No menu items!
12.5 C
Munich
Tuesday, April 28, 2026

ಖಾಸಗಿ ವಿಡಿಯೋ ಇಟ್ಟುಕೊಂಡು 1.5 ಕೋಟಿಗೆ ಬೇಡಿಕೆ! ಉದ್ಯಮಿಗೆ ಖೆಡ್ಡಾ ತೋಡಿದ್ದಇನ್‌ಫ್ಲೂಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ FIR

Must read

ಹಣ ಕಂಡರೆ ಹೆಣ ಕೂಡ ಬಾಯಿ ಬಿಡುವ ಕಾಲ ಇದು. ಈ ಕಾಲದಲ್ಲಿ ನೈತಿಕತೆ, ಮಾನ, ಮರ್ಯಾದೆಯನ್ನು ಹಲವರು ಗಾಳಿಗೆ ತೂರಿರುತ್ತಾರೆ. ಇವರದ್ದೇನಿದ್ದರೂ ಬಗು ಬೇಗ ಶ್ರೀಮಂತವಾಗಬೇಕೆಂಬ ಹಂಬಲ ಅಷ್ಟೇ. ಅದಕ್ಕಾಗಿ ಎಂತಕ ಕೀಳು ಮಟ್ಟಕ್ಕೆ ಕೂಡ ಇವರು ಇಳಿಯಬಲ್ಲರು. ಅದರಲ್ಲಿಯೂ ಈಗೀಗ ಹನಿ ಟ್ಯ್ರಾಪ್ ಎಂಬ ಜಾಲ ಹಲವಾರು ಶ್ರೀಮಂತರ ನಿದ್ದೆ ಕೆಡಿಸಿದೆ. ಸಲುಗೆಯ ಮಾತು.. ಅಂದವಾದ ನಗು.. ಸೌಂದರ್ಯಕ್ಕೆ ಮಾರು ಹೋದರೆ ಪಂಗನಾಮ ಗ್ಯಾರಂಟಿ. ಸದ್ಯ ಇಂತಹದ್ದೇ ಮತ್ತೊಂದು ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಹೌದು, ಬೆಂಗಳೂರಿನ ಜಯನಗರ 4 ನೇ ಬ್ಲಾಕ್‌ನಲ್ಲಿ ಸೆಲೆಬ್ರೆಟಿ ಮೇಕಪ್‌ ಕ್ಲಿನಿಕ್‌ ಒಂದಿದೆ. 31 ವರ್ಷದ ಕಾರ್ತಿಕ್ ಈ ಕ್ಲಿನಿಕ್‌ನ ಮಾಲೀಕ. ತಮ್ಮ ಕ್ಲಿನಿಕ್‌ನ ಪ್ರಚಾರಕ್ಕೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ನ ಇವರು ಹುಡುಕುತ್ತಿದ್ದಾಗ ಇವರಿಗೆ ಪರಿಚಯವಾಗಿದ್ದೇ ಈ ಸಾಧನಾ ಶೆಟ್ಟಿ.

ಅದಾಗಲೇ ಈ ಸಾಧನಾ ಹಲವಾರು ಪ್ರಮೋಷನಲ್ ವಿಡಿಯೋ ಮಾಡಿದ್ದರಿಂದ ಜಯನಗರದ ಕೆಫೆಯೊಂದಕ್ಕೆ ಕ್ಲಿನಿಕ್ ಮಾಲೀಕ ಮಾತುಕತೆಗೆ ಕರೆದಿದ್ದರು. ಆದರೆ ಸಾಧನಾ ಅವರ ನಿಜವಾದ ಸಾಧನೆ ಇವರಿಗೆ ಗೊತ್ತಿರಲಿಲ್ಲ. ಕೆಫೆಗೆ ಬಂದ ಸಾಧನಾ ಮೊದಲ ಭೇಟಿಯಲ್ಲಿಯೇ ಸಲುಗೆಯಿಂದ ವರ್ತಿಸಲು ಶುರು ಮಾಡಿದ್ದಾರೆ.

ಆ ನಂತರ ಹಲವು ಬಾರಿ ಕಾಫಿ ಶಾಪ್ ಸೇರಿದಂತೆ ಬೇರೆ ಕಡೆ ಇಬ್ಬರು ಸಿಕ್ಕಿದ್ದಾರೆ. ಈ ಸಮಯದಲ್ಲಿ ಕ್ಲಿನಿಕ್ ಮಾಲೀಕನಿಗೆ ಗೊತ್ತಾಗದಂತೆ ಸಾಧನಾ ಶೆಟ್ಟಿ ರಹಸ್ಯವಾಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದಾರೆ. ಫೋಟೊಗಳನ್ನು ಕ್ಲಿಕ್ ಮಾಡಿಕೊಂಡಿದ್ಧಾರೆ. ಆ ನಂತರ ಆತ್ಮೀಯತೆಯಿಂದ ಚಾಟಿಂಗ್ ಕೂಡ ಮಾಡಿದ್ದಾರೆ. ಈ ಎಲ್ಲ ಅಂಶಗಳನ್ನು ಕಾರ್ತಿಕ್ ತಮ್ಮ ದೂರಿನಲ್ಲಿ ಉಲ್ಲೇಖ ಮಾಡಿದ್ಧಾರೆ.

ಬ್ಲ್ಯಾಕ್‌ಮೇಲ್ ಮತ್ತು ವಸೂಲಿ

ತನ್ನ ಬಳಿಯಿರುವ ಈ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಮತ್ತು ಕಾರ್ತಿಕ್ ಪತ್ನಿಗೆ ಕಳುಹಿಸುವುದಾಗಿ ಬೆದರಿಸಿ ಸಾಧನಾ ಬ್ಲ್ಯಾಕ್‌ಮೇಲ್ ಶುರು ಮಾಡಿದ್ದರು. ಈ ‘ಹನಿ ಟ್ರ್ಯಾಪ್’ಗೆ ಹೆದರಿದ ಉದ್ಯಮಿ ಹಂತಹಂತವಾಗಿ ₹5 ಲಕ್ಷ ಆನ್‌ಲೈನ್ ಮೂಲಕ, ₹5 ಲಕ್ಷ ನಗದಾಗಿ, ₹1.5 ಲಕ್ಷದ ಐಫೋನ್, ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ನೀಡಿದ್ದರು. ಆದರೂ ಈಕೆಯ ಹಪಾಹಪಿ ನಿಲ್ಲಲಿಲ್ಲ; “ಒಟ್ಟು 1.5 ಕೋಟಿ ಕೊಟ್ಟರೆ ಮಾತ್ರ ವಿಡಿಯೋ ಡಿಲೀಟ್ ಮಾಡ್ತೀನಿ” ಎಂದು ಪಟ್ಟು ಹಿಡಿದಿದ್ದರು.

ಮನೆಗೆ ವಿಡಿಯೋ ಕಳುಹಿಸಿ ರಂಪಾಟ

ಹಣ ಕೊಡಲು ಸಾಧ್ಯವಿಲ್ಲ ಎಂದಾಗ ಸಾಧನಾ ತನ್ನ ಅಸಲಿ ರೂಪ ತೋರಿಸಿದ್ದಾರೆ. ಆ ವಿಡಿಯೋಗಳನ್ನು ಕಾರ್ತಿಕ್ ಅವರ ಪತ್ನಿ ಮತ್ತು ಕುಟುಂಬದವರಿಗೆ ಕಳುಹಿಸಿದ್ದಾರೆ. ಇದರಿಂದ ಉದ್ಯಮಿಯ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಕೊನೆಗೆ ಬೇರೆ ದಾರಿಯಿಲ್ಲದೆ ಉದ್ಯಮಿ ಪೊಲೀಸರ ಮೊರೆ ಹೋಗಿದ್ದಾರೆ. ಸಾಧನಾ ತನ್ನ ಮೊಬೈಲ್ ಮಾತ್ರವಲ್ಲದೆ, ಪೆನ್ ಡ್ರೈವ್‌ಗಳಲ್ಲಿಯೂ ವಿಡಿಯೋ ಸಂಗ್ರಹಿಸಿ ತನ್ನ ತಾಯಿ ಹಾಗೂ ಸ್ನೇಹಿತರಿಗೆ ಹಂಚಿರುವುದಾಗಿ ಬೆದರಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಸಾಧನಾ ವಿರುದ್ದ ಪೊಲೀಸರು ಸುಲಿಗೆ ಪ್ರಕರಣ (ಬಿಎನ್‌ಎಸ್ 302(2)) ಮತ್ತು 2000ದ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -spot_img

More articles

- Advertisement -spot_img

Latest article