ಖಾಕಿ ಸರ್ಪಗಾವಲಿನಲ್ಲಿ ಹನುಮ ಜಯಂತಿ ಆಚರಣೆ

admin
0 Min Read

ಹುಣಸೂರು ಪಟ್ಟಣದಲ್ಲಿ ಹನುಮ ಜಯಂತಿ ಆಚರಣೆ ಅದ್ಧೂರಿಯಾಗಿ ನಡೆಯಿತು. ಹುಣಸೂರು ಶಾಸಕ ಹೆಚ್.ಪಿ.ಮಂಜುನಾಥ್ ಮತ್ತು ಗಾವಡಗೆರೆ ಮಠದ ಶ್ರೀಗಳು ಪುಷ್ಪಾರ್ಚನೆ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದ್ರು.

ಟ್ರ್ಯಾಕ್ಟರ್‌ಗಳಲ್ಲಿ ಶ್ರೀ ಆಂಜನೇಯಸ್ವಾಮಿ, ಭಜರಂಗಿ, ರಾಮ-ಲಕ್ಷ್ಮಣ-ಸೀತೆ, ದತ್ತಾತ್ರೇಯ ಸೇರಿ ವಿವಿಧ ಮೂರ್ತಿಗಳ ಮೆರವಣಿಗೆ ಮಾಡಲಾಯಿತು. ಕೇಸರಿ ಟೀ ಶರ್ಟ್, ಶಾಲು ತೊಟ್ಟು ಭಕ್ತರು ಸಾಗಿದ್ದು, ಶಾಸಕ ಮಂಜುನಾಥ್ ನೇತೃತ್ವದಲ್ಲಿ ಭಕ್ತರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಇನ್ನ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಖಾಕಿ ಸರ್ಪಗಾವಲಿನಲ್ಲಿ ಹನುಮ ಜಯಂತಿ ಮೆರವಣಿಗೆ ನೆರವೇರಿತು.

Share This Article
Leave a Comment