No menu items!
12.4 C
Munich
Wednesday, April 29, 2026

ಅಶ್ವಿನ್ ಆಡಿದ್ದು ಮೂರೇ ಮೂರು ಪ್ರಥಮದರ್ಜೆ ಪಂದ್ಯ ; ಐಪಿಎಲ್ನಲ್ಲಿ ಹರಾಜಾಗಿದ್ದು 4.5 ಕೋಟಿ ರೂಗಳಿಗೆ..!

Must read

ಯೋಗ್ಯತೆ ಇದ್ದೋರಿಗೆ ಒಂದಲ್ಲ ಒಂದು ದಿನ ಯೋಗ ಬಂದೇ ಬರುತ್ತೆ..! ಆ ದಿನಕ್ಕಾಗಿ ಕಾಯಬೇಕಷ್ಟೇ..! ಕೆಲವರಿಗೆ ಅದೃಷ್ಟ ಬೇಗ ಕುಲಾಯಿಸುತ್ತೆ, ಮತ್ತೆ ಕೆಲವರಿಗೆ ಸ್ವಲ್ಪ ತಡವಾಗುತ್ತಷ್ಟೇ..! ಅಂತೆಯೇ ಈಗ ಅಶ್ವಿನ್ ಲೈಫೂ ಚೇಂಜ್ ಆಗಿದೆ..! ಅವರ ಪ್ರತಿಭೆಗೆ ಬೇಗನೇ ಬೆಲೆ ಸಿಕ್ಕಿದೆ..!
ಅಶ್ವಿನ್ ಯಾರೂ ಅಂದ್ರಾ..? ಇವರೊಬ್ಬ ಯುವಕ್ರಿಕೆಟಿಗ..! ಹ್ಞಾಂ, ಕ್ರಿಕೆಟಿಗ ಅಶ್ವಿನ್ ಅಂದೊಡನೆ ನೆನಪಾಗುವುದು ರವಿಚಂದ್ರ ಅಶ್ವಿನ್ (ಆರ್. ಅಶ್ವಿನ್). ಆದರೆ ಈಗ ನೀವು ಓದ್ತಾ ಇರೋ ಸ್ಟೋರಿಯ ಹೀರೋ ಆರ್ ಅಶ್ವಿನ್ ಅಲ್ಲ…! ಎಂ ಅಶ್ವಿನ್(ಮುರುಗನ್ ಅಶ್ವಿನ್)..!
ಮುರುಗನ್ ಅಶ್ವಿನ್ ಅಷ್ಟಾಗಿ ನಿಮಗೆ ಗೊತ್ತಿರಲಿಕ್ಕಿಲ್ಲ..! ಯಾಕಂದ್ರೆ ಇವರು ಆಡಿದ್ದು ಕೇವಲ ಮೂರೇ ಮೂರು ಪ್ರಥಮ ದಜರ್ೆ ಪಂದ್ಯಗಳನ್ನು..! ಆಡಿದ್ದು ಮೂರೇ ಪ್ರಥಮ ದರ್ಜೆ ಪಂದ್ಯಗಳಾದರೂ ಈ ಬಾರಿ ಐಪಿಎಲ್ ಹರಾಜಿನಲ್ಲಿ ಬಹು ಬೇಡಿಕೆಯ ಕ್ರಿಕೆಟಿಗನಾಗಿ ಹೊರಹೊಮ್ಮಿ ಅಚ್ಚರಿ ಮೂಡಿಸಿದ್ದಾರೆ..! ಕೆಲವು ಕ್ರಿಕೆಟ್ ಘಟಾನುಗಟಿಗಳಿಗೇ ಸಿಗದಷ್ಟ ಹಣಕ್ಕೆ ಅಶ್ವಿನ್ ಬಿಕರಿಯಾಗಿದ್ದಾರೆ..! ಪುಣೆ ತಂಡ ಈ ಯುವ ಕ್ರಿಕೆಟಿಗ ಎಂ ಅಶ್ವಿನ್ ಅವರನ್ನು 4.5 ಕೋಟಿ ರೂಪಾಯಿಗಳಿಗೆ ಹರಾಜು ಕೂಗಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ..! ಹರಾಜಿನ ಟೈಮಲ್ಲಿ ಫ್ರಾಂಚೈಸಿಗಳೆಲ್ಲಾ ಅಶ್ವಿನ್ ಗೆ ಡಿಮ್ಯಾಂಡ್ ಮಾಡಿ ಮೊತ್ತವನ್ನು ಹೆಚ್ಚಿಸುತ್ತಾ ಹೋದಂತೂ ಸ್ವತಃ ಎಂ. ಅಶ್ವಿನ್ ಅವರಿಗೇನೇ ಆಶ್ಚರ್ಯ ಕಾದಿತ್ತು..!
ಅಂದಹಾಗೆ ಈ ಎಂ. ಅಶ್ವಿನ್ ನಮ್ಮ ಕನ್ನಡಿಗ, ವಿಶ್ವಶ್ರೇಷ್ಠ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆಯ ಅಭಿಮಾನಿ..! ಅಶ್ವಿನ್ಗೆ ಕುಂಬ್ಳೆ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! ತಮಿಳುನಾಡಿನವರಾದ ಈ ಲೆಗ್ ಬ್ರೇಕ್ ಬೌಲರ್ ಎಂ. ಅಶ್ವಿನ್ ಭಾರತದ ತಂಡದ ಆಟಗಾರ ಆರ್ ಅಶ್ವಿನ್ ಅವರು ಓದಿದ್ದ ಚೆನ್ನೈನ ಎಂಜಿನಿಯರಿಂಗ್ ಕಾಲೇಜಿನಲ್ಲೇ ಓದಿದ್ದು..! ಎಂಜಿನಿರಿಂಗ್ ವಿದ್ಯಾರ್ಥಿಯಾಗಿರುವ ಅಶ್ವಿನ್ ಅವರ ಅಪ್ಪ ಸಾಹಿತಿ..!
ಅಶ್ವಿನ್ ಓದಿನ ಜೊತೆಗೆ ಕ್ರಿಕೆಟ್ ಅನ್ನು ಪೂಜಿಸ್ತಾ ಬಂದಿದ್ದಾರೆ..! ಇದರಲ್ಲೇ ಬದುಕು ಕಟ್ಟಿಕೊಳ್ಳಬೇಕೆಂದು ಪಣತೊಟ್ಟಿದ್ದಾರೆ..! ಇಲ್ಲಿತನ ಆಡಿದ್ದು ಮೂರೇ ಮೂರು ಪ್ರಥಮ ದರ್ಜೆ ಪಂದ್ಯಗಳಾದರೂ ಇವರಿಗೆ ಇಷ್ಟೊಂದು ದೊಡ್ಡ ಮೊತ್ತದ ಬೇಡಿಕೆ ಬರಲು ಕಾರಣ ಈಸಲದ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ. ಇಲ್ಲಿ ಆಡಿದ್ದು ಆರು ಪಂದ್ಯಗಳನ್ನು ಮಾತ್ರ..! ಆರು ಪಂದ್ಯಗಳಲ್ಲಿ ಒಟ್ಟಾರೆಯಾಗಿ ಬೌಲ್ ಮಾಡಿದ್ದು23 ಓವರ್ ಮಾತ್ರ..! ಕಿತ್ತಿದ್ದು 10 ವಿಕೆಟ್, ಪ್ರತಿ 14 ಎಸತಕ್ಕೊಂದರಂತೆ ಸರಾಸರಿ ವಿಕೆಟ್ ಗಳಿಸಿ ತಾನೊಬ್ಬ ಭರವಸೆಯ ಬೌಲರ್ ಎಂದು ಸಾಭೀತು ಪಡಿಸಿದ್ದಾರೆ..! ಇದೇ ಈ ಬಾರಿಯ ಐಪಿಎಲ್ನಲ್ಲಿ ಕೋಟ್ಯಾಧಿಪತಿಯಾಗಲು ನೆರವಾಗಿದ್ದು..!
ಎನಿವೇ, ಅಶ್ವಿನ್ ನಿಮಗೆ ಒಳ್ಳೇಯದಾಗಲಿ, ಐಪಿಎಲ್ ನಲ್ಲಿ ಮಿಂಚಿ, ಎಲ್ಲಾ ಕ್ರಿಕೆಟಿಗರ ಕನಸಂತೆ ನಿಮ್ಮಲ್ಲೂ ರಾಷ್ಟ್ರೀಯ ತಂಡದಲ್ಲಾಡುವ ಕನಸು ಇದ್ದೇ ಇರುತ್ತೆ..! ಆ ಕನಸು ನನಸಾಗಲಿ.

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video

ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!

20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article