No menu items!
13.9 C
Munich
Wednesday, April 29, 2026

ನನ್ನ ದೇಶ, ನನ್ನ ಹೆಮ್ಮೆ …

Must read

ಕೆಲವರು ಜೆ.ಎನ್.ಯು ಪರವಾಗಿ ನಿಂತಿದ್ದಾರಂತೆ, ನಾನು ನನ್ನ ದೇಶದ ಪರವಾಗಿ ನಿಂತಿದ್ದೇನೆ. ಹೀಗೊಂದು ಪೋಸ್ಟ್ ನನ್ನ ಫೇಸ್ ಬುಕ್ಕಲ್ಲಿ ಹಾಕಿದ್ದೆ.ಅದರ ಕೆಳಗೊಂದು ಕಮೆಂಟ್ ಬಂತು, ‘ ನೀವು, ಬಿಜೆಪಿ,ಆರೆಸ್ಸೆಸ್,ಎಬಿವಿಪಿ ಇರಬೇಕು’ ಅಂತ..! ಅರೆ ಇದೆಂಥಾ ಕಮೆಂಟು, ನನ್ನ ದೇಶದ ಪರವಾಗಿ ನಾನಿದ್ದೇನೆ ಅನ್ನೋದು ಬಿಜೆಪಿ ಪರ ಅನ್ನೋ ಅರ್ಥ ಕೊಡುತ್ತಾ..? ಕೆಲವರು ಹೇಳೋ ಪ್ರಕಾರ ಈ ದೇಶ ಬಿಜೆಪಿ, ಆರೆಸ್ಸೆಸ್, ಎಬಿವಿಪಿಗೆ ಸೇರಿದ್ದು. ಹಾಗಾಗಿ ಈ ದೇಶವನ್ನು ಪ್ರೀತಿಸೋರು, ದೇಶದ ಪರ ನಿಲ್ಲೋರೆಲ್ಲಾ ದೇಶ ಭಕ್ತರಲ್ಲ, ಮೋದಿ ಭಕ್ತರು..! ದೇಶ ಪ್ರೇಮಕ್ಕೂ ರಾಜಕೀಯಕ್ಕೂ ಎತ್ತಣಿಂದೆತ್ತ ಸಂಬಂಧ ಅಂತಾನೇ ಅರ್ಥ ಆಗಲ್ಲ..! ಮೋದಿ ಬಿಜೆಪಿಯ ಪ್ರಧಾನಿಯಲ್ಲ, ದೇಶದ ಪ್ರಧಾನಿ ಅನ್ನೋ ಮಿನಿಮಂ ಕಾಮನ್ ಸೆನ್ಸ್ ಕೊರತೆ ಎದ್ದು ಕಾಣ್ತಿದೆ. ಮೋದಿ, ಆರೆಸ್ಸೆಸ್, ಎಬಿವಿಪಿ ವಿರೋಧಿಸೋ ಭರದಲ್ಲಿ ದೇಶದ್ರೋಹಿಗಳನ್ನೂ ಬೆಂಬಲಿಸೋ ಮಟ್ಟಕ್ಕಿಳಿದಿರೋರಿಗೆ ಏನು ಹೇಳೋದು ನೀವೇ ಹೇಳಿ.
ಅಷ್ಟಕ್ಕೂ ಅವರು ಏನು ಮಾಡ್ತಿದ್ದಾರೆ ಅನ್ನೋ ಪರಿಜ್ಞಾನವೇ ಅವರಿಗಿಲ್ಲ. ನಿಜವಾದ ವೀಡಿಯೋ ತೋರಿಸಿದ್ರೆ ‘ಇದು ಎಬಿವಿಪಿಯವರು ಬೇಕಂತಾ ಮಾಡಿದ್ದು’ ಅಂತಾರೆ. ಇನ್ನೊಂದು ಫೇಕ್ ವೀಡಿಯೋ ನೋಡಿ ‘ಇದು ನಿಜವಾದ ವೀಡಿಯೋ’ ಅಂತಾರೆ..! ವಾದ, ವಿವಾದಕ್ಕೆ ಉತ್ತರ ಕೊಡಬಹುದು, ವಿತಂಡವಾದಿಗಳಿಗೆ ಹೇಗೆ ಉತ್ತರಿಸೋದು..? ಈ ದೇಶಕ್ಕೆ ಮೋದಿ ಪ್ರಧಾನಿಯಾದ ಮಾತ್ರಕ್ಕೆ ದೇಶವನ್ನೇ ‘ಸರ್ವನಾಶ’ ಮಾಡ್ತೀವಿ ಅನ್ನೋರಿಗೆ ಏನ್ ತಗೊಂಡು ಹಾಕೋದು..? ಈ ದೇಶ ಮೋದಿಯವರದ್ದಲ್ಲ ಕಣ್ರೋ, ದೇಶದ ಪ್ರಜೆಗಳದ್ದು..! ನಮ್ಮದು, ನಿಮ್ಮದು…! ಎಲ್ಲಾ ಕಡೆ ಆ ಕನ್ಹಯ್ಯ ‘ ನಾವು ಸ್ವಾತಂತ್ರ್ಯ ಕಿತ್ಕೋತೀವಿ, ನಮಗೆ ಸ್ವಾತಂತ್ರ್ಯ ಬೇಕು, ಸ್ವಾತಂತ್ರ್ಯ ಬೇಕು. ಕಾಶ್ಮೀರ ನಮ್ಮದು’ ಅಂತ ಮಾಡ್ತಿರೋ ಭಾಷಣ ಹರಿದಾಡ್ತಿದೆ. ನೀವುಗಳು ಅಷ್ಟಕ್ಕೂ ಅವನು ಹೇಳಿದ್ದರಲ್ಲಿ ತಪ್ಪೇನಿದೆ ಅಂತೀರಿ..? ಅವನು ಸ್ವಾತಂತ್ರ್ಯ ಕೇಳ್ತಿರೋದು ನಮ್ಮ ಭಾರತ ದೇಶಕ್ಕಲ್ಲ, ಕಾಶ್ಮೀರಕ್ಕೆ..! ಅದೂ ಕಾಶ್ಮೀರವನ್ನ ಪಾಕಿಸ್ತಾನಕ್ಕೆ ಬಿಟ್ಟು ಕೊಡೋಕೆ..! ಇಷ್ಟು ವರ್ಷ ಇಲ್ಲದ ಕಾಶ್ಮೀರ ಭೂತ ಮೋದಿ ಪ್ರಧಾನಿಯಾದ ಕೂಡ್ಲೆ ಮೈಮೇಲೆ ಬಂದಿದ್ದು ಹೇಗೆ..? ಸ್ವಲ್ಪ ಯೋಚಿಸಿ…
ಅವತ್ತು ಅಫ್ಜಲ್ ಗುರು ಎಂಬ ಈ ರಾಷ್ಟ್ರದ ಶತೃವಿನ ಫೋಟೋ ಹಿಡ್ಕೊಂಡು ಹುತಾತ್ಮ ಅಂತ ಘೋಷಣೆ ಕೂಗಿದ್ರಲ್ಲಾ, ಅವನು ಸಂಸತ್ ನಲ್ಲಿ ರಕ್ತದ ಹೊಳೆ ಹರಿಸಿದಾಗ ಎಲ್ಲಿದ್ರಿ..? ಆಯ್ತು, ನಿಮ್ಮ ಪ್ರಕಾರ ಅವನನ್ನು ಗಲ್ಲಿಗೇರಿಸಿದ್ದು ತಪ್ಪು ಅಲ್ವಾ..? ಕೂಗಿ ಅವತ್ತು ಅಧಿಕಾರದಲ್ಲಿದ್ದ ಪಕ್ಷದ ವಿರುದ್ಧ ಘೋಷಣೆ..! ಅದರ ಬದಲಾಗಿ ಅದೇ ಪಕ್ಷದ ನಾಯಕನನ್ನೇ ನಿಮ್ಮ ಲೀಡರ್ ಮಾಡ್ಕೊಂಡಿದೀರಿ..? ನಿಮ್ಮ ಹೋರಾಟಕ್ಕೆ ಲಾಜಿಕ್ ಕೊರತೆ ಎದ್ದು ಕಾಣ್ತಿದೆ. ಸರಿ ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತ ನೇಣಿಗೇರಿಸಿರೋದು ಅನ್ನೋ ಲೆವೆಲ್ಲಿಗೆ ಊಟ ನಿದ್ದೆ ಬಿಟ್ಟು ಹೋರಾಡ್ತಾ ಇದೀರಲ್ಲ, ಈ ಹಿಂದೆ ಇಂದಿರಾ ಗಾಂಧಿಯವರನ್ನು ಕೊಂದ. ಕೆಹರ್ ಸಿಂಗ್,ಬೀಂಟ್ ಸಿಂಗ್ ಅವರನ್ನು ಗಲ್ಲಿಗೇರಿಸಿದ್ದೂ ತಪ್ಪು ಅಂತ ಹೋರಾಟ ಮಾಡಿ ನೋಡೋಣ..! ಇದು ಸ್ಪಷ್ಟ ರಾಜಕೀಯ… ಸಂಸತ್ತಲ್ಲಿ ಹತ್ತಾರು ಜನ ಸತ್ತಾಗ ಮೌನ, ಮುಂಬೈ ಬ್ಲಾಸ್ಟಲ್ಲಿ ನೂರಾರು ಜನ ಸತ್ತಾಗ ಮೌನ, ಅದನ್ನು ಮಾಡಿದವರನ್ನು ಗಲ್ಲಿಗೇರಿಸಿದ್ರೆ ಅಯ್ಯಯ್ಯೋ ಅನ್ಯಾಯ…! ಅದೆಲ್ಲಾ ಬಿಡಿ,ಕೆಲವು ಲಾಯರ್ ಗಳು ಕನ್ಹಯ್ಯ ಕುಮಾರ್ ಗೆ ಎರಡೇಟು ಹಾಕಿದ್ರೆ ಅಯ್ಯಯ್ಯೊ ಅನ್ಯಾಯ..! ನೀವೇ ಯೋಚನೆ ಮಾಡಿ, ಎಲ್ಲೋ ಮಿಸ್ ಹೊಡೀತಾ ಇಲ್ವಾ..?
ಕೆಲವರು ದೇಶವಿರೋಧಿ ಘೋಷಣೆ ಕೂಗಿದ್ರು, ದೇಶದ ಸುಪ್ರೀಂ ಕೋರ್ಟ್ ಆರೋಪಿ ಅಂತ ಪರಿಗಣಿಸಿ ಗಲ್ಲಿಗೇರಿಸಿದವನ್ನು ಹುತಾತ್ಮ ಅಂತ ಹೇಳಿದ್ರಿ..! ಇದೆಲ್ಲಾ ಸ್ಪಷ್ಟವಾಗಿ ದೇಶ ವಿರೋಧಿ ಅಷ್ಟೆ. ಇಲ್ಲಿ ಯಾವ ಬಿಜೆಪಿ, ಕಾಂಗ್ರೆಸ್ ಹೆಸರೂ ಬರೋದಿಲ್ಲ. ಆದ್ರೆ ಇದಕ್ಕೆ ರಾಜಕೀಯ ಬೆರೆಸಿದಾಗ ದೇಶಪ್ರೇಮಕ್ಕೂ ರಾಜಕೀಯಕ್ಕೂ ನಂಟು ಶುರುವಾಗುತ್ತೆ..! ದೇಶಭಕ್ತಿ, ದೇಶ ಪ್ರೇಮ ಇರೋರೆಲ್ಲಾ ಬಿಜೆಪಿಯವರು ಅಂತ ಬಿಂಬಿಸೋದು ಬಿಡಿ. ಈ ದೇಶ ಯಾರಪ್ಪನ ಆಸ್ತಿಯೂ ಅಲ್ಲ. ದೇಶ ವಿರೋಧಿಸೋ ಯಾವ ಪಕ್ಷವಾದ್ರೂ ಸರಿ, ಯಾವನಾದ್ರು ಸರಿ, ಈ ದೇಶದ ಜನ ನೀರು ಕುಡಿಸಿಯೇ ಕುಡಿಸ್ತಾರೆ..! ಇಷ್ಟು ದಿನ ಯಾವ್ಯಾವ್ದೊ ಹೆಸರಲ್ಲಿ ರಾಜಕೀಯ ಮಾಡಿದ್ದಾಯ್ತು, ನಿಮ್ಮ ರಾಜಕೀಯ ತೆವಲಿಗೆ ನಮ್ಮ ದೇಶವನ್ನು ಬಳಸಿಕೊಂಡ್ರು ಭಾರತೀಯರು ನಿಮ್ಮ ಪಾಲಿಗೆ ತುಂಬಾ ಭಾರವಾಗ್ತಾರೆ ಹುಷಾರ್…! ನನ್ನ ದೇಶ,ನನ್ನ ಹೆಮ್ಮೆ …

  • ಕೀರ್ತಿ ಶಂಕರಘಟ್ಟ.

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಸೇನೆಗೆ ಸೇರಲು ಕನ್ನಡ ಯುವಕರ ದಂಡು ಇವರಿಗೆ ಸಿಯಾಚಿನ್ ಹುತಾತ್ಮ ಯೋಧರೇ ಪ್ರೇರಣೆ..!

ಐದೇ ನಿಮಿಷದಲ್ಲಿ ನಮ್ಮ ಭಾರತ ನೋಡಿ..! ಈ ವೀಡಿಯೋದಲ್ಲಿದೆ ನಮ್ಮ ಭಾರತ..!

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article