No menu items!
13.7 C
Munich
Wednesday, May 20, 2026

ಐಪಿಎಲ್​ಗೆ ಗುಡ್ ಬೈ ಹೇಳಿದ ರವಿಚಂದ್ರನ್ ಅಶ್ವಿನ್!

Must read

ಐಪಿಎಲ್​ಗೆ ಗುಡ್ ಬೈ ಹೇಳಿದ ರವಿಚಂದ್ರನ್ ಅಶ್ವಿನ್!

 

ಭಾರತದ ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದ ಅಶ್ವಿನ್, ಐಪಿಎಲ್ ಮೂಲಕ ಮಾತ್ರ ಕಣಕ್ಕಿಳಿಯುತ್ತಿದ್ದರು. ಇದೀಗ ತಮ್ಮ ಸಂಪೂರ್ಣ ಕ್ರಿಕೆಟ್ ಕರಿಯರ್‌ಗೆ ತೆರೆ ಎಳೆದಿದ್ದಾರೆ.

ಅಶ್ವಿನ್ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಣೆ ಹೊರಡಿಸಿ, ಪ್ರತಿಯೊಂದು ಅಂತ್ಯಕ್ಕೂ ಹೊಸ ಆರಂಭವಿರುತ್ತದೆ ಎಂದು ಹೇಳಿದ್ದಾರೆ. “ಐಪಿಎಲ್ ಕ್ರಿಕೆಟಿಗನಾಗಿ ನನ್ನ ಸಮಯ ಕೊನೆಗೊಂಡಿದೆ. ಆದರೆ ಇಂದಿನಿಂದ ಲೀಗ್‌ಗಳ ಸುತ್ತಲಿನ ಆಟವನ್ನು ಅನ್ವೇಷಣೆ ಮಾಡುವ ಸಮಯ ಆರಂಭವಾಗಿದೆ. ನನ್ನನ್ನು ಬೆಂಬಲಿಸಿದ ಎಲ್ಲಾ ಫ್ರಾಂಚೈಸಿಗಳು, ಐಪಿಎಲ್ ಹಾಗೂ ಬಿಸಿಸಿಐಗೆ ಧನ್ಯವಾದಗಳು” ಎಂದು ಅವರು ತಿಳಿಸಿದ್ದಾರೆ.

2009ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಪ್ರವೇಶ ಪಡೆದ ಅಶ್ವಿನ್, ನಂತರ ಪಂಜಾಬ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಪರವೂ ಕಣಕ್ಕಿಳಿದಿದ್ದರು. ಕಳೆದ ಸೀಸನ್ ಅವರು ಮತ್ತೆ ಸಿಎಸ್‌ಕೆ ತಂಡಕ್ಕೆ ಮರಳಿದ್ದರು.

ಅಶ್ವಿನ್ ಐಪಿಎಲ್‌ನಲ್ಲಿ ಒಟ್ಟು 221 ಪಂದ್ಯಗಳಲ್ಲಿ ಆಡಿದ್ದು, 4710 ಎಸೆತಗಳಲ್ಲಿ 187 ವಿಕೆಟ್ ಕಬಳಿಸಿದ್ದಾರೆ. ಜೊತೆಗೆ ಬ್ಯಾಟಿಂಗ್ ಮೂಲಕ 833 ರನ್ ಗಳಿಸಿದ್ದಾರೆ. ಕಳೆದ ಸೀಸನ್ 9 ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದರು. 17 ವರ್ಷಗಳ ಸುದೀರ್ಘ ಐಪಿಎಲ್ ಪ್ರಯಾಣವನ್ನು ಪೂರ್ಣಗೊಳಿಸಿರುವ ಅಶ್ವಿನ್, ಇದೀಗ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

- Advertisement -spot_img

More articles

- Advertisement -spot_img

Latest article