ಧೋನಿ ನಿವೃತ್ತಿ ಬಗ್ಗೆ ಯಾರೂ ಹೇಳದ್ದನ್ನು ಹೇಳಿದ್ರು ಸಚಿನ್​ ತೆಂಡೂಲ್ಕರ್..!

Date:

ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಇಂಗ್ಲೆಂಡ್​ನಿಂದ ವಿಶ್ವಕಪ್​ ಅನ್ನು ಗೆದ್ದುಕೊಂಡೇ ವಾಪಸ್ ಭಾರತಕ್ಕೆ ಬರುವುದು ಎಂದು ಭಾರತದ ಕೋಟ್ಯಂತರ ಅಭಿಮಾನಿಗಳು ಕಾದಿದ್ದೆವು. ಆದರೆ. ಅದೃಷ್ಟ ನೆಟ್ಟಗಿರಲಿಲ್ಲ. ನ್ಯೂಜಿಲೆಂಡ್ ವಿರುದ್ಧ ಭಾರತ 18ರನ್​ಗಳಿಂದ ಪರಾಭವಗೊಂಡಿದೆ.
ಟಾಪ್ ಆರ್ಡರ್​ ಬ್ಯಾಟ್ಸ್​​ಮನ್​ಗಳು ಕೈಕೊಟ್ಟರೂ ಆಲ್​ರೌಂಡರ್ ರವೀಂದ್ರ ಜಡೇಜಾ ಮತ್ತು ಮಹೇಂದ್ರ ಸಿಂಗ್ ಧೋನಿ ಗೆಲುವಿಗಾಗಿ ಹೋರಾಟ ನಡೆಸಿದರು. ಆದರೆ, ಅಂತಿಮ ಹಂತದಲ್ಲಿ ಅವರಿಬ್ಬರೂ ಪೆವಿಲಿಯನ್ ಸೇರುವುದರೊಂದಿಗೆ ಭಾರತದ ಗೆಲುವಿನ ಆಸೆಗೂ ತಣ್ಣೀರು ಬಿತ್ತು..!
ಇನ್ನು ವಿಶ್ವಕಪ್​ ಬಳಿಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುತ್ತಾರೆ ಎಂಬ ಮಾತುಗಳು ಬಹು ದಿನದಿಂದ ಕೇಳಬರ್ತಾ ಇವೆ. ಧೋನಿ ಅಭಿಮಾನಿಗಳು ಮಾಹಿ ಸದ್ಯ ನಿವೃತ್ತಿ ಘೋಷಿಸಬಾರದು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಧೋನಿ ನಿವೃತ್ತಿ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.


ಧೋನಿ ತಮಗೆ ಬೇಕಾದಾಗ ನಿವೃತ್ತಿ ನೀಡಲಿ. ಇದಕ್ಕೆ ಯಾರು ಕೂಡ ಒತ್ತಾಯ ಮಾಡಬಾರದು ಎಂಬುದು ಸಚಿನ್ ಅವರ ಅಭಿಪ್ರಾಯ. ಧೋನಿಯವರಿಗೆ ತಮ್ಮದೇ ಆದ ಕಟ್ಟುಪಾಡುಗಳಿವೆ. ಅವರಿಗೆ ಯಾವಾಗ ನಿವೃತ್ತಿ ತೆಗೆದುಕೊಳ್ಳಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಆದ್ದರಿಂದ ಯಾರೂ ಅವರನ್ನು ನಿವೃತ್ತಿ ನೀಡುವಂತೆ ಒತ್ತಾಯ ಮಾಡಬಾರದು ಮತ್ತು ಅವರಿಗೆ ತಮ್ಮ ನಿರ್ಧಾರ ತೆಗೆದುಕೊಳ್ಳೋಕೆ ಅವಕಾಶ ನೀಡಬೇಕೆಂದು ಮಾಸ್ಟರ್ ಬ್ಲಾಸ್ಟರ್ ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ದುಬೈನಿಂದ ಬೆಂಗಳೂರಿಗೆ ಆಗಮಿಸಿದ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ

ದುಬೈನಿಂದ ಬೆಂಗಳೂರಿಗೆ ಆಗಮಿಸಿದ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಬೆಂಗಳೂರು: ದುಬೈನಲ್ಲಿ...

ಬೆಂಗಳೂರುನಲ್ಲಿ ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ

ಬೆಂಗಳೂರುದಲ್ಲಿ ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ ಬೆಂಗಳೂರು: ನಗರದಲ್ಲಿ ಇಂದು...

ಇಸ್ರೇಲ್–ಇರಾನ್ ಯುದ್ಧ: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ವಾಪಾಸ್‌

ಇಸ್ರೇಲ್–ಇರಾನ್ ಯುದ್ಧ: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ವಾಪಾಸ್‌ ಬೆಂಗಳೂರು: ಇಸ್ರೇಲ್–ಇರಾನ್ ನಡುವಿನ...

ಅತೀ ಶೀಘ್ರದಲ್ಲಿ‌ ಸೆಲೆಬ್ರಿಟಿ ಪ್ರೋಬಾಲ್ ಮತ್ತು ವಾಲಿಬಾಲ್ ಟೂರ್ನಮೆಂಟ್

ಅತೀ ಶೀಘ್ರದಲ್ಲಿ‌ ಸೆಲೆಬ್ರಿಟಿ ಪ್ರೋಬಾಲ್ ಮತ್ತು ವಾಲಿಬಾಲ್ ಟೂರ್ನಮೆಂಟ್ ನಡೆಯಲಿದೆ. ಇದರ...