ಸನ್ನಿ ಇತಿಹಾಸ ನೋಡ್ಕೊಂಡು ವರ್ತಮಾನದ ಅತ್ಯಾಚಾರವೇಕೆ…?

Date:

ಕರ್ನಾಟಕದ ಕಾಂಗ್ರೆಸ್ ಸರ್ಕಾರ ನೈತಿಕ ಪೊಲೀಸ್ ಗಿರಿಗೆ ಶರುಣು ಹೊಡ್ದು ಬಿಡ್ತಾ…? ಹೀಗೊಂದು ಪಶ್ನೆ ಕಾಡಲು ಕಾರಣ ಮಾನ್ಯ ಗೃಹಸಚಿವರು. ಸಂಸ್ಕೃತಿ ಮತ್ತು ಅನೈತಿಕತೆ ಎನ್ನುವಂತಹ ವಿಚಾರಗಳು ಯಾವುದು ಅನ್ನೋದು ನಮ್ಮ ಗೃಹ ಮಂತ್ರಿಗಳಿಗೆ ಗೊತ್ತಿಲ್ಲ ಇರ್ಬೇಕು.

ಹೊಸ ವರ್ಷಾಚರಣೆ ಪ್ರಯುಕ್ತ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‍ನಲ್ಲಿ ದಿ ಟೈಮ್ಸ್ ಕ್ರಿಯೇಶನ್ಸ್ ಆಯೋಜಿಸಿದ್ದ ‘ಸನ್ನಿ ನೈಟ್’ ಗೆ ಬ್ರೇಕ್ ಹಾಕಿದ್ರಲ್ಲಾ… ಸನ್ನಿ ಡ್ಯಾನ್ಸ್ ಮಾಡೋದು ಅನೈತಿಕತೆ, ಸಂಸ್ಕೃತಿಗೆ ವಿರುದ್ಧವಾದುದು ಅಂತ ಗೃಹಸಚಿವರಿಗೆ ಕನಸು ಬಿತ್ತ? ರಾತ್ರೋ ರಾತ್ರಿ ಜ್ಞಾನೋದಯವಾಯ್ತಾ..? ಇಲ್ಲವಾದರೆ ನೈತಿಕತೆ ಅನೈತಿಕತೆ ಬಗ್ಗೆ ಯಾರಾದ್ರು ಈಗ ಪಾಠ ಮಾಡಿದ್ರಾ..?


ಸನ್ನಿ ಲಿಯೋನ್ ಬಂದು ಡ್ಯಾನ್ಸ್ ಮಾಡೋದು ನಮ್ಮ ಸಂಸ್ಕೃತಿಗೆವಿರುದ್ಧ ಅಂತ ವಿರೋಧಿಸುವುದಾದ್ರೆ? ಜನವರಿ ನಮಗೆ ಹೊಸ ವರ್ಷವೇ ಅಲ್ಲ. ಯುಗಾದಿ ನಮಗೆ ಹೊಸ ವರ್ಷ. ಗೃಹ ಸಚಿವರಿಗೆ ತಾಕತ್ತಿದ್ದರೆ ಡಿಸೆಂಬರ್ 31ರಂದು ಮಧ್ಯರಾತ್ರಿ ಎಂಜಿ ರೋಡಲ್ಲಿ ಹೆಂಡ ಸುರ್ಕೊಂಡು ಕುಣಿದಾಡುವುದನ್ನು ತಪ್ಪಿಸಲಿ. ನಗರದ ಎಲ್ಲಾ ಬಾರ್, ಪಬ್ ಗಳನ್ನು ನಿಲ್ಲಿಸಲಿ… ಗೃಹ ಇಲಾಖೆ ನೈತಿಕ ಪೊಲೀಸ್ ಗಿರಿಗೆ ಸಲಾಂ ಹೊಡೆದಿದ್ದೇಕೆ…? ಸಂಘಟನೆ ಹೆಸರಲ್ಲಿ ಯಾರೋ ಬಂದು ಪ್ರತಿಭಟಿಸ್ತೀವಿ ಅಂದಿದಕ್ಕೇ…ನಮ್ಮ ಗೃಹಸಚಿವರು ಮನರಂಜನಾ ಕಾರ್ಯಕ್ರಮವನ್ನೇ ನಿಲ್ಲಿಸಲು ಸೂಚಿಸಿಬಿಟ್ರು.


ಇದನ್ನು ಬರಿಬೇಕೋ ಬೇಡ್ವಾ ಅಂತ ಯೋಚ್ನೆ ಮಾಡಿ, ಕೊನೆಗೆ ಬರೆಯಲೇ ಬೇಕು ಅಂತ ಡಿಸೈಡ್ ಮಾಡಿದ್ದೇನೆ. ನಾನು ಸನ್ನಿ ಲಿಯೋನ್ ಅವರನ್ನು ನೋಡಿದ್ದು ಬಾಲಿವುಡ್ ನಟಿಯಾಗಿ. ಸನ್ನಿ ಬಾಲಿವುಡ್ ತಾರೆ, ಕನ್ನಡದ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾಳೆ ಅನ್ನೋದಷ್ಟೇ ಇಲ್ಲಿ ಮುಖ್ಯವಾಗುತ್ತೆ.


ಆದ್ರೆ, ಈಗ ಸನ್ನಿ ನೈಟ್ ಎಂಬ ಮನರಂಜನಾ ಕಾರ್ಯಕ್ರಮಕ್ಕೆ ವಿರೋಧಿಸಿದವರ ಬಗ್ಗೆ ಅಯ್ಯೋ ಅನಿಸುತ್ತೆ. ಕಾರಣ, ಅವರುಗಳು ಸನ್ನಿ ನಟನೆಯ ಬಾಲಿವುಡ್ ಸಿನಿಮಾ, ಕನ್ನಡ ಸಿನಿಮಾಗಳನ್ನು ನೋಡಿಲ್ಲ…! ಕೇವಲ ಆಕೆ ಒಂದಾನೊಂದು ಕಾಲದಲ್ಲಿ ನಟಿಸಿದ್ದ ನೀಲಿಚಿತ್ರಗಳನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತು ನೋಡಿದ್ದಾರಷ್ಟೇ…! ಮೇ ಬಿ ಮತ್ತೆ ಮತ್ತೆ ಅದನ್ನೇ ನೋಡ್ತಿರೋ ಅವರುಗಳಿಗೆ ಸನ್ನಿ ಕಲಾವಿದೆ, ಜನಪ್ರಿಯ ನಟಿ ಅನ್ನೋದು ಗೊತ್ತೇ ಇಲ್ಲ…! ಈಗ ಗೊತ್ತು ಮಾಡ್ಕೊಳ್ರಪ್ಪ ಅಂದ್ರೂ ಮಾಡಿಕೊಳ್ಳಲ್ಲ.


ಇನ್ನೊಂದು ಗಮ್ಮತ್ತು ಗೊತ್ತಾ…? ಮಾನ್ಯ ಗೃಹಸಚಿವ ರಾಮಲಿಂಗ ರೆಡ್ಡಿ ಅವರಿಗೆ ಸನ್ನಿ ಲಿಯೋನ್ ಯಾರು ಅಂತಾನೇ ಗೊತ್ತಿರ್ಲಿಲ್ಲ…! ಮೊನ್ನೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರು ಫೇಸ್ ಬುಕ್ ನಲ್ಲಿ ಹಾಕಿದ್ದ ಸ್ಟೇಟಸ್ ಬಗ್ಗೆ ಮಾತಾಡೋಕೆ ಅಂತ ರೆಡ್ಡಿ ಸಾಯಬ್ರು ಪ್ರೆಸ್ ಮೀಟ್ ಕರೆದಿದ್ರು. ಅಲ್ಲಿ ಅನಂತಕುಮಾರ್ ಹೆಗಡೆ ಅವರ ಬಗ್ಗೆ ಮಾತಾಡಿ ಮುಗಿಸಿದ ಮೇಲೆ ವರದಿಗಾರರೊಬ್ಬರು ಸನ್ನಿ ನೈಟ್ ಬಗ್ಗೆ ಪ್ರಶ್ನೆ ಮಾಡಿದ್ರು…! ಸಾರ್, ‘ಸನ್ನಿ ಲಿಯೋನ್ ಬರ್ತಾಳಲ್ಲಾ’ ಆ ಬಗ್ಗೆ ಮಾತಾಡಿ ಅಂತ…! ಆಗ ರಾಮಲಿಂಗ ರೆಡ್ಡಿಯವರು ‘ಸನ್ನಿಲಿಯೋನಾ..? ಯಾರಕೆ..’? ಅಂತ ಕೇಳಿದ್ರು. ಆಗ ವರದಿಗಾರ ‘ಆಕೆ ಪೋರ್ನ್ ಸ್ಟಾರ್, ಹಿಂದೆ ಸಾಕಷ್ಟು ನೀಲಿಚಿತ್ರಗಳಲ್ಲಿ ನಟಿಸಿದ್ದಳು’ ಅನ್ನೋದನ್ನು ಸಚಿವರಿಗೆ ತಿಳಿಸಿದ್ರು.


ಆಗ ಸಚಿವರಿಗೆ ಎಚ್ಚರವಾಗಿ ನಮ್ಮಸಂಸ್ಕೃತಿಗೆವಿರುದ್ಧವಾದ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಇಲ್ಲ ಅಂತ ಹೇಳಿಬಿಟ್ರು. ಆಗಿದಿಷ್ಟೇ…! ಗೃಹಸಚಿವರ ಈ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ‘ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ’ ತಮ್ಮ ಪ್ರತಿಭಟನೆ ಸಂದ ಜಯ ಅಂತ ಸಂಭ್ರಮಿಸಿತು.


ಕನ್ನಡ ಪರ ಸಂಘಟನೆಗಳು ಕನ್ನಡ ನಾಡು-ನುಡಿ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವುದನ್ನು ಹೆಮ್ಮೆಯಿಂದ ಸ್ವಾಗತಿಸೋಣ, ಬೆಂಬಲವಾಗಿ ನಿಲ್ಲೋಣ. ಆದ್ರೆ, ಅನಗತ್ಯವಾಗಿ ‘ಸನ್ನಿ ನೈಟ್’ ಹೆಸರಿನ ಮನರಂಜನಾ ಕಾರ್ಯಕ್ರಮವನ್ನು ವಿರೋಧಿಸ್ತಾ ಇರೋದು ಖಂಡನೀಯ.


ಆಯೋಜಕರು ಸನ್ನಿ ಲಿಯೋನ್ ಅವರನ್ನು ಕರೆಸಲು ಮುಂದಾಗಿದ್ದು ಆಕೆ ಪೋರ್ನ್ ಸ್ಟಾರ್ ಅಂತಲ್ಲ. ನಟಿ, ಒಳ್ಳೆಯ ಡ್ಯಾನ್ಸರ್ ಅಂತ…! ಅಷ್ಟೇ ಅಲ್ಲದೆ ಸನ್ನಿ ಲಿಯೋನ್ ಗೂ ಬೆಂಗಳೂರು ಅಂದ್ರೆ ಇಷ್ಟ. ಆದ್ದರಿಂದ ಬೆಂಗಳೂರು ನಗರದಲ್ಲಿ ಸ್ಟೇಜ್ ಪರ್ಫೋಮೆನ್ಸ್ ನೀಡಲು ಒಪ್ಪಿಕೊಂಡಿದ್ರು. ಎಲ್ಲಕ್ಕಿಂತ ಹೆಚ್ಚಾಗಿ ಸನ್ನಿ ಬಂದು ಸ್ಟೆಪ್ ಹಾಕ್ತಿದ್ದುದು ನಮ್ಮ ಕನ್ನಡದ ರ್ಯಾಪರ್ ಅಲೋಕ್ ಹಾಡಿಗೆ…! ಕನ್ನಡದ ಹಾಡಿಗೆ ಪರಭಾಷಾ ನಟಿ ಡ್ಯಾನ್ಸ್ ಮಾಡೋದು ಕನ್ನಡ ವಿರೋಧ ಹೇಗಾಗುತ್ತೆ..? ನನಗಂತೂ ಗೊತ್ತಿಲ್ಲ.


ಸರಿ, ಸನ್ನಿ ಲಿಯೋನ್ ನಡೆಸಿಕೊಡಬೇಕಿದ್ದ ಕಾರ್ಯಕ್ರಮಕ್ಕೆ ಈಗ ವಿರೋಧ ಪಡಿಸ್ತಿರೋ ಮಹಾನುಭಾವರು ಕನ್ನಡದ ‘ಡಿ.ಕೆ’, ‘ಲವ್ ಯು ಆಲಿಯಾ’ ಸಿನಿಮಾ ರಿಲೀಸ್ ಆದಾಗ ಇನ್ನೂ ಹುಟ್ಟಿರ್ಲಿಲ್ವಾ…? ಸಿನಿಮಾ ನೋಡೋ ಬದಲು ಸನ್ನಿಯ ಆ… ವೀಡಿಯೋ ನೋಡ್ತಾ ನೋಡ್ತಾ ಪ್ರಜ್ಞೆ ತಪ್ಪಿ ಬಿದ್ದಿದ್ರಾ…?

ಇನ್ನು ರಾಜ್ಯದ ಕಾನೂನು ಸುವ್ಯವಸ್ಥೆ ಪ್ರಶ್ನೆ… ಹೌದು, ಇದು ಗಂಭೀರ ವಿಷ್ಯಾ ಕಣ್ರಿ…! ಈಗ ಸಿಕ್ಕಾಪಟ್ಟೆ ವ್ಯವಸ್ಥಿತವಾಗಿ ಕಾನೂನು ಸುವ್ಯವಸ್ಥೆ ಇದೆ ನೋಡಿ…!? ‘ಸನ್ನಿ ನೈಟ್’ ನಲ್ಲಿ ಮಾತ್ರ ಕಾನೂನು ಸುವ್ಯವಸ್ಥೆ ಯಕ್ಕುಟ್ಟು ಹೋಗುತ್ತೆ…!


ಲಕ್ಷಾಂತರ ಮಂದಿ ಸೇರುವ ರಾಜಕೀಯ ಸಮಾವೇಶಗಳಿಗೆ ಅನುಮತಿ ಇದೆ. ಆದ್ರೆ, ಸಾವಿರಾರು ಜನ ಸೇರುವ ಸನ್ನಿ ನೈಟ್ ಗೆ ಅನುಮತಿ ಇಲ್ಲ…! ರಾಜಕೀಯ ಸಮಾವೇಶಗಳಲ್ಲಿ ರಾಜಕೀಯ ಪುಡಾರಿಗಳು ಬಾಯಿಗೆ ಬಂದಹಾಗೆ ಹರಟಿ, ಪ್ರಚೋದನಾಕಾರಿ ಭಾಷಣ ಮಾಡುವುದರಿಂದ ನಿಮ್ಮ ಕಾನೂನು ಸುವ್ಯವಸ್ಥೆ ಹಾಳಗಲ್ಲ ಅಲ್ವಾ…?


ರಾಜಕಾರಣಿ ವೇದಿಕೆಯಲ್ಲಿ ನಿಂತು ಕಡಿ-ಕಲ್ಲು-ಕೊಚ್ಚು ಅಂತ ಜನರನ್ನು ಪ್ರಚೋದಿಸುತ್ತಾನೆ. ಆಗ ಗಲಭೆಗಳು ಉಂಟಾದಾಗ ನೆರೆದವರ ಪೃಷ್ಠದ ಮೇಲೆ ಬೆತ್ತದ ಕೋಲಿನಿಂದ ಬಾಸುಂಡೆ ಹಾಕಿ ಗಬ್ ಚುಪ್ ಮಾಡೋ ಪೊಲೀಸರಿಗೆ ‘ಸನ್ನಿ ನೈಟ್’ ಎಂಬ ಮನರಂಜನ ಕಾರ್ಯಕ್ರಮದಲ್ಲಿ ಗಲಾಟೆ ಆಗದಂತೆ ನಿಯಂತ್ರಿಸಲು ಸಾಧ್ಯವಾಗಲ್ಲ ಅಂತಾದ್ರೆ ನಮ್ಮ ಗೃಹಇಲಾಖೆ ಅಷ್ಟೊಂದು ಅಸಮರ್ಥವಾಗಿದೆಯೇ..? ಇದನ್ನು ಪೊಲೀಸ್ ಅಧಿಕಾರಿಗಳು, ಮಾನ್ಯ ಗೃಹಸಚಿವರೇ ತಿಳಿಸಬೇಕು.


ದಯವಿಟ್ಟು ಕಲೆಯನ್ನು ಕೊಲೆ ಮಾಡಬೇಡಿ. ಕಲೆಗೆ ಭಾಷೆಯ ಹಂಗಿಲ್ಲ, ಗಡಿ ಇಲ್ಲ. ಕೆಟ್ಟ, ಅಸಹ್ಯ ಮನಸ್ಥಿತಿಗಳು ಒಳ್ಳೆಯದರಲ್ಲೂ ಅಸಹ್ಯ ಹುಡುಕುತ್ತವೆ. ಸನ್ನಿ ಲಿಯೋನ್ ಬೆತ್ತಲೆ ಕುಣಿಯೋಕೆ ಬೆಂಗಳೂರಿಗೆ ಬರ್ತಾ ಇದ್ದಿದಲ್ಲ…! ಕನ್ನಡದ ರ್ಯಾಪ್ ಸಾಂಗ್ ಗೆ ಸ್ಟೆಪ್ ಹಾಕಲು ಬರ್ತಿದ್ರು ಅನ್ನೋದು ನೆನಪಲ್ಲಿರಲಿ.


ಸನ್ನಿಲಿಯೋನ್ ಇತಿಹಾಸ ಕಟ್ಕೊಂಡು ವರ್ತಮಾನದ ಅತ್ಯಾಚಾರವೇಕೆ ಮಾಡ್ತೀರಿ…? ಆಕೆ ಓರ್ವ ಮಹಿಳೆ ಗೌರವ ಕೊಡಿ. ಪಾಸ್ಟ್ ಈಸ್ ಪಾಸ್ಟ್…! ಆಕೆ ಪೋರ್ನ್ ಸ್ಟಾರ್ ಎಂದು ಹೇಳುತ್ತಾ ವಿರೋಧ ಮಾಡುವ ಆಸಾಮಿಗಳೇ ದಯವಿಟ್ಟು ಕೇವಲ ‘ನಾಲ್ಕು ಗೋಡೆಗಳ ನಡುವೆ’ ನೋಡುವ ಆ ಚಿತ್ರವನ್ನು ಬಿಟ್ಟು ಆಕೆ ನಟಿಸಿರುವ ಯು ಸರ್ಟಿಫಿಕೇಟ್ ಸಿನಿಮಾಗಳನ್ನು ನೋಡಿ…

-ಶಶಿಧರ್ ಎಸ್ ದೋಣಿಹಕ್ಲು

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...