ಸ್ಯಾಂಡಲ್‍ವುಡ್‍ನ ಎವರ್‍ಗ್ರೀನ್ ನಾಯಕಿ ಅಂದ ತಕ್ಷಣ ನೆನಪಿಗೆ ಬರೋ ನಟಿ ರಮ್ಯಾ…. ಪಡ್ಡೆಹುಡುಗ್ರ ನಿದ್ದೆಗೆಡಿಸಲೆಂದೆ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಡ್ತಾಳೆ. ರಮ್ಯಾ ಗಾಂಧಿನಗರಕ್ಕೆ ಕಾಲಿಟ್ಟಿದ್ದೆ ತಡ ರೇಸಿನಲ್ಲಿದ್ದ ನಾಯಕಿಯರೆಲ್ಲಾ ಮೂಲೆಗುಂಪಾಗೋದ್ರು ಎನ್ನುವ ಸತ್ಯ ಎಲ್ಲರಿಗು ಗೊತ್ತೇ ಇದೆ.
ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ಅಭಿನಯದ ಅಭಿ ಚಿತ್ರದ ಮೂಲಕ ಸಿನಿ ರಂಗಕ್ಕೆ ರಮ್ಯಾ ಎನ್ನುವ ಮುದ್ದುಬೆಡಗಿ ಎಂಟ್ರಿಕೊಡ್ತಾಳೆ. ಈಕೆ ಇಂಡಸ್ಟ್ರಿಗೆ ಕಾಲಿಟ್ಟಿದೆ ಶುರುವಾಯ್ತು ನೋಡ್ರಿ ಶುಕ್ರದೆಸೆ….ರಕ್ಷಿತಾ. ಶೃತಿ, ಮಾಲಾಶ್ರಿ.. ಭಾವನಾ.. ರಾಧಿಕಾ, ಪ್ರೇಮ, ಸೌಂದರ್ಯ, ರಂಭಾರಂತಹ ಬ್ಯೂಟಿಗಳನ್ನೆ ಹಿಂದಿಕ್ಕಿ ಕನ್ನಡ, ತಮಿಳು, ತೆಲುಗು ಭಾಷೆಯಲ್ಲೂ ಮಿಂಚಿದ್ಲು ಈ ಬೆಡಗಿ. ಪಡ್ಡೆಹುಡುಗರ ನಿದ್ದೆಗೆಡಿಸಿದಷ್ಟೇ ಅಲ್ಲದೆ ಹಣ್‍ಹಣ್ ಮುದುಕ್ರೂ ಸಹ ಈಕೆಯ ಸೌಂದರ್ಯಯಕ್ಕೆ ಮಾರುಹೋಗಿದ್ರು..!
ಅಂದಿನ ಕಾಲಕ್ಕೆ ಮಾತ್ರ ರಮ್ಯಾ ಎನ್ನುವ ಸೌಂದರ್ಯ ಕನ್ಯೆ ಒಂದ್ಕಡೆ ಸೀಮಿತವಾಗಲಿಲ್ಲ, ಇಂದಿನಕಾಲದ ಪ್ರಿಯಾಮಣಿ, ರಚಿತಾರಾಮ್, ರಾಧಿಕಾಪಂಡಿತ್‍ರಂತಹ ಬ್ಯೂಟಿಗಳಿಗೆ ಸೆಡ್ಡುಹೊಡೆದು ಎವರ್‍ಗ್ರೀನ್ ಕ್ವೀನ್ ಎಂದು ಗುರುತಿಸಿಕೊಂಡಿದ್ಲು ಈ ನಟಿ..! ಈಕೆಯ ಅಂದಕ್ಕೆ ಸರಿಸಾಟಿ ಯಾರು ಇಲ್ಲ ಎನ್ನುತ್ತಿದ್ರು ಸ್ಯಾಂಡಲ್‍ವುಡ್ ಸಿನಿಪಂಡಿತರು..
ತನ್ನ ಬ್ಯೂಟಿಯಿಂದಲೇ ಬಾಕ್ಸ್ ಅಫೀಸ್ ಕೊಳ್ಳೆಹೊಡಿತ್ತಿದ್ದ ರಮ್ಯಾಗೆ ಶಾಕ್ ಕೊಡುವ ಸುದ್ದಿಯೊಂದು ಹರಿದಾಡ್ತಿದಿಯಂತೆ. ಆಕೆಯ ಸೌಂದರ್ಯಕ್ಕೆ ಆಕೆಯೇ ಸರಿಸಾಟಿ ಎನ್ನುತ್ತಿದ್ದ ಕಾಲಬದ್ಲಾಗ್ತಿದೆ ಅನ್ಸತ್ತೆ..! ಆದೇನಪ್ಪ ರಮ್ಯಾ ಅಭಿಮಾನಿಗಳಿಗೆ ಕಾದಿರೋ ಶಾಕ್ ಎನ್ನುತ್ತಿದ್ದೀರಾ? ಇಲ್ಲಿಂದಲೇ ಶುರುವಾಗೋದು ನೋಡಿ ಅಸಲಿ ಸ್ಟೋರಿ!
ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಬ್ಬಳು ಕ್ವೀನ್ ಎಂಟ್ರಿ ಆಗಿದೆ ಎನ್ನಲಾಗ್ತಿದೆ..! ರಮ್ಯಾಳನ್ನೆ ಮೀರಿಸುವ ನಟಿ ಈಕೆ ಎಂದು ಇತ್ತೀಚಿಗೆ ಗಾಂಧೀನಗರದಲ್ಲಿ ಗಾಸಿಪ್‍ಗಳು ಕೇಳಿಬರುತ್ತಿವೆಯಂತೆ.. ಅದು ಯಾರಪ್ಪಾ ಅಂಥಾ ಶಾಕ್ ಆಗ್ಬಿರ್ಬೇಕು ಅಲ್ವಾ.. ಹೌದು ವರ್ಷದ ಕೊನೆಗೆ ಬಿಡುಗಡೆಗೊಂಡ ರಕ್ಷಿತ್ ಶೆಟ್ಟಿ.. ರಿಶಬ್ ಶೆಟ್ಟಿಯ ಕಿರಿಕ್ ಪಾರ್ಟಿ ಚಿತ್ರದ ಮುದ್ದು ಬೆಡಗಿ ರಶ್ಮಿಕಾ ಮಂದಣ್ಣ ಆಲಿಯಾಸ್ ಸಾನ್ವಿ..
ಯಸ್…! ಚಿತ್ರ ಬಿಡುಗಡೆಗೊಂಡ ಮೂರೆ ದಿನದಲ್ಲಿ 6 ಕೋಟಿಗಳಿಸಿ ಬಾಕ್ಸ್ ಅಫೀಸ್ ಕೊಳ್ಳೆಹೊಡೆಯುತ್ತಿರುವ ಕಿರಿಕ್‍ಪಾರ್ಟಿ ಚಿತ್ರದ ನಾಯಕಿಯೆ ಮುಂದಿನ ಸ್ಯಾಂಡಲ್‍ವುಡ್ ಕ್ವೀನ್ ಎನ್ನಲಾಗುತ್ತಿದಿಯಂತೆ. ಕಾಲೇಜಿನಲ್ಲಿ ನಡೆಯುವಂತಹ ಪ್ರೀತಿ, ಪ್ರೇಮ, ಪ್ರಣಯ, ಗಲಾಟೆ, ಫ್ರೆಂಡ್‍ಶಿಪ್‍ನ ಕಥಾ ಹಂದರದಿಂದ ಕೂಡಿದ ಈ ಚಿತ್ರ ಸ್ಯಾಂಡಲ್‍ವುಡ್ ನಲ್ಲಿ ಹೊಸ ಅಲೆಯನ್ನೆ ಸೃಷ್ಟಿಸಿದೆ. ಸಾನ್ವಿ ಪಾತ್ರಧಾರಿಯಾಗಿ ನಟಿಸಿರುವ ಮುದ್ದುಮುಖದ ಮೃದು ಸ್ವಭಾವದ ನಟಿ ಈ ರಶ್ಮಿಕಾ. ಸ್ಯಾಂಡಲ್‍ವುಡ್‍ನಲ್ಲಿ ಅಷ್ಟೇ ಅಲ್ಲದೆ ಭಾರತದಾದ್ಯಂತ ಚಿತ್ರ ಸದ್ದು ಮಾಡ್ತಿದೆ ಎನ್ನುವುದು ಗೊತ್ತೇ ಇದೆ.. ಅದ್ರೆ ಸಾನ್ವಿಯ ಮುಗ್ದ ಸೌಂದರ್ಯ ಹೆಚ್ಚು ವೀಕ್ಷಕರನ್ನು ನಿದ್ದೆಗೆಡಿಸಿದೆಯಂತೆ ನೋಡಿ..!
ರಮ್ಯಾ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟಾಗ ಹೇಗೆ ನೋಡುಗರ ನಿದ್ದೆಗೆಡಿಸಿದ್ದಳೋ ಹಾಗೆ ಸಾನ್ವಿ ಈಗ ನೋಡುಗರ ನಿದ್ದೆಗೆಡಿಸಿದ್ದಾಳಂತೆ..! ತನ್ನ ಸುತ್ತಾಮುತ್ತ ಇದ್ದಂತಹ ಎಲ್ಲಾ ನಾಯಕಿಯರನ್ನು ತನ್ನ ಮುಗ್ದ ನಗುವಿನಲ್ಲಿಯೇ ದೂರಸರಿಸಿದ್ದಾಳಂತೆ ಈ ಸುಂದರಾಂಗಿ..! ಕನಸಿನಲ್ಲೂ ಕನವರಿಸುವ ಸೌಂದರ್ಯ ಸಾನ್ವಿಯದು.. ಅದಕ್ಕೆ ಇರ್ಬೇಕು ಕಣ್ರಿ ಮುಂದಿನ ಸ್ಯಾಂಡಲ್‍ವುಡ್ ಕ್ವೀನ್ ಈ ಸಾನ್ವಿ ಅಂತಿರೋದು..! ಆದೇನೆ ಇರ್ಲಿ ಮೊದ್ಲ ಸಿನಿಮಾದಲ್ಲೇ ಇಷ್ಟೊಂದು ಹೆಸ್ರು ಮಾಡಿರೋ ಈ ಬೇಬಿಗೆ ರಮ್ಯಾರಂತೆಯೇ ಯಶಸ್ಸು ಸಿಕ್ಲಿ ಅನ್ನೊಂದು ಅಭಿಮಾನಿಗಳ ಆಶಯ.
- ಹಾಲೇಶ್ ಎಂ.ಎಸ್ ಹುಣಸನಹಳ್ಳಿ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ನೊಬೆಲ್ ವಿಜೇತರಿಗೆ 100 ಕೋಟಿ ಬಂಪರ್ ಆಫರ್..!
ಕ್ಯಾಪ್ಟನ್ ಕೂಲ್ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾದ್ರೂ ಯಾಕೆ..?
ಹೊಸ 2000ರೂ. ನೋಟಿನಲ್ಲಿ ಕಾಣೆಯಾಗಿದ್ದಾರೆ ಗಾಂಧೀಜಿ..!!
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಮುಂದೆ ಮಳೆ ಬಂದ್ರೂ ಪಂದ್ಯ ರದ್ದಾಗಲ್ಲ..!!
ಅಂತೂ ಮುಗೀತು ಜಿಯೋ ವೆಲ್‍ಕಮ್ ಆಫರ್..! ಹಾಗಾದ್ರೆ ಮುಂದಿನ ಪ್ಲಾನ್ ಏನು..?