No menu items!
21.5 C
Munich
Thursday, July 30, 2026

ಅಂಗಡಿ ಶಟರ್ ಎತ್ತದೆ, ಬೀಗ ಮುರಿಯದೇ ಒಳ ನುಗ್ಗಿ ಚಿನ್ನಾಭರಣ ಕದ್ದ….!

Must read

ದಕ್ಷಿಣ ಚೀನಾದ ದೊಂಗ್ಗೌನ್ ಎಂಬ ನಗರದಲ್ಲಿ ಚಿನ್ನದಂಗಡಿ ಕಳ್ಳತನವಾಗಿದ್ದು, ಕಳ್ಳ ಅಂಗಡಿ ಶಟರ್ ಸಹ ಎತ್ತದೇ ಅಂಗಡಿಯೊಳಗೆ ನುಗ್ಗಿದ್ದಾನೆ ಕಳ್ಳತನ ಮಾಡಿದ್ದಾನೆ…! ಕಳ್ಳನ ಎಲ್ಲ ಚಲನವಲನಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಸಾಧಾರಣ ಮೈ ಕಟ್ಟಿನ ವ್ಯಕ್ತಿಯೊಬ್ಬ ಅಂಗಡಿ ಮುಂದೆ ಬಂದು ನಿಲ್ತಾನೆ. ಅಂಗಡಿಯ ಶಟರ್‍ಗೆ ಹಾಕಿದ ಬೀಗ ಮುರಿಯಲು ಯತ್ನಿಸದೇ, ನಿಧಾನವಾಗಿ ಶಟರ್ ಕೆಳಗಿರುವ ಜಾಗದಲ್ಲಿ ನುಸುಳಿಕೊಂಡು ಒಳಹೋಗಿದ್ದಾನೆ.

ಅಂಗಡಿ ಪ್ರವೇಶಿಸಿದ ಕೂಡಲೇ ಸೈರನ್ ಬಂದ್ ಮಾಡಿ, ಚಿನ್ನಾಭರಣಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಬಂದ ದಾರಿಯಲ್ಲಿ ಹಿಂದಿರುಗಿ ಹೋಗಿದ್ದಾನೆ.ಕಳ್ಳ ಕೇವಲ ಬೆಲೆಬಾಳುವ ಚಿನ್ನಾಭರಣ, ವಜ್ರದ ನೆಕ್ಲೇಸ್‍ಗಳನ್ನು ಮಾತ್ರ ಕದ್ದಿದ್ದಾನೆ. ಅಂದಾಜು 53 ಸಾವಿರ ಡಾಲರ್ (36 ಲಕ್ಷ ರೂ.ಗೂ ಅಧಿಕ) ಬೆಲೆಬಾಳುವ ಆಭರಣಗಳು ಕಳ್ಳತನವಾಗಿವೆ ಎಂದು ಚಿನ್ನದಂಗಡಿ ಮಾಲೀಕರು ತಿಳಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article