No menu items!
16.3 C
Munich
Wednesday, April 29, 2026

ಶುಭ್ ಮನ್ ಗಿಲ್ ಶತಕ ವೈಭವ ಹೇಗಿತ್ತು ನೋಡಿ…!

Must read

ನ್ಯೂಜಿಲ್ಯಾಂಡ್ ನಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ನಲ್ಲಿ‌ ರಾಹುಲ್ ದ್ರಾವಿಡ್ ಮಾರ್ಗದರ್ಶನದ‌ ಟೀಂ ಇಂಡಿಯಾ ಗೆಲುವಿನ ಓಟವನ್ನು ಮುಂದುವರೆಸಿದೆ.

ಇಂದು ಪಾಕಿಸ್ತಾನ್ ವಿರುದ್ಧ ಕ್ರೈಸ್ಟ್ ಚರ್ಚ್ ನ ಹ್ಯಾಗ್ಲೀ ಓವೆಲ್ ನಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ 203 ರನ್ ಗಳ‌ ಗೆಲುವು ದಾಖಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.


ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪೃಥ್ವಿ ಶಾ ನೇತೃತ್ವದ ಭಾರತ ಶುಭ್ ಮನ್ ಗಿಲ್ ಅವರ ಅಜೇಯ ಶತಕ ( 102) ರನ್ ಗಳ ಸಹಾಯದಿಂದ ನಿಗಧಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಭಾರತದ ಮಾರಕ ದಾಳಿಗೆ ತತ್ತರಿಸಿ 29.3 ಓವರ್ ಗಳಲ್ಲಿ ಕೇವಲ 69 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲಪ್ಪಿಕೊಂಡಿತು.


ಬ್ಯಾಟಿಂಗ್ ನಲ್ಲಿ ಭಾರತದ ಪರ ನಾಯಕ ಪೃಥ್ವಿ ಶಾ 41, ಮನ್ ಜೋತ್ ಕಾಲ್ರಾ 47, ಅನುಕುಲ್ ರಾಯ್ 33 ರನ್ ಕೊಡುಗೆ ನೀಡಿದರು.


ಬೌಲಿಂಗ್ ನಲ್ಲಿ ಇಶಾನ್ ಪೊರೆಲ್ 4, ಶಿವಸಿಂಗ್, ರಿಯಾನ್ ಪರಾಗ್ ತಲಾ 2 , ಅನುಕುಲ್ ರಾಯ್ ಮತ್ತು ಅಭಿಷೇಕ್ ಶರ್ಮಾ ತಲಾ‌ 1 ವಿಕೆಟ್ ಪಡೆದರು.


ಹೀಗೆ ಸಂಘಟಿತ ಹೋರಾಟದಿಂದ ಫೈನಲ್ ಪ್ರವೇಶಿಸಿದ ಭಾರತ ಫೆ.3 ರಂದು ಫೈನಲ್ ನಲ್ಲಿ ಆಸ್ಟ್ರೇಲಿಯಾ ವನ್ನು ಎದುರಿಸಲಿದೆ.
ಶುಭ್ ಮನ್ ಗಿಲ್ ಅವರ ಶತಕ ವೈಭವ ಹೇಗಿತ್ತು ಗೊತ್ತಾ?‌ ನೋಡಿ…
ವೀಡಿಯೋ ಕೃಪೆ: Sports Villas, Dailymotion

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article