No menu items!
8 C
Munich
Saturday, May 2, 2026

ಅಮೆರಿಕದಲ್ಲಿ ಎಚ್1ಬಿ ವೀಸಾದಡಿ ಬಂದು ನೆಲೆಸಿರೋರಿಗೆ ಶಾಕ್…!

Must read

ಅಮೆರಿಕಕ್ಕೆ ಎಚ್1 ಬಿ ವೀಸಾದಡಿ ಬಂದು ನೆಲೆಸಿರುವವರ ಸಂಗಾತಿಗೆ ಅಮೆರಿಕದಲ್ಲಿ ನೌಕರಿ ಮಾಡಲು ನೀಡಲಾಗಿರುವ ಪರವಾನಗಿಯನ್ನು ರದ್ದುಪಡಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಿಂತನೆ ಅಂತಿಮ ಹಂತಕ್ಕೆ ಬಂದಿದೆ. ಈ ವರ್ಷದ ಬೇಸಿಗೆಯ ಕೊನೆಯಲ್ಲಿ ಈ ಬಗ್ಗೆ ಆದೇಶ ಹೊರಡಿಸಲಾಗುವುದು ಎಂಬ ಮಾಹಿತಿಯನ್ನು ವಲಸೆ ವಿಭಾಗದ ಉನ್ನತಾಧಿಕಾರಿಗಳು ಸಂಸದರಿಗೆ ನೀಡಿದ್ದಾರೆ‌.‌


ಎಚ್ 1ಬಿ ವೀಸಾದರರ ಸಂಗಾತಿಗಳು ಎಚ್ 4 ವೀಸಾದಡಿ ಅಮೆರಿಕದಲ್ಲಿ ನೆಲೆಸಿದ್ದಾರೆ. 2005ರಲ್ಲಿ ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದಾಗ ಇವರಿಗೂ ಕೆಲಸ ಮಾಡಲು ಪರವಾನಗಿ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಸುಮಾರು 71000ಎಚ್ 4 ವೀಸಾದರರು‌, ಅಮೆರಿಕದಲ್ಲಿ ನೌಕರಿ ಮಾಡ್ತಿದ್ದಾರೆ. ಇವರಲ್ಲಿ ಶೇ 93ರಷ್ಟು ಮಂದಿ ಭಾರತೀಯರಾಗಿದ್ದಾರೆ. ಶೇ. 94ರಷ್ಟು ಮಹಿಳೆಯರಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article