No menu items!
13.8 C
Munich
Friday, July 24, 2026

ಬೆಂಗಳೂರು: ಗನ್ ಹಿಡಿದು ಚಿನ್ನದಂಗಡಿ ದೋಚಿದ ಖದೀಮರು

Must read

ಬೆಂಗಳೂರು: ಗನ್ ಹಿಡಿದು ಚಿನ್ನದಂಗಡಿ ದೋಚಿದ ಖದೀಮರು

ಬೆಂಗಳೂರು: ನಗರದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಚೋಹಳ್ಳಿ ಗೇಟ್ ಬಳಿಯ ರಾಮ್ ಜ್ಯುವೆಲರ್ಸ್ ಅಂಗಡಿಯಲ್ಲಿ, ಗನ್ ತೋರಿಸಿ ಚಿನ್ನಾಭರಣ ದರೋಡೆ ಮಾಡಿದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ಸಮಯ ಸುಮಾರು ರಾತ್ರಿ 8:30ರ ಸುಮಾರಿಗೆ, ಮೂವರು ಮುಸುಕುಧಾರಿಗಳು ಅಂಗಡಿಗೆ ನುಗ್ಗಿದ್ದು, ಅಂಗಡಿ ಮುಚ್ಚುವ ತಯಾರಿಯಲ್ಲಿ ಇದ್ದ ಮಾಲೀಕ ಕನ್ನಯ್ಯಲಾಲ್ ಅವರನ್ನು ಗನ್ ತೋರಿಸಿ ಬೆದರಿಸಿದ್ದಾರೆ. ನಂತರ ಟೇಬಲ್ ಮೇಲಿದ್ದ ಚಿನ್ನಾಭರಣವನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ.

ಇನ್ನು ಕೂಗಾಟ ಕೇಳಿ ಪಕ್ಕದ ಅಂಗಡಿಯ ಹುಡುಗ ಬಂದಿದ್ದು, ಆತನನ್ನು ತಳ್ಳಿ ಕಳ್ಳರು ಎಸ್ಕೇಪ್ ಆಗಿದ್ದಾರೆ. ಕೈಗೆ ಸಿಕ್ಕ ಚಿನ್ನವನ್ನ ದೋಚಿ ಮೂವರು ದರೋಡೆಕೋರರು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

- Advertisement -spot_img

Latest article