ಕುಸ್ತಿಗಾಗಿ ಮರಿ ಚಿರತೆ ಭರ್ಜರಿ ತಯಾರಿ…!

Must read

ದುನಿಯಾ ವಿಜಯ್ ಅವರ ಮುಂದಿನ ಸಿನಿಮಾ‌’ಕುಸ್ತಿ’. ಈ ಸಿನಿಮಾ ಮೂಲಕ ಅವರ ಮಗ ಸಾಮ್ರಾಟ್ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ.
ಫಿಟ್ನೆಸ್ ಬಗ್ಗೆ‌ ಮೊದಲಿಂದಲೂ ಕಾಳಜಿ ಹೊಂದಿರುವ ದುನಿಯಾ ವಿಜಯ್ ಕುಸ್ತಿ ಸಿನಿಮಾಕ್ಕಾಗಿ ತಮ್ಮ ದೇಹವನ್ನು ಹುರಿಗೊಳಿಸುತ್ತಿದ್ದಾರೆ. ಕುಸ್ತಿಗಾಗಿ ತಮ್ಮ ಮಗ ಸಾಮ್ರಾಟ್ ನನ್ನೂ ತಯಾರು‌ ಮಾಡ್ತಿದ್ದಾರೆ.


ನುರಿತರಿಂದ ಸಾಮ್ರಾಟ್ ಗೆ ತರಬೇತಿ‌ ಕೊಡಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್, ಏಕಲವ್ಯ ಪ್ರಶಸ್ತಿ ವಿಜೇತ ಪ್ರಸಾದ್ ಅವರು ಸಾಮ್ರಾಟ್ ನನ್ನು ರೆಡಿ ಮಾಡ್ತಿದ್ದಾರೆ. ಜೊತೆಗೆ ಸ್ಟಂಟ್ ಮಾಸ್ಟರ್ ಲೋಕೇಶ್ ಗೆ ಸ್ಟಂಟ್ ಕಲಿಸುವಂತೆ ವಿಜಿ ಹೇಳಿದ್ದಾರೆ.
ಮಗ ಕುಸ್ತಿಗಾಗಿ ವಹಿಸುತ್ತಿರುವ ಶ್ರಮವನ್ನು ವಿಜಿ ಸಾಮಾಜಿಕವಾಗಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

- Advertisement -spot_img

More articles

- Advertisement -spot_img

Latest article