ಬದುಕ ಬೆಳಗು

1
ಬದುಕ ಬೆಳಗು ಬದುಕು ಬದುಕಿನೊಳು ಬದುಕುವಾಸೆ ಬದುಕೇ ಬರಡಾದ ಬದುಕಿನೊಳು ಬದುಕನರಸುವ ಬದುಕ ಬದಲಾಯಿಸಿ ಬೆಸದ ಬದುಕಲಿ ಬದಲಿ ಬದುಕುವ ಬದುಕು ಬಿದಿರಿನಂಚಿನ ಬಿರುಕು ಬದುಕಲಿ ಬಂದಿಳಿದು ಬಿರುಗಾಳಿಯ ಬೀಸುವ ಬದುಕ ಬದುಕಿಸಲಾರದೆ ಬೆಚ್ಚಿತಿಂದು ಬದುಕು ಕಾವ್ಯದತ್ತನ ಬದುಕಲಿ ಬಸಿದ ಬೇಸಿಗೆಯು ಭಾಸ್ಕರನ ಬಣ್ಣಿಸಿ ಬರಡಾದಾಗ ಬದುಕೇ ಬದಲಾಗದೇ ಬಿರುಸಿನಿಂದಲಿ...

ಚಿಗುರು ಮೀಸೆ ಮಾಯೆ

1
ಹರೆಯದ ಹೊಳೆಯಲ್ಲಿ ಹಳೆಯದೆಲ್ಲಾ ಕಳೆಯದು ಬೆಳೆಯದೆಲ್ಲಾ ಬೆಳೆಯದು ಕೊಳೆಯ ಮಳೆಯ ಮನಕೆ ಸುರಿಸಿ ಮೆರೆಯುತಿರುವ ಮರುಳರ ವಯಸ್ಸಿನ ಅರಳುಮರಳಿದು ಉರುಳು ಕೊರಳ ಸುತ್ತಿ ನರಳುವ ಹೊತ್ತಿಗಾಗಲೇ ಮರೆವು ಪಡುವಣದ ಬಾಗಿಲ ಸರಿಸಿ ಓಡುತಿಹುದು ಕಾವ್ಯದತ್ತನ ಮೂಡಣದ ಹೊಸಬೆಳಕು ನವಹುರುಪಿನಿಂದಲಿ ಬಿಸಿರಕ್ತಕೆ ನೋವಿನೂಟವ ಬಡಿಸಿ ಜಗದ ಹೋರಾಟವ ಕಣ್ಣೆದುರಿಗೆ ತಂದಿಟ್ಟು ಮರೆಯಾದಾಗ ಮುಂದಿಹುದೆಲ್ಲಾ ಜಯದ ಹಾದಿಯೇ. ?ದತ್ತರಾಜ್...

ಕಿಚ್ಚೇ ಹುಚ್ಚು

0
ಅವರಿವರ ಹಂಗಿಸುವ ಇವರವರು ತನ್ನೆಸರಲೇ ರುಜು ಒತ್ತಿ ತನ್ನನ್ನೇ ದ್ವೇಷಿಸಲು ಸುಪಾರಿಕೊಟ್ಟಿಹನು ಕಂತೆ ಮಾತುಗಳ ತೂತು ಮಡಿಕೆಯೊಳು ಕಂಡಿದ್ದೆಲ್ಲಾ ಕೊಳಕು ಮೋರಿಯಾ ನೀರು ನಾರುತಿದೆ ಈ ಬದುಕು ಆದರೂ ಅನ್ಯರಿಗೆ ಕೆಡಕು ಬಯಸುತಿಹನು ಜಗ ಕಣ್ ಬಿಟ್ಟಾಗ ಕಣ್ ಮುಚ್ಚಿ ಲೋಕದಲಿ ಕುರುಡನೇ ಕುಬೇರನೆಂದವನು ಕೊನೆಗೊಂದುದಿನ...

ನಶ್ವರ

1
ನಶ್ವರ ಸರದಿಯಲಿ ಬಂದವನು ಬಲುಬೇಗ ನಿಂತವನು ಕಾಲುಸೋತವರ ಕಾಲೆಳೆದವನು ಕರುಣೆ ಇಲ್ಲದ ಎದೆಯೊಳಗೆ ಕರುಣಾನಟನಾದವನು ಬೆತ್ತಲೆಯಲೂ ಹಸಿಸುಳ್ಳ ನುಡಿದವನು ಹುಸಿ ನುಡಿಯ ಮಸಿ ಹಿಡಿದು ತಿಳಿದಂತೆ ಬರೆದವನು ಸರಸದಲೂ ವಿಷತಲೆಯ ವಿಷಯವ ಬಿತ್ತುವನು ಕಾರ್ಕೋಟಕ‌ವ ಮುದ್ದಾಡಿ ಎದೆಗಪ್ಪಿಸಿಕೊಂಡವನು ಕಣ್ಣೀರ ಕಡಲಲ್ಲೂ ಹಗೆಯ ಹೊಗೆಯಲಿ ಕೈಯ ಹಿಸುಕಿದವನ ಕಂಡ ಕಾವ್ಯದತ್ತನ ಮನವಿಂದು ನಗುತಿಹುದು ಕಾಲ ಚಕ್ರದ ಸುಳಿಗೆ...

ಹೊಸ ಬೆರಗು

0
"ಹೊಸ ಬೆರಗು" ಹೊಸತು ಹೊಸತು‌ ದಿನದಿನವೂ.. ಮಡಿಲ ಖುಷಿಯು ಬಾನೆತ್ತರಕೆ ಏರಿದಾಗ ಅದುವೇ ನನಸು..! ಆಸೆಯ ಗೋಪುರಕೆ ಗೋರಿಯಾ ಭಾಷೆಯು ತಾಕಿದಾಗ ಮತ್ತದೇ ಮುನಿಸು..!! ತಲೆಯ ಬಿಲದೊಳಗೆ ಹೇಳಲಾಗದ ಬಿರುಕು ಮೂಡಿಹುದು. ಮುರುಕು ಮನೆಯ ತಿರುಕನೊಬ್ಬ ತಲೆತಿರುಗಿ ಮರುಗುತಿಹನು..! ಭೂಕುಬೇರರ ಕಾಲೊಳಗೆ ಸಕ್ಕರೆಯು ಅಡಗಿ ಸಾವಿನಾ ಇರುವೆಯು ಶೂಲದಿಂದ ಇರಿಯುತಿಹುದು..!! ಸೊಬಗ...

ಮಾತಿಲ್ಲದ ಮೆರುಗು

1
ಗಿರವಿಗಿಟ್ಟಿದ್ದ ಗಡಿಯಾರ ಇಂದೇಕೋ ಮುಂದಿನ ದಿನವ ನೆನೆದು ಅಳುತ್ತಲಿತ್ತು ಯೌವ್ವನದ ಅಮಲಲ್ಲಿ ಅಂಬಿಗನಿಲ್ಲದ ದೋಣಿಯನೇರಿ ಕುಂತವನು ತಂತ್ರ-ಕುತಂತ್ರಗಳ ಮಂತ್ರಗಳ ಜಪಿಸುವ ಜಗವ ಶಪಿಸುತ ಕಾಲಹರಣವ ಮಾಡುತಲಿರುವ ಕಾವ್ಯದತ್ತ ನುಡಿವನಿಲ್ಲಿ ಮಾತು ಮಾತಿಗೆ ಜೋತು ಬೀಳುವ ಬದಲು ಮೌನದಿ ಕೂತು ಗೆಲುವ ಸೇತುವೆಯನೇರುವ ಯೋಜನೆಯ ರೂಪಿಸುವ. ✍?ದತ್ತರಾಜ್ ಪಡುಕೋಣೆ✍?

ಲೀಲಾಭಾಸ್ಕರ

0
ಲೀಲಾಭಾಸ್ಕರ ಓ ಭಾಸ್ಕರ.. ಓ ಆರ್ಯಮ.. ಓ ಶಕ್ರ, ಏನೀ ನಿನ್ನ ಲೀಲೆ ಜೀವಜಾತನು ನೀ ಪ್ರಾಣಧಾತನು ನೀ ಈ ಜಗದುಸಿರೇ ನೀ ದಿನ ಹರಸುವೆ - ದಿನ ಬೆಳಗುವೆ ಜಗ ನಗಿಸುವೆ ಅಂಧಕಾರವ ಅಳಿಸಿ ಹೊಸ ಆಶಾಕಿರಣವ ಹರಿಸುವೆ ಮೂಳೆ ಮಾಂಸಕೆ ಉಸಿರನಿತ್ತವನು ನೀ ಪಾಲಿಸಿ ಹೆಸರನಿತ್ತವ ನೀ ಕರ್ಮಾದಾನುಸಾರಕೆ...

ಜಗದೊಡಲ ಜಯ

0
ಜಗದೊಡಲ ಜಯ ಹುಟ್ಟು ಸಾವಿನ ನಟ್ಟನಡುವೆ ಬಿಟ್ಟು ಹೋದ ಮೂಟೆ ಎರಡೇ ಏಳು ಗೋಳು.. ಎದೆಗೆ ನಾಟಿದ ಮಾತಿನ ಈಟಿ ಏಟಿಗೆ ಪಾಠ ಕಲಿಸಿದ ನೋಟವೊಂದೆಯೇ ನಗುವು. ಜಗವು ಜೇನಾಗಿ ಅದರೊಳಗಿನ ಹುಳುವು ನೋವಾಗಿ ಹಗೆಯ ಸಾಧಿಸುತಿಹುದು ಹೂವ ಮನಸಿನ ಶಿವನ ನೆನೆದು ಕಲ್ಲನೆಸೆದವರ ಮನೆಗೆ ಹೂವ ತಂದಿಟ್ಟು ಮುಗುಳ್ನಗುವ...

ಮಸೀದಿ ಮಂದಿರದ ಬಾಗಿಲಲಿ

0
ಮಸೀದಿ ಮಂದಿರದ ಬಾಗಿಲಲಿ ಎತ್ತ ನೋಡಲಿ ಜಗದ ಕತ್ತಲು ಸುತ್ತಲೂ ಸುತ್ತುತಿಹುದು ತಿಲಕವಿಟ್ಟವನು ಮಾತಿನ ತಲವಾರು ಹಿಡಿದಿಹನು ಮೀಸೆ ಇಲ್ಲದ ಗಡ್ಡವು ಹೊಸ ಪಕ್ಷದ ಪೋಷಾಕು ತೊಟ್ಟಿಹುದು ಏನಿದೇನಿದು.. ರಣರಂಗವೋ - ಸಂಗದಿ ಸಂಧಿಸಿಹ ಗುಲಾಮಗಿರಿಯ ಹೋರಾಟವೋ ನಾನರಿಯೆ. ಚೂರಿ ಇರಿದವ ರಂಗನಾದರೆ ತುಪಾಕಿ ಹಿಡಿದವ...

ಹಣವು ಹೆಣವಾದಾಗ

ಹೆಣವೇ ಹಣವ ನೋಡಿ ನಕ್ಕು ಮಸಣ ಸೇರಿತು ಉರುಳೋದ ಕಾಲದ ಕನಸಲ್ಲೇ ಕನವರಿಸುತ ಮರೆಯಾದ ಮರೆಯಾಗಿಸುವ ಕಾಲದಿ ಕಂಡಿದ್ದೆಲ್ಲ ಕಾರ್ಮೋಡ-ಬೆಳ್ಮೋಡ ಎತ್ತ ಸಾಗಿದರೂ ಮತ್ತೆ ಬಾನೆತ್ತರವ ಬಾಚಿ ಸೇರದು ಮಣ್ಣ ಮಹಿಮೆಗೆ ಸೋತು ಬಿಂದು ರೂಪದಿ ಬಂದಿಳಿದು ಬಂಧ-ಸಂಬಂಧಗಳ ಹಸಿರುಳಿಸಿ ಭೂಗರ್ಭ ಸೇರಿತು ಕಾಂಚಾಣದ ಕುರುಡು ತಲೆಯೆಂಬ...

Stay connected

0FansLike
3,912FollowersFollow
0SubscribersSubscribe

Latest article

ನಾನು ಗೆದ್ದ ನಂತರ ಬಿ.ವೈ ವಿಜಯೇಂದ್ರ ತಮ್ಮ ಹುದ್ದೆಗೆ ರಾಜೀನಾಮೆ ಕೊಡ್ತಾರೆ !

ಶಿವಮೊಗ್ಗ: ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಚಿತ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತಿಲ್ಲ. ನಾನು ಗೆದ್ದ ನಂತರ ವಿಜಯೇಂದ್ರ ತಮ್ಮ ರಾಜ್ಯಾಧ್ಯಕ್ಷರ ಹುದ್ದೆಗೆ ರಾಜೀನಾಮೆ ಕೊಡುವುದು ನಿಶ್ಚಿತ ಎಂದು ಮಾಜಿ ಸಚಿವ ಕೆ.ಎಸ್...

ಕುಮಾರಸ್ವಾಮಿಯವರು ಆರೋಗ್ಯವಂತರಾಗಿ ಬರಲಿ ಚರ್ಚೆ ಮಾಡೋಣ !

ಬೆಂಗಳೂರು: ಕುಮಾರಸ್ವಾಮಿಯವರಿಗೆ ಆರೋಗ್ಯ ಸರಿಯಿಲ್ಲ, ಶಸ್ತ್ರಚಿಕಿತ್ಸೆಗಾಗಿ ತೆರಳಿದ್ದಾರೆ, ಆವರು ಬೇಗ ಗುಣಮುಖರಾಗಲಿ ಅಂತ ಹಾರೈಸುತ್ತೇನೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು,...

ಮಾರ್ಚ್ 22 ರಂದು ಮೂರನೇ ಪಟ್ಟಿ ಬಿಡುಗಡೆ: ಬಿ.ಎಸ್.ಯಡಿಯೂರಪ್ಪ

ನವದೆಹಲಿ: ಮೂರನೇ ಪಟ್ಟಿ ಬಿಡುಗಡೆ ಬಳಿಕ ರಾಜ್ಯದ್ಯಾಂತ ಪ್ರವಾಸ ಆರಂಭಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಅಂತಿಮವಾಗಿ...