ನುಂಟು ಮಾಡಿದರು. ಆದರೂ ಕೂಡಾ ನಮ್ಮ ಸೇನೆಯ ಯೋಧರು ಬರೋಬ್ಬರಿ 80 ನಿಮಿಷಗಳ ಜಾಕ ಹೋರಾಡಿ ಎಲ್ಲಾ ಉಗ್ರರನ್ನು ಸದೆಬಡಿದರು. ಅದರಲ್ಲಿ 7 ಜನ ಯೋಧರು ವೀರಮರಣವನ್ನಪ್ಪಿದರು. ಇನ್ನು 20 ಜನ ಯೋಧರು ಗಾಯಗೊಂಡಿದ್ದರು. ಅದರಲ್ಲೊಬ್ಬ ಶೈಲೇಶ್ ಗೌರ್.
ಎರಡನೇ ತಂಡದಲ್ಲಿ ನಿಯೋಜಿತರಾಗಿದ್ದ ಶೈಲೇಶ್ ಬಳಿ ವೇಗವಾಗಿ ಬಳಸಬಹುದಾದ ಇಸ್ರೇಲ್ ನಿರ್ಮಿತ ರೈಫಲ್ ಮತ್ತು ಮಷಿನ್ ಗನ್ ಗಳಿದ್ದವು. ಅವುಗಳ ಸಹಾಯದಿಂದಲೇ ಉಗ್ರರ ಮೇಲೆ ಆತ ದಾಳಿ ನಡೆಸಿದ. ಆದರೆ ಹೋರಾಟದ ಮಧ್ಯೆ ಶೈಲೇಶ್ ದೇಹಕ್ಕೆ ಸುಮಾರು 6 ಗುಂಡುಗಳು ಹೊಕ್ಕಿದ್ದವು. ಆದರೂ ಕೂಡಾ ಆತ ನೆಲಕ್ಕುರುಳಿರಲಿಲ್ಲ. ಬದಲಿಗೆ ಉಗ್ರರ ವಿರುದ್ಧ ಹೋರಾಡುತ್ತಲೇ ಇದ್ದ. ಯಾವಾಗ ಎಲ್ಲಾ ಉಗ್ರರು ಹತರಾದರೋ, ಆಗಲೇ ಶೈಲೇಶ್ ಆಸ್ಪತ್ರೆಗೆ ದಾಖಲಾಗಿದ್ದ.
6 ಗುಂಡುಗಳು ಬಿದ್ದರೆ ಜೀವ ಹೋದಂತೆಯೇ ಸರಿ. ಆದರೆ ಶೈಲೇಶ್ ದೇಹ ಆ 6 ಗುಂಡುಗಳನ್ನು ಸಹಿಸಿಕೊಳ್ಳುವ ಶಕ್ತಿ ಹೊಂದಿತ್ತು. ಆದ್ದರಿಂದ ಆತ ಸಾವನ್ನು ಗೆದ್ದು ಬಂದ.
ಇಷ್ಟಕ್ಕೂ ನಿಮ್ಮ ಹೀರೋ ಯಾರು ಎಂದು ಯಾರಾದರೂ ಕೇಳಿದರೆ, ಯಾರ್ಯಾರದ್ದೋ ಹೆಸರು ಹೇಳುವ ಜನರು ಶೈಲೇಶ್ ಗೌರ್, ನಿರಂಜನ್ ಕುಮಾರ್ ರ ಹೆಸರು ಹೇಳುವಂತಾಗಬೇಕು. ಅದೇ ನಾವು ನಮ್ಮ ಸೈನಿಕರ ಸಾಹಸಕ್ಕೆ ಕೊಡುವ ಗೌರವ. ಕೇವಲ 24 ವಯಸ್ಸಿನ ಶೈಲೇಶ್ ದೇಶಕ್ಕಾಗಿ ಪ್ರಾಣ ಅರ್ಪಿಸಲು ಮುಂದಾಗಿದ್ದ. 6 ಬುಲೆಟ್ ಹೊಡೆತದ ನೋವು ನುಂಗಿ ಫೈಟರ್ ಜೆಟ್ ಇರುವ ಜಾಗಕ್ಕೆ ಉಗ್ರರಿಗೆ ಹೋಗಲು ಬಿಡದೇ, ಕೊನೆಗೆ ರಕ್ತದ ಹೊಳೆಯಲ್ಲೇ ಒಂದು ತಾಸು ಪ್ರಾಣ ಹಿಡಿದಿಟ್ಟುಕೊಂಡು ಮಲಗಿದ್ದ..! ಸಿನಿಮಾದಲ್ಲಿ ಹೀಗೆ ನಟನೆ ಮಾಡಲೂ ಅಸಾಧ್ಯವೆನಿಸುವ ಸಾಹಸ ಕೇವಲ 24 ವರ್ಷದ ಯುವಕ ಮಾಡುತ್ತಾನೆ ಎಂದರೆ ಮೈ ಜುಮ್ ಎನ್ನುತ್ತದೆ..!

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ನೋಡ್ರಪ್ಪೋ ನೋಡ್ರೀ ಇದು ದುಡ್ಡಿನ ಮರ..! ಈ ಮರದಲ್ಲಿವೆ ಅಸಂಖ್ಯಾತ ಚಿಲ್ಲರೆ ಹಣ..!

ಕನ್ನಡ ಸಿನಿಮಾಗಳಿಗೇಕೆ ಥಿಯೇಟರ್ ಗಳಸಮಸ್ಯೆ..?! -ಕಿರಿಕ್ ಕೀರ್ತಿ

`ಹಾವು ಕಚ್ಚಿತಲ್ಲೋ ತಮ್ಮಾ ಹೋಗುತೈತೆ ಜೀವಾ..’ Kannada Folk Song

ಗನ್ ಕಲ್ಚರ್ ಎಫೆಕ್ಟ್, ದೊಡ್ಡಣ್ಣನ್ ಕಣ್ಣಲ್ಲಿ ಕಣ್ಣೀರು..!

ಪ್ರೀತಿ ಎಂಥವರನ್ನೂ ಬದಲಾಯಿಸುತ್ತೆ..! ಯಾರಿಂದಲೂ ಬದಲಾಗದ ಹುಡುಗರು ಹುಡುಗಿಯಿಂದ ಬದಲಾಗ್ತಾರೆ..!

ಒಂಟಿಕಾಲಲ್ಲೇ `ಮೌಂಟ್ ಎವರೆಸ್ಟ್’ ಏರಿದ ಸಾಹಸಿ..!

ಒಂದೇ ಇನ್ನಿಂಗ್ಸ್ ನಲ್ಲಿ 1009 ರನ್ ಬಾರಿಸದ ಪೋರ..! ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಟೋ ಚಾಲಕನ ಮಗ..!

ಕನ್ನಡದವರು ಅಂದ್ರೆ ಏನಂದುಕೊಂಡಿದ್ದಾರೆ..? ಅಷ್ಟಕ್ಕೂ ಪರಿಸ್ಥಿತಿ ಯಾಕೆ ಹೀಗಾಗಿದೆ ಗೊತ್ತಾ..? ಈ ವೀಡಿಯೋ ನೋಡಿ..!

6ನೇ ಕ್ಲಾಸ್ ಫೇಲ್ ಆದವಳು ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಟಾಪ್ 2 ರ್ಯಾಂಕ್ ಪಡೆದಳು..!

ಕಳ್ಳನಿಂದ ಅಮ್ಮನನ್ನು ಕಾಪಾಡಿದ 13ರ ಪೋರ..! ಕೆಚ್ಚೆದೆಯ ಬಾಲಕನಿಗೆ ನ್ಯಾಷನಲ್ ಬ್ರೇವರಿ ಅವಾ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article