ಕ್ರೇಜಿಸ್ಟಾರ್ ಅಭಿಮಾನಿಯ ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿದ ದರ್ಶನ್…! ಈ ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತ…?

admin
1 Min Read

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಪ್ಪಟ ಅಭಿಮಾನಿ ಮನೋಜ್ ಅವರು ನಿರ್ದೇಶಿಸಿ ,‌ನಟಿಸಿರುವ ಸಿನಿಮಾದ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.


ಮನೋಜ್ ಅವರು ಕಳೆದ 9ವರ್ಷಗಳಿಂದ ಸಿನಿಮಾದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದು , ಅವಕಾಶ ಸಿಗದೇ ಇರುವುದರಿಂದ ಲಂಡನ್ ಫಿಲ್ಮ್ ಸಿಟಿಯಲ್ಲಿ ತರಬೇತಿ ಪಡೆದು‌ ಸ್ವತಃ ಸಿನಿಮಾ ಮಾಡೋಕೆ‌ ಮುಂದಾಗಿದ್ದಾರೆ.‌
ಹಾಸನದ ಜೆಡಿಎಸ್ ಮುಖಂಡ ಎಚ್.ಕೆ ಕುಮಾರಸ್ವಾಮಿ ಅವರ ಮಗ ಮನೋಜ್ ಅವರು ರವಿಚಂದ್ರನ್ ಅವರ ಅಭಿಮಾನಿ ಆಗಿದ್ದರಿಂದ ಅವರ ಸಿನಿಮಾದ ಹೆಸರನ್ನೇ ತಮ್ಮ ಚೊಚ್ಚಲ ಸಿನಿಮಾಕ್ಕೆ ಇಟ್ಟಿದ್ದಾರೆ.‌ ‘ಓ ಪ್ರೇಮವೇ’ ಮನೋಜ್ ಅವರ ಸಿನಿಮಾ.‌


ಈ‌ ಸಿನಿಮಾದಲ್0 ಈ ಸಿನಿಮಾದ ಆಡಿಯೋವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದರು.‌ ಈ‌ ಸಿನಿಮಾಕ್ಕೆ ಎಂ.ಕೆ ಫಿಲಮ್ಸ್ ಬ್ಯಾನರ್ ಅಡಿಯಲ್ಲಿ ಮನೋಜ್ ಅವರ ತಾಯಿ ಚಂಚಲ ಕುಮಾರಿ ಬಂಡವಾಳ ಹಾಕಿದ್ದಾರೆ.

https://www.youtube.com/watch?v=5o9Q6Wf5XXE

Share This Article
Leave a Comment